Breaking News

ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಗುಡೆನಕಟ್ಟಿ ಗ್ರಾಮದ ಸಮಗ್ರ ಅಭಿವೃದ್ಧಿ-ಶಾಸಕಿ ಶಿವಳ್ಳಿ

ಕುಂದಗೋಳ: ಮುಂಬರುವ ಚುನಾವಣೆ ಯಲ್ಲಿ ನಮ್ಮ ಪಕ್ಷ ಬಹುಮತ ಪಡೆದು ಅಧಿಕಾರಕ್ಕೆ ಬಂದರೆ ಗುಡೆನಕಟ್ಟಿ ಗ್ರಾಮವನ್ನು ಸಮಗ್ರ ಅಭಿವೃದ್ಧಿ ಮಾಡುವದಾಗಿ ಶಾಸಕಿ ಕುಸುಮಾವತಿ ಶಿವಳ್ಳಿ ಯವರು ಹೇಳಿದರು.
ಅವರು ತಾಲ್ಲೂಕಿನ ಗುಡೆನಕಟ್ಟಿ ಗ್ರಾಮದಲ್ಲಿ 80 ಲಕ್ಷ ರೂ ಗಳ ವಿವಿಧ ಕಾಮಗಾರಿ ಹಾಗೂ ಗುಡೆನಕಟ್ಟಿ ಅಲ್ಲಾಪೂರ ರಸ್ತೆಗೆ ಅಭಿವೃದ್ಧಿ ಕಾರ್ಯಕ್ಕೆ ಬಿಡುಗಡೆ ಯಾದ 50 ಲಕ್ಷ ರೂ ಗಳ ಅನುದಾನದ ಗುದ್ದಲಿ ಪೂಜೆ ನೇರವೆರಿಸಿ ಮಾತನಾಡಿದರು.

ಇದಕ್ಕೂ ಮೊದಲು ಮಾರುತಿ ದೇವಸ್ಥಾನ ಕ್ಕೆ ಮುಜರಾಯಿ ಇಲಾಖೆಯಿಂದ ಮಂಜೂರಾದ 10 ಲಕ್ಷ ರೂ ಗಳ ಅಭಿನಂದನಾ ಪತ್ರವನ್ನು ದೇವಸ್ಥಾನದ ಆಡಳಿತ ಮಂಡಳಿಗೆ ವಿತರಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ನೀಲವ್ವ ಹೊಸಳ್ಳಿ ತಾಯವ್ವ ಕೆಂಚಣ್ಣವರ ಶಂಕ್ರವ್ವ ಹೊಸಳ್ಳಿ ವಿಶಾಲ ಯೋಗಪ್ಪನವರ ಚಿದಾನಂದ ಕುಸುಗಲ ಮಾನಪ್ಪ ಬಡಿಗೇರ ಶಿವಲಿಂಗಪ್ಪ ಕಳಸಣ್ಣವರ ಚನ್ನಬಸಪ್ಪ ಕಟಿಕಾರ ಶಾಂತಪ್ಪ ಕುಸುಗಲ ಆನಂದ ಕಟ್ಟಿಕಾರ ಸತೀಶ್ ಹಿರೇಮಠ ಮಂಜುನಾಥ ತಟ್ಟಿ ಟೆಲಿ ರಾಘವೇಂದ್ರ ಕುಸುಗಲ್ ಜಗದೀಶ್ ಕಂಬಳಿ ಭೀಮಪ್ಪ ಪೂಜಾರ ಸಂತೋಷ್ ನಲ್ಲೂರ್ ರಾಘವೇಂದ್ರ ಕುಸುಗಲ್ ಬಸವರಾಜ ಕಮಲದಿನ್ನಿ ನೀಲಪ್ಪ ಕಂಬಳಿ ಇದ್ದರು.

Share News

About BigTv News

Check Also

ಕಾನೂನು ರಕ್ಷಕನೇ ಭಕ್ಷಕ..! ಪೋಕ್ಸೊ ಪ್ರಕರಣದಲ್ಲಿ ಪಿಎಸ್‌ಐ ಬಂಧನ…

ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ಆರೋಪ: ಪೋಕ್ಸೊ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಯ ಬಂಧನ, ಭಟ್ಕಳ: ಸಾರ್ವಜನಿಕರ ರಕ್ಷಣೆ ಮಾಡಬೇಕಿದ್ದ ಪೊಲೀಸ್ ಅಧಿಕಾರಿಯೊಬ್ಬನೇ …

Leave a Reply

Your email address will not be published. Required fields are marked *