ಕೋಲಾರದ ಶ್ರೀನಿವಾಸಪುರ ತಾಲೂಕಿನ ಆರ್.ತಿಮ್ಮಸಂದ್ರ ಗ್ರಾಮದ ನವಿತಾ ಹಾಗೂ ಮೋಹನ್ ಪ್ರೀತಿಸಿ ಮದುವೆಯಾಗಿರುವ ಯುವ ಜೋಡಿ . ಇವರು ಮಾರ್ಚ್ 7 ರಂದು ತಿರುಪತಿಯಲ್ಲಿ ವಿವಾಹವಾಗಿದ್ದು , ಪ್ರೇಮ ವಿವಾಹಕ್ಕೆ ಯುವತಿ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ ಇದೀಗ ಪೊಲೀಸ್ ಠಾಣೆ ಮೊರೆ ಹೋಗಿದ್ದಾರೆ .
ಜೊತೆಗೆ ನವಿತಾ ಮಾವ ಲೋಕೇಶ್ ನಿಂದ ಕೊಲೆ ಬೆದರಿಕೆ ಆರೋಪವಿದ್ದು , ಮನೆಯವರ ವಿರುದ್ಧ ಕೋಲಾರ ಎಸ್ಪಿಡಿ ದೇವರಾಜ್‌ಗೆ ಯುವತಿ ದೂರು ನೀಡಿದ್ದಾಳೆ . ಪತಿ ಮೋಹನ್ ಅನ್ಯಜಾತಿಯವರಾದ ಕಾರಣ , ನಮ್ಮಮನೆಯವರು ವಿರೋಧ ಮಾಡುತ್ತಿದ್ದಾರೆ.ನಮಗೆ ಬದುಕಲು ರಕ್ಷಣೆ ನೀಡಬೇಕೆಂದು ನವಿತಾ ಪೊಲೀಸರಿಗೆ ಮನವಿ ಮಾಡಿದ್ದಾರೆ .
bigtvnews | Hubli Dharwad News | Kannada News | Karnataka News Hubli News | News In Hubli | Local news

