Breaking News

ರಾಯಚೂರು: ಸಾಲಕ್ಕೆ ಸಿಗರೇಟ್‌ ಕೊಡಲ್ಲ ಎಂದ ಅಂಗಡಿ ಮಾಲೀಕ, ನಡುರಸ್ತೆಯಲ್ಲೇ ಕೊಚ್ಚಿ ಕೊಂ* ಹಂತಕ!

ರಾಯಚೂರು: ಸಾಲವಾಗಿ ಸಿಗರೇಟ್ ನೀಡದ ವಿಚಾರಕ್ಕೆ ಟೀ ಸ್ಟಾಲ್ ಮಾಲೀಕನನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ನಗರದ ಎಲ್‌ಬಿಎಸ್ ನಗರದಲ್ಲಿ ನಡೆದಿದೆ. ಮೃತರನ್ನು ನರಸಿಂಹಯ್ಯ ಶೆಟ್ಟಿ (40) ಎಂದು ಗುರುತಿಸಲಾಗಿದೆ. ಎಲ್‌ಬಿಎಸ್ ನಗರ ಸರ್ಕಲ್‌ನಲ್ಲಿ ಟೀ ಸ್ಟಾಲ್ ನಡೆಸುತ್ತಿದ್ದ ಅವರು, ಅಂಗಡಿ ಬಳಿ ಕಸ ಸ್ವಚ್ಛಗೊಳಿಸುತ್ತಿದ್ದ ವೇಳೆ ಆರೋಪಿ ತಿಲಕ್ ಸಿಂಗ್ ಏಕಾಏಕಿ ಮಚ್ಚಿನಿಂದ ದಾಳಿ ನಡೆಸಿದ್ದಾನೆ. ಸಿಗರೇಟ್‌ಗೆ ಹಣ ಕೇಳಿದ್ದಕ್ಕೆ ಆಕ್ರೋಶಗೊಂಡ ಆರೋಪಿ, ನರಸಿಂಹಯ್ಯ ಶೆಟ್ಟಿ ಮೇಲೆ ಏಳು ಬಾರಿ ಮಚ್ಚಿನಿಂದ ಹಲ್ಲೆ ನಡೆಸಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ. ಘಟನೆ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ.

Share News

About BigTv News

Check Also

ಸ್ನೇಹಿತನ ಗರ್ಲ್‌ಫ್ರೆಂಡ್‌ ರೇಪ್ ಮಾಡಿದವನಿಗೆ ಬುದ್ದಿಕಲಿಸಲು ಹೋಗಿ 11 ಮಂದಿ ಅಂದರ್

ಬೆಂಗಳೂರು: ಸ್ನೇಹಿತನ ಪ್ರೇಯಸಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಹಿನ್ನೆಲೆಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಮಹೇಂದ್ರ ಹಾಗೂ ಆತನ ಸ್ನೇಹಿತ ತರುಣ್‌ನನ್ನು …

Leave a Reply

Your email address will not be published. Required fields are marked *