Breaking News

ಪಶು ಆಹಾರದಲ್ಲಿ ಎಂ.ಸ್ಯಾಂಡ್​ ಮಿಶ್ರಣ? ಹಣಕ್ಕಾಗಿ ಮೂಕ ಜೀವಗಳಿಗೆ ಮಣ್ಣು ತಿನ್ನಿಸಿದ್ರಾ ಅಧಿಕಾರಿಗಳು?

ಕೋಲಾರ: ಕೆಎಂಎಫ್ ಪೂರೈಸುತ್ತಿರುವ ಪಶು ಆಹಾರದಲ್ಲಿ ಮರಳು ಮಿಶ್ರಣ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಆಹಾರ ಸೇವಿಸಿದ ಹಸುಗಳು ಭೇದಿಯಿಂದ ಬಳಲುತ್ತಿದ್ದು, ಕೆಲವು ಹಸುಗಳು ಮೃತಪಟ್ಟಿರುವ ಬಗ್ಗೆಯೂ ದೂರುಗಳು ಬಂದಿವೆ. ಮುಳಬಾಗಲು ತಾಲೂಕಿನಲ್ಲಿ ಈ ಸಮಸ್ಯೆ ಕಂಡುಬಂದಿದ್ದು, ಪಶು ಆಹಾರದ ಮೂಟೆಗಳಲ್ಲಿ 4ರಿಂದ 5 ಕೆಜಿ ಮರಳು ಮಿಶ್ರಣ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಈ ಕುರಿತು ಶಾಸಕ ಸಮೃದ್ಧಿ ಮಂಜುನಾಥ್ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಅಧಿಕಾರಿಗಳ ತಂಡ ಪಶು ಆಹಾರದ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿದೆ ಎಂದು ಕೋಮುಲ್ ಅಧ್ಯಕ್ಷ ನಂಜೇಗೌಡ ತಿಳಿಸಿದ್ದಾರೆ. ಪಶು ಆಹಾರದ ಗುಣಮಟ್ಟ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ರೈತರು ಒತ್ತಾಯಿಸಿದ್ದಾರೆ.

Share News

About BigTv News

Check Also

ಸಿಸಿಬಿ ಪೊಲೀಸರ ಕಾರ್ಯಾಚರಣೆ: ಬೆಂಗಳೂರಿನಲ್ಲಿ 30 ಲಕ್ಷ ಮೌಲ್ಯದ ನಕಲಿ ಸಿಗರೇಟ್ ಜಪ್ತಿ

ಬೆಂಗಳೂರು: ಸಿಸಿಬಿ ಹಾಗೂ ಉಪ್ಪಾರಪೇಟೆ ಪೊಲೀಸರು ಪ್ರತ್ಯೇಕ ಕಾರ್ಯಾಚರಣೆ ನಡೆಸಿ ಒಟ್ಟು ₹30 ಲಕ್ಷ ಮೌಲ್ಯದ ನಕಲಿ ಸಿಗರೇಟ್‌ಗಳನ್ನು ಜಪ್ತಿ …

Leave a Reply

Your email address will not be published. Required fields are marked *