ಹುಬ್ಬಳ್ಳಿ : ತಾಲೂಕಿನ ಬ್ಯಾಹಟ್ಟಿ ಗ್ರಾಮದಲ್ಲಿ ಮೇವಿನ ಬಣವಿಗೆ ಶುಕ್ರವಾರ ತಡರಾತ್ರಿ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದು ಅಪಾರ ಪ್ರಮಾಣದ ಜೋಳದ ಮೇವು ಸುಟ್ಟು ಕರಕಲಾಗಿದೆ.
ಬ್ಯಾಹಟ್ಟಿ ಗ್ರಾಮದ ನಿವಾಸಿಯಾದ ಬಸಪ್ಪ ತಮ್ಮಪ್ಪ ಹರಣಶಿಕಾರಿ ಅವರ ಜೋಳದ ಮೇವು ಹಾಗೂ ಗೋಧಿಯ ಹೊಟ್ಟಿಗೆ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಕರಕಲಾಗಿದೆ. ತಕ್ಷಣವೇ ಸ್ಥಳೀಯರೇ ಬೆಂಕಿ ನಂದಿಸಲು ಹರಸಾಹಸ ಪಟ್ಟರು.ನಂತರ ಹುಬ್ಬಳ್ಳಿ ಗ್ರಾಮಾಂತರ ಪೊಲೀಸ್ ಠಾಣಾ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

bigtvnews | Hubli Dharwad News | Kannada News | Karnataka News Hubli News | News In Hubli | Local news





