Breaking News

ದೊಡ್ಡಬಳ್ಳಾಪುರಿಂದ ನಾಪತ್ತೆಯಾಗಿದ್ದ ದಲಿತ ಮುಖಂಡ ಧರ್ಮಸ್ಥಳದಲ್ಲಿ ಸಾವು

ದೊಡ್ಡಬಳ್ಳಾಪುರ: ಛಲವಾದಿ ಮಹಾಸಭಾ ತಾಲೂಕು ಘಟಕದ ಮಾಜಿ ಅಧ್ಯಕ್ಷ ಹಾಗೂ ದಲಿತ ಮುಖಂಡ ಸಿ. ಗುರುರಾಜಪ್ಪ ಅವರ ಮೃತದೇಹ ಧರ್ಮಸ್ಥಳದ ಶ್ರೀಮುಡಿ ಭವನದ ಆವರಣದಲ್ಲಿ ಪತ್ತೆಯಾಗಿದೆ. ದೊಡ್ಡಬಳ್ಳಾಪುರದ ಕಛೇರಿಪಾಳ್ಯ ನಿವಾಸಿಯಾಗಿದ್ದ ಗುರುರಾಜಪ್ಪ ಅವರು ಗುರುವಾರ ಬೈಕ್‌ನಲ್ಲಿ ತೆರಳಿದ ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದರು. ಕುಟುಂಬಸ್ಥರು ನಾಪತ್ತೆ ಪ್ರಕರಣ ದಾಖಲಿಸಲು ಪೊಲೀಸ್ ಠಾಣೆಗೆ ತೆರಳಿದಾಗ ಧರ್ಮಸ್ಥಳದಲ್ಲಿ ಅಪರಿಚಿತ ಶವ ಪತ್ತೆಯಾಗಿರುವ ಮಾಹಿತಿ ಲಭ್ಯವಾಗಿದೆ. ಮೃತದೇಹದ ಭಾವಚಿತ್ರದ ಆಧಾರದ ಮೇಲೆ ಗುರುರಾಜಪ್ಪ ಎಂದು ಗುರುತಿಸಲಾಗಿದೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಮರಣೋತ್ತರ ಪರೀಕ್ಷೆಯ ಬಳಿಕ ಸಾವಿನ ಕಾರಣ ತಿಳಿಯಲಿದೆ.

Share News

About BigTv News

Check Also

ಅಪ್ರಾಪ್ತ ವಯಸ್ಕ ಬಾಲಿಕಿಯ ಮೇಲೆ ಲೈಂಗಿಕ ದೌರ್ಜನ್ಯ: ಭಿನ್ನಕೋಮಿನ ಯುವಕನ ವಿರುದ್ಧ ಪೋಕ್ಸೋ ಕೇಸ್‌ ದಾಖಲು

ಕಲಬುರಗಿ: ಜೇವರ್ಗಿ ತಾಲೂಕಿನಲ್ಲಿ ಪ್ರಾಪ್ತ ವಯಸ್ಕಳಲ್ಲದ ಬಾಲಕಿಯೊಬ್ಬಳಿಗೆ ಮದುವೆಯಾಗುವುದಾಗಿ ನಂಬಿಸಿ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಇಸ್ಮಾಯಿಲ್ …

Leave a Reply

Your email address will not be published. Required fields are marked *