ಬೆಂಗಳೂರು: ಇಸ್ರೋ ಚಂದ್ರಯಾನ 3 ಉಡಾವಣೆ ಮಾಡಿ ವಿಶ್ವದಲ್ಲೇ ದಾಖಲೆ ಬರೆದಿತ್ತ, ಅದಾದ ನಂತರ ಸೂರ್ಯನ ಅನ್ವೇಷಣೆಗೆ ಆದಿತ್ಯ ಎಲ್ 1 ಉಡಾವಣೆ ಮಾಡಿ ಅದರಲ್ಲೂ ಸಕ್ಸಸ್ ಆಗಿದ್ದ ಇಸ್ರೋ ಇದೀಗ ಶುಕ್ರಗ್ರಹದ ಮೇಲೆ ಅನ್ವೇಷಣೆ ಮಾಡುವುದಕ್ಕೆ ಮುಂದಾಗಿದೆ. ಆ ಮೂಲಕ ಭಾರತದಲ್ಲಿ ಮತ್ತೊಂದು ಮೈಲಿಗಲ್ಲು ಸೃಷ್ಟಿಸಲು ಸಜ್ಜಾಗಿದೆ 2028 ರ ವೇಳೆಗೆ ದಾಖಲೆ ಬರೆಯುವುದು ಖಚಿತವಾಗಿದೆ.
ಇಸ್ರೋ ಶುಕ್ರಗ್ರಹದ ಅನ್ವೇಷಣೆ ಮುಂದಾಗಿದ್ದು, ಇದಕ್ಕೆ ಸರ್ಕಾರವು ಕೈ ಜೋಡಿಸಿದೆ. 1200 ಕೋಟಿ ರೂ. ಪರವಾನಿಗೆಯನ್ನ ಸಹ ನೀಡಿದ್ದು, ಶುಕ್ರಗ್ರಹ ಉಡಾವಣೆಗೆ ಬೇಕಾದ ಸಿದ್ದತೆಯನ್ನ ವಿಜ್ಞಾನಿಗಳು ಶುರುಮಾಡಿದ್ದಾರೆ. ಅಂದಹಾಗೇ ಇಸ್ರೋ ಚಂದ್ರ, ಮಂಗಳಗ್ರಹ ಸೂರ್ಯನಿಗೆ ಸಂಬಂಧಿಸಿದಂತೆ ಹಲವು ಅನ್ವೇಷಣೆ ಮಾಡಿದೆ ಅದೇ ರೀತಿ ಶುಕ್ರಗ್ರಹದ ಮೇಲೆ ಸದ್ಯ ಅನ್ವೇಷಣೆ ಮಾಡಲು ಮುಂದಾಗುತ್ತಿದೆ. ಶುಕ್ರಗ್ರಹ ಭೂಮಿಗೆ ಹತ್ತಿರವಿರುವ ಗ್ರಹ ಇದು ಭೂಮಿಗೆ ಹತ್ತಿರದಲ್ಲಿದ್ದರು 4 ಸಾವಿರ ಕೋಟಿ ಕಿಲೋ ಮೀಟರ್ ವಾಪ್ತಿಯಲ್ಲಿದೆ. ಇದಕ್ಕೆ ಹೋಲಿಕೆ ಮಾಡಿದರೆ ಚಂದ್ರಗ್ರಹ 4 ಲಕ್ಷ ಕಿಲೋಮೀಟರ್ ದೂರದಲ್ಲಿದ್ದು, ಕೊಂಚ ಹತ್ತಿರದಲ್ಲಿದ್ದಾನೆ. ಆದರೆ ಈ ಶುಕ್ರಗ್ರಹ ಗಾತ್ರದಲ್ಲಿ ಭೂಮಿಯಷ್ಟೇ ದೊಡ್ಡದಾಗಿದ್ದರು, ಶುಕ್ರಗ್ರಹ ನರಕಸದೃಶವಾದ ಗ್ರಹವಾಗಿದೆ.
