BigTv News
December 16, 2024
Breaking News, ಮಹಾರಾಷ್ಟ್ರ
ಮಹಾರಾಷ್ಟ್ರ: ಬಿಜೆಪಿ ನೇತೃತ್ವದ ಮಹಾರಾಷ್ಟ್ರ ಸರ್ಕಾರದ ಸಂಪುಟ ವಿಸ್ತರಣೆಯ ಪ್ರಮಾಣ ವಚನ ಸ್ವೀಕಾರ ಸಮಾರಂಭವು ಭಾನುವಾರ ನಾಗ್ಪುರದಲ್ಲಿ ಪ್ರಾರಂಭವಾಗಿದ್ದು, 39 ಮಂತ್ರಿಗಳು ಪ್ರಮಾಣ ವಚನ ಸ್ವೀಕರಿಸಿದರು. ಸಂಪುಟ ವಿಸ್ತರಣೆಯಲ್ಲಿ ಬಿಜೆಪಿಗೆ 19, ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಗೆ 11 ಮತ್ತು ಅಜಿತ್ ಪವಾರ್ ಅವರ ಎನ್ಸಿಪಿಗೆ 9 ಸಚಿವ ಸ್ಥಾನಗಳು ಸಿಕ್ಕಿವೆ. 33 ಶಾಸಕರು ಕ್ಯಾಬಿನೆಟ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರೆ, ಆರು ಶಾಸಕರು ರಾಜ್ಯ ಸಚಿವರಾಗಿ ಪ್ರಮಾಣ ವಚನ …
Read More »
BigTv News
December 12, 2024
Breaking News, ಮಹಾರಾಷ್ಟ್ರ
ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ (RBI) ಭವಿಷ್ಯದ ದೃಷ್ಟಿಯಿಂದ ಈ ವರ್ಷ ಅತ್ಯಧಿಕ ಚಿನ್ನ ಖರೀದಿಸಿದೆ. ಅಕ್ಟೋಬರ್‌ನಲ್ಲಿ ಆರ್‌ಬಿಐ ಖರೀದಿಸಿದ ಬಂಗಾರವು ಇತರ ಕೇಂದ್ರೀಯ ಬ್ಯಾಂಕ್‌ಗಳು ಖರೀದಿಸಿದ ಒಟ್ಟು ಚಿನ್ನದ ಶೇಕಡಾ 48ರಷ್ಟು ಎಂದು ವರದಿ ಆಗಿದೆ. ಪ್ರಸಕ್ತ ಅಕ್ಟೋಬರ್ ವರೆಗೆ ಆರ್‌ಬಿಐ ಬರೋಬ್ಬರಿ 77 ಟನ್ ಚಿನ್ನ ಖರೀದಿಸಿದೆ. ಈ ಎಲ್ಲ ಅಂಕಿಸಂಖ್ಯೆಗಳನ್ನು ನೋಡಿದರೆ ಚಿನ್ನದ ಬೇಡಿಕೆ ಎಷ್ಟಿದೆ ಎಂಬುದು ಗೊತ್ತಾಗುತ್ತದೆ. ಅಕ್ಟೋಬರ್ ಒಂದೇ ತಿಂಗಳಿನಲ್ಲಿ ಮೀಸಲು ಉದ್ದೇಶಕ್ಕಾಗಿ …
Read More »
BigTv News
November 18, 2024
Breaking News, ಮಹಾರಾಷ್ಟ್ರ
ಮುಂಬೈ: ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಮುಸ್ಲಿಮರಿಗೆ ಮೀಸಲು ನೀಡುವ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಹೇಳಿದ್ದಾರೆ. ಮಹಾರಾ ಷ್ಟ್ರದಲ್ಲಿ ಮಾತನಾಡಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಮುಸ್ಲಿಂ ಮೀಸಲು ಬಗ್ಗೆ ಚರ್ಚಿಸುತ್ತೇವೆ. ತೆಲಂಗಾಣ ದಲ್ಲಿ ಈಗಾಗಲೇ ಶೇ.4 ರಷ್ಟು ಮೀಸಲನ್ನು ಜಾರಿ ಮಾಡಲಾಗಿದೆ. ಮೊದಲಿಗೆ ಶೇ.5ರಷ್ಟು ಜಾರಿಮಾಡಲು ನಿರ್ಧರಿಸಲಾಗಿತ್ತು. ಇದು ಶೇ.50ರ ಮಿತಿಗಿಂತ ಹೆಚ್ಚಾಗುತ್ತದೆ ಎಂದು ಸುಪ್ರೀಂಕೋರ್ಟ್ ಆದೇಶಿದ ಬಳಿಕ ಶೇ.4ಕ್ಕೆ …
Read More »
BigTv News
November 17, 2024
Breaking News, ಮಹಾರಾಷ್ಟ್ರ
