Breaking News

ಅಕ್ರಮ ಕೊಜೆ ಮಣ್ಣು ಸಾಗಾಟದ ಟಿಪ್ಪರ್‌ ಢಿಕ್ಕಿ, ವಿದ್ಯಾರ್ಥಿಗಳು ಗಂಭೀರ : ಅಜಿತ್‌ ಶೆಟ್ಟಿ ಯಾಳಹಕ್ಲು ಸೇರಿ 3 ಮಂದಿ ಅರೆಸ್ಟ್‌

ಉಡುಪಿ: ಕುಂದಾಪುರ ತಾಲೂಕಿನ ಬಳ್ಕೂರಿನಲ್ಲಿ ಅಕ್ಟೋಬರ್ 30ರಂದು ಎರಡು ಟಿಪ್ಪರ್‌ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಸ್ಕೂಟರ್‌ನಲ್ಲಿ ಕಾಲೇಜಿಗೆ ತೆರಳುತ್ತಿದ್ದ ಇಬ್ಬರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳಾದ ಮೊಹಮ್ಮದ್ ಶಯಾನ್ ಮತ್ತು ಮೊಹಮ್ಮದ್ ರಯಾನ್ ಅವರನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅತಿವೇಗದ ಟಿಪ್ಪರ್ ಮತ್ತೊಂದು ಟಿಪ್ಪರ್‌ಗೆ ಡಿಕ್ಕಿ ಹೊಡೆದು ಬಳಿಕ ಸ್ಕೂಟರ್‌ಗೆ ಗುದ್ದಿದೆ ಎನ್ನಲಾಗಿದೆ. ಪರವಾನಗಿ ಇಲ್ಲದೆ ಕೋಜೆ ಮಣ್ಣು ಸಾಗಿಸುತ್ತಿದ್ದ ಆರೋಪದಡಿ ಟಿಪ್ಪರ್ ಚಾಲಕರಾದ ನಾಗರಾಜ, ರತ್ವೀಜ್ ಹಾಗೂ ಯುವ ಕಾಂಗ್ರೆಸ್ ಮುಖಂಡ ಅಜಿತ್ ಶೆಟ್ಟಿಯನ್ನು ಪೊಲೀಸರು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.

Share News

About BigTv News

Check Also

ಹಾಸನಾಂಬ ದೇವಾಲಯದಲ್ಲಿ ಅಕ್ರಮ ಪ್ರವೇಶಕ್ಕೆ ಸಾಥ್: ಕರ್ತವ್ಯ ಲೋಪವೆಸಗಿದ SDA ಅಮಾನತು

ಹಾಸನ: ತನ್ನ ಗುರುತಿನ ಚೀಟಿಯನ್ನು ಅನ್ಯ ವ್ಯಕ್ತಿಗಳಿಗೆ ನೀಡಿ ಹಾಸನಾಂಬ ದೇವಸ್ಥಾನಕ್ಕೆ ಅನಧಿಕೃತ ಪ್ರವೇಶ ಕಲ್ಪಿಸಿದ ಆರೋಪದ ಮೇಲೆ ತಾಲೂಕು …

Leave a Reply

Your email address will not be published. Required fields are marked *