ಆನೇಕಲ್: ಪತ್ನಿಯ ಅನೈತಿಕ ಸಂಬಂಧದ ವಿಚಾರ ತಿಳಿದು ಮನನೊಂದ ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಹೊರವಲಯದ ನೆರಿಗಾ ಗ್ರಾಮದಲ್ಲಿ ನಡೆದಿದೆ. ಆಟೋ ಚಾಲಕ ಮುನಿಕೃಷ್ಣ (35) ಮೃತ ವ್ಯಕ್ತಿ. ಮುನಿಕೃಷ್ಣ ಅವರ ಪತ್ನಿ ನಯನ ಹಾಗೂ ಸಂಬಂಧಿ ಕುಮಾರ್ ನಡುವೆ ಅನೈತಿಕ ಸಂಬಂಧವಿತ್ತು ಎನ್ನಲಾಗಿದೆ. ನಯನ ಗರ್ಭದಲ್ಲಿರುವ ಮಗು ತನ್ನದೆಂದು ಕುಮಾರ್ ಸಂದೇಶ ಕಳುಹಿಸಿದ್ದಲ್ಲದೆ, ಮುನಿಕೃಷ್ಣ ಅವರನ್ನು ಪದೇಪದೇ ಅವಮಾನಿಸಿ ಕಿರುಕುಳ ನೀಡುತ್ತಿದ್ದ ಎಂಬ ಆರೋಪ ಕೇಳಿಬಂದಿದೆ. ಆತ್ಮಹತ್ಯೆಗೂ ಮುನ್ನ ಮುನಿಕೃಷ್ಣ ತನ್ನ ಸಹೋದರನಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು ಎನ್ನಲಾಗಿದೆ. ನಯನ ಹಾಗೂ ಕುಮಾರ್ ವಿರುದ್ಧ ಕ್ರಮಕ್ಕೆ ಕುಟುಂಬಸ್ಥರು ಒತ್ತಾಯಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news
