Breaking News

5 ನೇ ವರ್ಷದ ಶ್ರೀ ಕರಿಯಮ್ಮದೇವಿ ಜಾತ್ರಾ ಮಹೋತ್ಸವ


ಕುಂದಗೋಳ : 5 ನೇ ವರ್ಷದ ಶ್ರೀ ಕರಿಯಮ್ಮದೇವಿ ಜಾತ್ರಾ ಮಹೋತ್ಸವ , ಆಧ್ಯಾತ್ಮಿಕ ಪ್ರವಚನ , ಧರ್ಮಸಭೆಯಲ್ಲಿ ಇಂದು ಕುಂದಗೋಳ ವಿಧಾನಸಭಾ ಕ್ಷೇತ್ರ ಹುಬ್ಬಳ್ಳಿ ಮಂಡಲದ ವರೂರ ಗ್ರಾಮದಲ್ಲಿ ಬಸವರಾಜ ಕುಂದಗೋಳಮಠ ಪಾಲ್ಗೊಂಡು ದೇವಿಯ ಆಶೀರ್ವಾದ ಪಡೆದುಕೊಂಡರು.

ಶ್ರೀ ಡಾ.ಬಸವಾನಂದ ಸ್ವಾಮಿಗಳು ಆಧ್ಯಾತ್ಮಿಕ ಪ್ರವಚನವನ್ನು ನೀಡಿದರು.ಹಾಗೂ ಜೈನ್ ಮುನಿಗಳಾದ ಸ್ವಸ್ತಿಕ ಶ್ರೀ ಧರ್ಮಸೇನ ಪಟ್ಟಾಚಾರ್ಯ ಭಟ್ಟಾರಕರು ಸನ್ಮಾನಿಸಿ ಆಶೀರ್ವದಿಸಿದರು.ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಪುನಿತರಾದರು . ಈ ಸಂದರ್ಭದಲ್ಲಿ ಕಾರ್ಯಕ್ರಮದ ಗೌರವಾಧ್ಯಕ್ಷರು ಹಾಗೂ ಮಾಜಿ ಶಾಸಕ ಎಸ್.ಐ.ಚಿಕ್ಕನಗೌಡ್ರ , ಚಂದ್ರಕಾಂತ ಬೆಣ್ಣಿ , ಶೇಖರಯ್ಯ ಹಿರೇಮಠ , ಉದಯ ದೊಡಮನಿ , ವರೂರ ಗ್ರಾಮ ಪಂಚಾಯತಿ ಸದಸ್ಯರು , ಗ್ರಾಮಸ್ಥರು , ಹಿರಿಯರು , ಗ್ರಾಮದ ತಾಯಂದಿರು , ಪಾಲ್ಗೊಂಡಿದ್ದರು .

Share News

About admin

Check Also

ಅನ್ಯಕೋಮಿನ ಪಾಗಲ್ ಪ್ರೇಮಿಯಿಂದ ಟಾರ್ಚರ್ – ವಿದ್ಯಾರ್ಥಿನಿ ಸೂಸೈಡ್!

ಹಾಸನ: ಪ್ರೀತಿಸುವಂತೆ ಒತ್ತಾಯಿಸಿ ಕಿರುಕುಳ ನೀಡಿದ್ದಲ್ಲದೆ, ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಬೆದರಿಕೆ ಹಾಕಿದ ಆರೋಪದಿಂದ ಮನನೊಂದ 23 …

Leave a Reply

Your email address will not be published. Required fields are marked *