ಹುಬ್ಬಳ್ಳಿ ಧಾರವಾಡದ ಜನ್ನತ ನಗರದ ಓಣಿಗಳಲ್ಲಿ ಮನೆ ಮನೆಗೆ ಕಾಂಗ್ರೆಸ್ ಯೋಜನೆಯ ಗ್ಯಾರಂಟಿ ಕಾರ್ಡ ವಿತರಿಸದ್ದು, ಈ ಕಾರ್ಯಕ್ರಮದಲ್ಲಿ ನೇತೃತ್ವ ವಹಿಸಿದ ಶ್ರೀಮತಿ ಕೀರ್ತಿ ಮೋರೆ ಅವರು ಕಾರ್ಡ ವಿತರಣೆಗೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರವು ಹಲವಾರು ಭಾಗ್ಯಗಳನ್ನು ನೀಡಿ ಬಡ ಜನರಿಗೆ ಆಸರೆಯಾಗಿದ್ದರು, ಆದರೆ ಬಿಜೆಪಿ ಸರಕಾರ ಯಾವುದೆ ಜನಪರ ಕೆಲಸ ಮಾಡದೇ ಕೇವಲ ಜಾತಿ ಧರ್ಮಗಳಲ್ಲಿ ವಿಷಬೀಜ ಬಿತ್ತುತ್ತಾ, ಬಡ ಜನರನ್ನು ನಿರ್ಲಕ್ಷಿಸಿದ್ದಾರೆ. ದಿನಬಳಕೆಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದ್ದು ಬಿಜೆಪಿ ಸರಕಾರ ಬಡವರ ಹೊಟ್ಟೆಯ ಮೇಲೆ ಬರೆ ಎಳೆಯುವ ಕೆಲಸ ಮಾಡುತ್ತಿದೆ. ಬಡನವರನ್ನುಇಂತಹ ನೋವುಗಳನ್ನಾ ಅರ್ಥ ಮಾಡಿಕೊಂಡ ಸಿದ್ಧರಾಮಯ್ಯನವರು ಹಾಗೂ ಡಿ.ಕೆ ಶಿವಕುಮಾರವರು, ಹೊಸದಾದ ಯೋಜನೆಯನ್ನು ರೂಪಿಸಿ ಪ್ರತಿ ಮನೆಯ ಹಿರಿಯ ಹೆಣ್ಣುಮಗಳಿಗೆ ಪ್ರತಿ ತಿಂಗಳು 2000 ರೂ ನೀಡುವ ಯೋಜನೆಯನ್ನು ಸಿದ್ಧಪಡಿಸಿದ್ದು ಹಾಗೂ ಪ್ರತಿ ಕುಟುಂಬಕ್ಕೂ 200 ಯುನಿಟ್ ವಿದ್ಯುತ್ ಉಚಿತ ನೀಡುತ್ತೇವೆ ಎಂದು ಈಗಾಗಲೇ ಘೋಷಿಸಿದ್ದಾರೆ. ಅದರಂತೆ ಈಗ ಆ ಯೋಜನೆಗಳ ಗ್ಯಾರಂಟಿ ಕಾರ್ಡ ನೀಡಿದ್ದಾರೆ, ತಾವೆಲ್ಲ ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಹಾಗೂ ಕಾಂಗ್ರೆಸನ ಕೈ ಬಲಪಡಿಸಬೇಕೆಂದು ಮಾತನಾಡಿದರು.
