Breaking News

ಜಾಮೀನಿನ ಮೇಲೆ ಹೊರಬಂದಿದ್ದ ಪೋಕ್ಸೋ ಆರೋಪಿ ಶವವಾಗಿ ಪತ್ತೆ!

ಕಲಬುರಗಿಯಲ್ಲಿ ಫೋಕ್ಸೋ ಕೇಸ್ ನಲ್ಲಿ ಜೈಲು ಪಾಲಾಗಿ ಬೇಲ್ ಮೇಲೆ ಆಚೆ ಬಂದಿದ್ದ ವ್ಯಕ್ತಿ ನಿಗೂಢ ರೀತಿಯಲ್ಲಿ ಶವವಾಗಿದ್ದಾನೆ. ಜಾಮೀನಿನ ಮೇಲೆ ಹೊರಬಂದಿದ್ದ ವ್ಯಕ್ತಿ ಶವವಾಗಿ ಪತ್ತೆಯಾಗಿದ್ದಾನೆ. ರೇವಣಸಿದ್ದಪ್ಪ ತಳಕೇರಿ(26) ಮೃತಪಟ್ಟವರು ಎಂದು ಗುರುತಿಸಲಾಗಿದೆ. ನೇಣು ಬಿಗಿದ ಸ್ಥಿತಿಯಲ್ಲಿ ರೇವಣಸಿದ್ದಪ್ಪ ಶವ ಪತ್ತೆಯಾಗಿದೆ. ಕಲಬುರಗಿ ಜಿಲ್ಲೆ ಕಾಳಗಿ ತಾಲೂಕಿನ ಹುಲಸಗೂಡ ಗ್ರಾಮದ ಹೊಲದಲ್ಲಿ ಘಟನೆ ನಡೆದಿದೆ. ಶವವಾಗಿ ಪತ್ತೆಯಾಗಿರುವ ರೇವಣಸಿದ್ದಪ್ಪ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದ್ದು, ಪ್ರೀತಿಸಿ ಮದುವೆಯಾಗಿದ್ದ ರೇವಣಸಿದ್ದಪ್ಪ ತಳಕೇರಿ ಫೋಕ್ಸೊ ಕೇಸ್ ನಲ್ಲಿ ಜೈಲು ಸೇರಿದ್ದನು ಎರಡು ವಾರಗಳ ಹಿಂದೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದನು. ಶನಿವಾರ ನೇಣು ಬಿಗಿದ ಸ್ಥಿತಿಯಲ್ಲಿ ರೇವಣಸಿದ್ದಪ್ಪ ಶವವಾಗಿ ಪತ್ತೆಯಾಗಿದ್ದಾನೆ. ರಠಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡಿದ್ದಾರೆ.

Share News

About BigTv News

Check Also

ಮನೆಯಲ್ಲೇ ಪೆನ್ನಿ ಡ್ರಗ್ಸ್‌ ಮಾರಾಟ – ಆರೋಪಿಗಳನ್ನು ಹಿಡಿದುಕೊಟ್ಟ ಪೊಲೀಸ್ ಶ್ವಾನ ಆದಿತಿ!

ಬೆಳಗಾವಿ : ಕುಂದಾನಗರಿ ಬೆಳಗಾವಿ ಡ್ರಗ್ಸ್ ಅಡ್ಡೆ ಆಗ್ತಿದ್ಯಾ ಅನ್ನೋ ಅನುಮಾನ ಶುರುವಾಗಿದೆ. ಸುಳಗಾ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ಅಡಗಿಸಿಕೊಂಡಿದ್ದ …

Leave a Reply

Your email address will not be published. Required fields are marked *