ಪುಣೆ: ಮುಂಬೈ -ಬೆಂಗಳೂರು ನಡುವೆ ಸಂಪರ್ಕ ಕಲ್ಪಿಸುವ ಎಕ್ಸ್ಪ್ರೆಸ್ ಹೆದ್ದಾರಿಯನ್ನು 55,000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಚಿಂಚ್ವಾಡದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಈ ಮಾರ್ಗವು ಪಿಂಪ್ರಿ, ಚಿಂಚ್ವಾಡಗಳಲ್ಲಿನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುತ್ತದೆ. ಮೊದಲ ಹಂತದಲ್ಲಿ ನಾಸಿಕ್ ಘಾಟದಿಂದ ಖೇಡ್ ನಡುವೆ 8,000 ಕೋಟಿ ರೂಪಾಯಿ ಖರ್ಚಿನಲ್ಲಿ ಹೆದ್ದಾರಿ …
Read More »
BigTv News
November 16, 2024
Breaking News, ಮಹಾರಾಷ್ಟ್ರ
ಸೋಲಾಪುರ: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೇಂದ್ರ ಸಾರಿಗೆ ಸಚಿವರಾದ ನಿತಿನ್ ಗಡ್ಕರಿ ಅವರು ಸೋಲಾಪುರ ವಿಮಾನ ನಿಲ್ದಾಣದಲ್ಲಿ ಆಕಸ್ಮಿಕ ಭೇಟಿಯಾಗಿ ಕುಶಲೋಪರಿ ವಿಚಾರಿಸಿದರು. ಆದರೆ ಇದು ಪೂರ್ವ ನಿಯೋಜಿತ ಭೇಟಿಯಾಗಿರಲಿಲ್ಲ. ಆಕಸ್ಮಿಕವಾಗಿ ಇಬ್ಬರೂ ಮುಖಾಮುಖಿಯಾಗಿದ್ದಾರೆ. ವಿಮಾನ ನಿಲ್ದಾಣದ ವಿಐಪಿ ಲಾಂಜ್‌ನಲ್ಲಿ ಕುಳಿತು ಉಭಯ ನಾಯಕರು ಪರಸ್ಪರ ಕುಶಲೋಪರಿ ನಡೆಸಿದ್ದಾರೆ.
Read More »
BigTv News
November 16, 2024
Breaking News, ಮಹಾರಾಷ್ಟ್ರ
ಮುಂಬೈ: ಸೋಯಾಬೀನ್, ಹತ್ತಿ ಮತ್ತು ಈರುಳ್ಳಿ ಬೆಳೆಯುವ ರೈತರ ಸಮಸ್ಯೆಗಳನ್ನು ಮಹಾ ವಿಕಾಸ್ ಆಘಾಡಿ (ಎಂವಿಎ) ಮೈತ್ರಿಕೂಟವು ಬಗೆಹರಿಸಲಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಭರವಸೆ ನೀಡಿದರು. ಎಂವಿಎಯು ಅಧಿಕಾರಕ್ಕೆ ಬಂದರೆ ಐತಿಹಾಸಿಕ ನಿರ್ಧಾರಗಳನ್ನು ತೆಗೆದುಕೊಳ್ಳಲಿದೆ. ಸೋಯಾಬೀನ್‌ಗೆ ಕನಿಷ್ಠ ಬೆಂಬಲ ಬೆಲೆ ಮತ್ತು ಬೋನಸ್ ಸೇರಿದಂತೆ ಪ್ರತಿ ಕ್ವಿಂಟಲ್‌ಗೆ ₹7,000 ನೀಡಲಿದೆ. ಈರುಳ್ಳಿಗೆ ನ್ಯಾಯಯುತ ಬೆಲೆ ನಿಗದಿಗೆ ಸಮಿತಿ ರಚಿಸಲಿದೆ ಮತ್ತು ಹತ್ತಿಗೂ ಸೂಕ್ತ ಎಂಎಸ್‌ಪಿ …
Read More »
BigTv News
November 10, 2024
Breaking News, ಮಹಾರಾಷ್ಟ್ರ
ಮಹಾರಾಷ್ಟ್ರ : ಕಾಂಗ್ರೆಸ್ ನ ಪ್ರಣಾಳಿಕೆಯಿಂದ ಮಹಾರಾಷ್ಟ್ರದ ಕಲ್ಯಾಣಕ್ಕೆ ಸಹಕಾರಿಯಾಗುತ್ತದೆ ಎಂದು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು. ಈ ಬಗ್ಗೆ ಮಹಾರಾಷ್ಟ್ರದಲ್ಲಿ ಮಾತನಾಡಿದ ಅವರು, ನಮ್ಮ 5 ಭರವಸೆಗಳು ಮಹಾರಾಷ್ಟ್ರದ ಎಲ್ಲರ ಕಲ್ಯಾಣಕ್ಕೆ ಸಹಕಾರಿಯಾಗುತ್ತವೆ. ಪ್ರತಿ ಕುಟುಂಬಕ್ಕೂ ವಾರ್ಷಿಕ ಸುಮಾರು ನೆರವು ಸಿಗುತ್ತದೆ ಎಂದು ಹೇಳಿದರು. ನಮ್ಮ ಮಹಾಲಕ್ಷ್ಮಿ ಯೋಜನೆಯಲ್ಲಿ ಎಲ್ಲಾ ಮಹಿಳೆಯರಿಗೆ ಆರ್ಥಿಕ ನೆರವು ನೀಡಲಾಗುವುದು, ಪ್ರತಿ ತಿಂಗಳು ತಲಾ 3000 ರೂ.ಗಳನ್ನು ನೀಡಲಾಗುವುದು ಈ …
Read More »
