Breaking News

ಬೆಳ್ಳಂ ಬೆಳಿಗ್ಗೆ ಹೊತ್ತಿ ಉರಿದ ಕಟ್ಟಡ


ಬೆಂಗಳೂರು ಗ್ರಾಮಾಂತರ: ಬೆಳ್ಳಂ ಬೆಳಿಗ್ಗೆ ಬೆಂಕಿ ಅವಘಡ ಸಂಭವಿಸಿದ್ದು, ಕಟ್ಟಡ ಹೊತ್ತಿ ಉರಿದಿದೆ.ದೇವನಹಳ್ಳಿ ತಾಲೂಕಿನ ಬೂದಿಗೆರೆ ಗ್ರಾಮದ ಬಸ್ ನಿಲ್ದಾಣದಲ್ಲಿ ಘಟನೆ ನಡೆದಿದೆ.

ಶಾರ್ಟ್ ಸರ್ಕ್ಯೂಟ್​ನಿಂದ ಬೆಂಕಿ ಅವಘಡ ಶಂಕೆ ವ್ಯಕ್ತವಾಗಿದ್ದು, ಮಂಜುಶ್ರೀ ಗ್ಯಾಸ್ ಬುಕ್ಕಿಂಗ್ ಮತ್ತು ಕೇಬಲ್ ಬುಕ್ಕಿಂಗ್ ಕಛೇರಿ ಹೊತ್ತಿ ಉರಿದಿವೆ. ಬೆಂಕಿಯ ರುದ್ರ ನರ್ತನಕ್ಕೆ ಸಂಪೂರ್ಣ ಕಟ್ಟಡ ಹೊತ್ತಿ ಊರಿದಿದ್ದು, ಕಛೇರಿಯಲ್ಲಿದ್ದ ಪೀಠೋಪಕರಣಗಳೆಲ್ಲ ಸುಟ್ಟು ಭಸ್ಮವಾಗಿವೆ. ಬೆಂಕಿ ಅವಘಡದಿಂದ ಕೆಲ ಕಾಲ ಸುತ್ತಮುತ್ತಲಿನ ಜನರಲ್ಲಿ ಆತಂಕ ಆವರಿಸಿತ್ತು. ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಬೆಂಕಿ ನಂದಿಸುವಲ್ಲಿ ಯಶಸ್ವಿಗಿದ್ದಾರೆ. ಚನ್ನರಾಯಪಟ್ಟಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About admin

Check Also

ಮನೆಯಲ್ಲೇ ಪೆನ್ನಿ ಡ್ರಗ್ಸ್‌ ಮಾರಾಟ – ಆರೋಪಿಗಳನ್ನು ಹಿಡಿದುಕೊಟ್ಟ ಪೊಲೀಸ್ ಶ್ವಾನ ಆದಿತಿ!

ಬೆಳಗಾವಿ : ಕುಂದಾನಗರಿ ಬೆಳಗಾವಿ ಡ್ರಗ್ಸ್ ಅಡ್ಡೆ ಆಗ್ತಿದ್ಯಾ ಅನ್ನೋ ಅನುಮಾನ ಶುರುವಾಗಿದೆ. ಸುಳಗಾ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ಅಡಗಿಸಿಕೊಂಡಿದ್ದ …

Leave a Reply

Your email address will not be published. Required fields are marked *