ಶುಕ್ರಗ್ರಹ ಮೇಲ್ಮೈ 450 ಸೆಂಟಿ ಗ್ರೇಯೆಟ್ ಉಷ್ಣಾಂಶ, ದಟ್ಟವಾದ ವಾತಾವರಣ ಹಾಗೂ ಕಾರ್ಬಾನ್ ಡೈಯಾಕ್ಸೈಡ್ ಇದೆ. ಈ ಕಾರಣದಿಂದಾಗಿ ಮನುಷ್ಯ ಎಂದಿಗೂ ಶುಕ್ರಗ್ರಹದಲ್ಲಿ ಇರಲು ಸಾಧ್ಯವಿಲ್ಲ. ಇಷ್ಟೊಂದು ಗಂಭೀರ ಪರಿಸ್ಥಿತಿಯಲ್ಲಿ ಶುಕ್ರಗ್ರಹ ಇರುವುದು ಯಾಕೆ ಎನ್ನುವುದನ್ನ ತಿಳಿದುಕೊಳ್ಳಲು ಹಲವು ದೇಶಗಳು ಪ್ರಯತ್ನ ಪಟ್ಟಿವೆ. ಆದರೆ ಭಾರತ ಶುಕ್ರಗ್ರಹದ ಮೇಲ್ಮೈನ ಪ್ರಕ್ರಿಯೆಗಳು, ಸಕ್ರಿಯ ಅಗ್ನಿಪರ್ವತ ಪ್ರದೇಶಗಳು ಮತ್ತು ಲಾವಾ ಹರಿವು ಸೇರಿದಂತೆ ಹೆಚ್ಚು ಆಳವಿಲ್ಲದ ಭೂಗರ್ಭ ಸ್ತರಗಳ ಕುರಿತಾದ ತನಿಖೆ, ವಾತಾವರಣದ ರಚನೆ, ಸಂಯೋಜನೆ ಮತ್ತು ಕ್ರಿಯಾಶೀಲತೆಯ ಅಧ್ಯಯನ ಹಾಗೂ ಶುಕ್ರನ ಅಯಾನುಗೋಳದ ಜತೆಗಿನ ಸೌರ ವಾಯುವಿನ ಮುಖಾಮುಖಿಯ ಬಗ್ಗೆ ತಿಳಿದುಕೊಳ್ಳಲು ಇಸ್ರೋ ಶುಕ್ರಯಾನ ಯೋಜನೆಯನ್ನ ರೂಪಿಸಿದ್ದು, 2028 ಮಾರ್ಚ್ ಅಂತ್ಯದ ವೇಳೆಗೆ ರಾಕೆಟ್ ಉಡಾವಣೆ ಮಾಡಲು ಸಜ್ಜಾಗುತ್ತಿದೆ.
ಇನ್ನು ಶುಕ್ರಗ್ರಹ ಉಡಾವಣೆ ಮಾಡಿದ 128 ದಿನಗಳಲ್ಲಿ ಭೂಮಿಯಿಂದ ಶುಕ್ರಗ್ರಹವನ್ನ ರಾಕೆಟ್ ತಲುಪಲಿದ್ದು, ಈ ಶುಕ್ರಗ್ರಹಯಾನವನ್ನ ಮಾಡಲು ಚಂದ್ರಯಾನ 3 ಬಳಕೆ ಮಾಡಿದ ರಾಕೆಟ್ನ್ನು ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ಸದ್ಯ ಶುಕ್ರಯಾನ ಸಕ್ಸಸ್ಗೆ ವಿಜ್ಞಾನಿಗಳು ಸಿದ್ದತೆ ಮಾಡುತ್ತಿದ್ದಾರೆ.
ಇನ್ನು ವಿಜ್ಞಾನ ಲೋಕದಲ್ಲಿ ಭಾರತ ದಾಖಲೆಯ ಮೇಲೆ ದಾಖಲೆ ಬರೆಯುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಶುಕ್ರಗ್ರಹದ ಬಗ್ಗೆ ಇಸ್ರೋ ಅನ್ವೇಷಣೆ ಮಾಡಲು ಮುಂದಾಗುತ್ತಿರುವುದರಿಂದ ಹಲವು ವಿಚಾರ ತಿಳಿದುಕೊಳ್ಳಬಹುದು ನಮ್ಮ ವಿಜ್ಞಾನಿಗಳು ಇದರಲ್ಲಿ ಯಶಸ್ವಿಯಾಗಲಿ ಅಂತ ಸಿಲಿಕಾನ್ ಮಂದಿ ಹೇಳುತ್ತಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