BigTv News
November 8, 2024
Breaking News, ಮಹಾರಾಷ್ಟ್ರ
ಮುಂಬೈ: ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ ಜಮ್ಮು-ಕಾಶ್ಮೀರದಿಂದ ಭಾರತದ ಸಂವಿಧಾನವನ್ನು ತೆಗೆದುಹಾಕಲು ಬಯಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದು, ಜಗತ್ತಿನ ಯಾವುದೇ ಶಕ್ತಿಯಿಂದಲೂ ಆರ್ಟಿಕಲ್ 370 ಮರುಸ್ಥಾಪನೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ನ. 20 ರಂದು ಮತದಾನ ನಡೆಯಲಿರುವ ಮಹಾರಾಷ್ಟ್ರದ ವಿಧಾನಸಭಾ ಕ್ಷೇತ್ರಗಳಲ್ಲಿ ನ.08 ರಂದು ಪ್ರಚಾರ ನಡೆಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಒಂದು ಜಾತಿಯ ವಿರುದ್ಧ ಮತ್ತೊಂದು ಜಾತಿಯನ್ನು ಎತ್ತಿಕಟ್ಟುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು …
Read More »
BigTv News
November 5, 2024
Breaking News, ಮಹಾರಾಷ್ಟ್ರ
ಮುಂಬೈ: 1990 ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ಸಂಜಯ್ ಕುಮಾರ್ ವರ್ಮಾ ಅವರು ಮಹಾರಾಷ್ಟ್ರದ ನೂತನ ಪೊಲೀಸ್ ಮಹಾನಿರ್ದೇಶಕರಾಗಿ (ಡಿಜಿಪಿ) ಇಂದು ನೇಮಕಗೊಂಡಿದ್ದಾರೆ. ಈ ಹಿಂದೆ ಇದ್ದ ಪೊಲೀಸ್ ವರಿಷ್ಠಾಧಿಕಾರಿ ರಶ್ಮಿ ಶುಕ್ಲಾ ಅವರನ್ನು ಚುನಾವಣಾ ಆಯೋಗ ಪದಚ್ಯುತಗೊಳಿಸಿದ ಒಂದು ದಿನದ ಬಳಿಕ ಐಪಿಎಸ್ ಅಧಿಕಾರಿ ಸಂಜಯ್ ಕುಮಾರ್ ವರ್ಮಾ ಅವರನ್ನು ನೂತನ ಪೊಲೀಸ್ ಮಹಾನಿರ್ದೇಶಕರನ್ನಾಗಿ ನೇಮಿಸಿದೆ. ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಮುನ್ನ ವಿಪಕ್ಷಗಳ ದೂರವಾಣಿ ಕದ್ದಾಲಿಕೆ ಆರೋಪದ ಮೇಲೆ …
Read More »
BigTv News
October 29, 2024
Breaking News, ಮಹಾರಾಷ್ಟ್ರ
ಮುಂಬೈ: ನಗರದಲ್ಲಿ ಡ್ರೋನ್‌ಗಳು, ರಿಮೋಟ್ ಕಂಟ್ರೋಲ್ ಮೈಕ್ರೋಲೈಟ್ ಏರ್‌ಕ್ರಾಫ್ಟ್‌ಗಳು, ಪ್ಯಾರಾಗ್ಲೈಡರ್‌ಗಳು ಮತ್ತು ಹಾಟ್ ಏರ್ ಬಲೂನ್‌ಗಳ ಹಾರಾಟವನ್ನು 30 ದಿನಗಳವರೆಗೆ ಮುಂಬೈ ಪೊಲೀಸರು ನಿಷೇಧಿಸಿದ್ದಾರೆ. ಪೊಲೀಸರು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (ಬಿಎನ್‌ಎಸ್‌ಎಸ್) ಸೆಕ್ಷನ್ 163ರ ಅಡಿಯಲ್ಲಿ ಈ ಆದೇಶವನ್ನು ಹೊರಡಿಸಿದ್ದಾರೆ. ಈ ಆದೇಶ ಅಕ್ಟೋಬರ್ 31ರಿಂದ ನವೆಂಬರ್ 29ರವರೆಗೂ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಉಗ್ರರು ಮತ್ತು ಸಮಾಜವಿರೋಧಿ ಶಕ್ತಿಗಳು ವಿವಿಐಪಿಗಳನ್ನು ಗುರಿಯಾಗಿಸಲು, ಪ್ರಾಣಕ್ಕೆ ಅಪಾಯವನ್ನುಂಟು ಮಾಡಲು …
Read More »