Breaking News

ಬೆಂಗಳೂರಲ್ಲಿ ಕೇವಲ 600 ರೂಪಾಯಿಗೆ, ಗಾರೆ ಕೆಲಸ ಮಾಡ್ತಿದ್ದ ವ್ಯಕ್ತಿಯ ಬರ್ಬರ ಹತ್ಯೆ : ಹಂತಕ ಅರೆಸ್ಟ್!

ಬೆಂಗಳೂರು: ಕೇವಲ ₹600 ಮೌಲ್ಯದ ಮೊಬೈಲ್ ವಿಚಾರಕ್ಕೆ ಗಾರೆ ಕೆಲಸ ಮಾಡುತ್ತಿದ್ದ ಮಂಜು ಅಲಿಯಾಸ್ ಕೋಳಿ ಮಂಜು ಎಂಬಾತನನ್ನು ದೊಣ್ಣೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ವಿದ್ಯಾಪೀಠ ಸರ್ಕಲ್ ಬಳಿ ನಡೆದಿದೆ. ಕೊಲೆ ಆರೋಪದ ಮೇಲೆ ಪಳನಿ ಎಂಬಾತನನ್ನು ಅಚ್ಚುಕಟ್ಟು ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಂಜು ಬಳಿ ಪಳನಿ ತನ್ನ ಮೊಬೈಲ್‌ ಫೋನ್‌ ಅಡಮಾನ ಇಟ್ಟಿದ್ದ ಎನ್ನಲಾಗಿದೆ. ಮದ್ಯ ಸೇವನೆಗಾಗಿ ಮೊಬೈಲ್ ಅಡಮಾನ ಇಟ್ಟಿದ್ದ ಪಳನಿ, ಹಣ ಅಥವಾ ಮೊಬೈಲ್ ವಾಪಸ್ ನೀಡುವಂತೆ ಮಂಜುವಿನೊಂದಿಗೆ ಜಗಳವಾಡಿದ್ದಾನೆ. ಈ ವಿಚಾರವಾಗಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು, ಕೋಪಗೊಂಡ ಪಳನಿ ದೊಣ್ಣೆಯಿಂದ ಮಂಜುವಿನ ತಲೆಗೆ ಹೊಡೆದಿದ್ದಾನೆ ಎಂದು ಆರೋಪಿಸಲಾಗಿದೆ. ತೀವ್ರ ರಕ್ತಸ್ರಾವದಿಂದ ಮಂಜು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿ, ಆರೋಪಿಯನ್ನು ಬಂಧಿಸಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

Share News

About BigTv News

Check Also

ಸಿಸಿಬಿ ಪೊಲೀಸರ ಕಾರ್ಯಾಚರಣೆ: ಬೆಂಗಳೂರಿನಲ್ಲಿ 30 ಲಕ್ಷ ಮೌಲ್ಯದ ನಕಲಿ ಸಿಗರೇಟ್ ಜಪ್ತಿ

ಬೆಂಗಳೂರು: ಸಿಸಿಬಿ ಹಾಗೂ ಉಪ್ಪಾರಪೇಟೆ ಪೊಲೀಸರು ಪ್ರತ್ಯೇಕ ಕಾರ್ಯಾಚರಣೆ ನಡೆಸಿ ಒಟ್ಟು ₹30 ಲಕ್ಷ ಮೌಲ್ಯದ ನಕಲಿ ಸಿಗರೇಟ್‌ಗಳನ್ನು ಜಪ್ತಿ …

Leave a Reply

Your email address will not be published. Required fields are marked *