ಸಿದ್ದಾಪುರ: ಮಾಜಿ ಪ್ರೇಯಸಿ ಹೆಸರಿನಲ್ಲಿ ವಾಟ್ಸ್‌ಆಯಪ್ ಮತ್ತು ಇನ್‌ಸ್ಟಾಗ್ರಾಂ ಮೂಲಕ ಚಾಟ್ ಮಾಡಿ ಲಕ್ಷಾಂತರ ರೂಪಾಯಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹೊಸಂಗಡಿ ಗ್ರಾಮದ ದಿವ್ಯ ನಾಯ್ಕ ವಂಚಿಸಿದ ಮಹಿಳೆ. ದಿವ್ಯ ಅವರ ಮಾವನ ಮಗಳಾದ ಅನುಷಾ ಹಾಗೂ ರವೀಂದ್ರ ಅವರ ನಡುವೆ ಪ್ರೀತಿ ಬೆಳೆದಿತ್ತು. ಮನೆಯವರಿಗೆ ಈ ವಿಚಾರ ತಿಳಿದ ಅನಂತರ ಇಬ್ಬರು ದೂರವಾಗಿದ್ದರು. ಬಳಿಕ ಅನುಷಾ ಬಳಸುತ್ತಿದ್ದ ಮೊಬೈಲ್ ನಂಬರನ್ನು ದಿವ್ಯ ಉಪಯೋಗಿಸಿಕೊಂಡು ರವೀಂದ್ರ ಅವರಿಗೆ ಮೆಸೇಜ್ ಕಳುಹಿಸುತ್ತಿದ್ದಳು. ಕಾಲ್ ಮಾಡುವುದಾಗಲಿ, ರಿಸೀವ್ ಮಾಡುವುದಾಗಲಿ ಮಾಡುತ್ತಿರಲಿಲ್ಲ. ತನ್ನ ಮಾಜಿ ಪ್ರೇಯಸಿ ಎಂದು ನಂಬಿದ ರವೀಂದ್ರ ದಿವ್ಯ ಕಳುಹಿಸುತ್ತಿದ್ದ ವಿವಿಧ ವ್ಯಕ್ತಿಗಳ ಸ್ಕ್ಯಾನರ್‌ಗಳಿಗೆ ಸುಮಾರು 1,80,200 ರೂ. ಹಣವನ್ನು ಕಳುಹಿಸಿದ್ದರು. ಸಂಶಯಗೊಂಡ ರವೀಂದ್ರ ಕೊನೆಗೆ ಅನುಷಾ ಅವರನ್ನು ಹುಡುಕಿಕೊಂಡು ಮನೆಗೆ ಹೋದಾಗ ವಂಚನೆಗೆ ಒಳಗಾದ ವಿಷಯ ಬೆಳಕಿಗೆ ಬಂತು. ರವೀಂದ್ರ ಅವರು ವಂಚಿಸಿದ ದಿವ್ಯ ಅವರ ವಿರುದ್ಧ ಅಮಾಸೆಬೈಲು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

