Breaking News

ಮೇಕೆದಾಟು ಪಾದಯಾತ್ರೆ 5 ದಿನಕ್ಕೆ ಮಾತ್ರ ಸೀಮಿತ : ಡಿ.ಕೆ. ಸುರೇಶ್‌


ರಾಮನಗರ: ಮೇಕೆದಾಟು ಎರಡನೇ ಹಂತದ ಪಾದಯಾತ್ರೆಗೆ ಇದೇ 27ರಂದು ಬೆಳಿಗ್ಗೆ 9ಕ್ಕೆ ರಾಮನಗರದಲ್ಲಿ ಚಾಲನೆ ದೊರೆಯಲಿದ್ದು, 7 ದಿನಗಳ ಬದಲಿಗೆ 5 ದಿನಕ್ಕೆ ನಡಿಗೆಯನ್ನು ಸೀಮಿತಗೊಳಿಸಲಾಗುವುದು ಎಂದು ಕಾಂಗ್ರೆಸ್‌ ಸಂಸದ ಡಿ.ಕೆ. ಸುರೇಶ್‌ ತಿಳಿಸಿದರು.

ಭಾನುವಾರ ಸಂಜೆ ಕೆಂಗಲ್‌ನಲ್ಲಿ ನಡೆದ ಪಾದಯಾತ್ರೆ ಪೂರ್ವಭಾವಿ ಸಭೆಯ ವೇಳೆ ಪತ್ರಕರ್ತರಿಗೆ ಅವರು ಮಾಹಿತಿ ನೀಡಿದರು. ‘ಮೊದಲು ಬೆಂಗಳೂರಿನಲ್ಲೇ ಐದು ದಿನ ಪಾದಯಾತ್ರೆಗೆ ನಿರ್ಧರಿಸಿದ್ದೆವು. ಆದರೆ ರಾಜ್ಯ ಬಜೆಟ್‌ ಇರುವ ಕಾರಣ ಅಲ್ಲಿ ಮೂರು ದಿನ ಮಾತ್ರ ನೀರಿಗಾಗಿ ನಡಿಗೆ ನಡೆಯಲಿದೆ. ಮೊದಲ ದಿನ ರಾಮನಗರದಿಂದ ಬಿಡದಿ ಹಾಗೂ ಎರಡನೇ ದಿನ ಬಿಡದಿಯಿಂದ ಕೆಂಗೇರಿವರೆಗೆ ನಿಗದಿಯಂತೆ ಕಾರ್ಯಕ್ರಮ ನಡೆಯಲಿದೆ. ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಡಿ.ಕೆ. ಶಿವಕುಮಾರ್ ಸೇರಿದಂತೆ ರಾಜ್ಯ ಕಾಂಗ್ರೆಸ್ ನಾಯಕರು ಪಾಲ್ಗೊಳ್ಳುತ್ತಾರೆ’ ಎಂದು ಮಾಹಿತಿ ನೀಡಿದರು.

Share News

About admin

Check Also

ರೀಲ್ಸ್ ಲೋಕದ ಚೆಲುವೆ ಶವವಾಗಿ ಪತ್ತೆ : ಅತ್ತ ಗಂಡ ವಶಕ್ಕೆ, ಇತ್ತ ಕಂದನ ಆಕ್ರಂದನ.. ಏನಾಯ್ತು..?

ತುಮಕೂರು: ತಾಲೂಕಿನ ಯಲ್ಲಾಪುರ ಗ್ರಾಮದಲ್ಲಿ 24 ವರ್ಷದ ಸುಷ್ಮಿತಾ ಎಂಬ ಯುವತಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ಎರಡೂವರೆ …

Leave a Reply

Your email address will not be published. Required fields are marked *