Breaking News

ಮಂಗಳೂರು | ಮಾದಕ ವಸ್ತು ಸೇವನೆ ಮಾಡಿದ ಆರೋಪ: 9 ಮಂದಿ ಸೆರೆ

ಮಂಗಳೂರು: ನಗರ ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ ಮಾದಕ ವಸ್ತು ಸೇವಿಸಿ ಸಾರ್ವಜನಿಕರಿಗೆ ತೊಂದರೆ ನೀಡಿದ ಆರೋಪದಡಿ ಪೊಲೀಸರು ಒಟ್ಟು 9 ಮಂದಿಯನ್ನು ಬಂಧಿಸಿದ್ದಾರೆ. ಪಾಂಡೇಶ್ವರ, ಕದ್ರಿ, ಕೊಣಾಜೆ ಹಾಗೂ ಉಳ್ಳಾಲ ಠಾಣೆ ಪೊಲೀಸರು ಪ್ರತ್ಯೇಕ ಪ್ರಕರಣಗಳಲ್ಲಿ ಈ ಬಂಧನ ನಡೆಸಿದ್ದಾರೆ. ಸೆ.9ರಂದು ಅಬ್ದುಲ್ ತೌಫಿಕ್ ಹಾಗೂ ಸೆ.10ರಂದು ರಿತುಲ್ ಎಸ್. ಚಂದ್ರನ್, ಅಬ್ದುಲ್ಲಾ, ಅಭಯ್ ಕೃಷ್ಣ, ಧೀರಾಜ್ ಶೆಟ್ಟಿ ಮತ್ತು ನಂದಿತ್ ಎಸ್. ಬೆಳ್ಚಡ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಉಳ್ಳಾಲ ಠಾಣೆ ಪೊಲೀಸರು ಜಾಹೀರ್ ಜುಬೈರ್, ಹಿಶಾಮ್ ನಿಸಾರ್ ಹಾಗೂ ಅಮಲ್ ಸಜಿ ಅವರನ್ನು ಬಂಧಿಸಿದ್ದಾರೆ. ವೈದ್ಯಕೀಯ ಪರೀಕ್ಷೆಯಲ್ಲಿ ಆರೋಪಿಗಳು ಮಾದಕ ವಸ್ತು ಸೇವಿಸಿರುವುದು ದೃಢಪಟ್ಟಿದೆ. ಬಂಧಿತರ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Share News

About BigTv News

Check Also

ಹಾರ್ನ್ ಹೊಡೆದಿದ್ದಕ್ಕೆ ಕ್ಯಾಬ್ ಚಾಲಕನ ಮೇಲೆ ಹಲ್ಲೆ ; ಯುವಕರ ಮಾರಾಮಾರಿ ವಿಡಿಯೋ ವೈರಲ್!

ಬೆಂಗಳೂರು : ಸಿಗ್ನಲ್‌ನಲ್ಲಿ ಹಾರ್ನ್ ಹೊಡೆದ ವಿಚಾರಕ್ಕೆ ಇಬ್ಬರು ಬೈಕ್ ಸವಾರರು ಕ್ಯಾಬ್ ಚಾಲಕನ ಮೇಲೆ ಹಲ್ಲೆ ನಡೆಸಿರುವ ಘಟನೆ …

Leave a Reply

Your email address will not be published. Required fields are marked *