Breaking News

ಸರಕಾರಿ ಶಾಲೆಗೆ ಕೊಡುಗೆ ನೀಡಿದ ಶಿಕ್ಷಕರಿಗೆ ಸನ್ಮಾನ

ಧಾರವಾಡ:ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ದುರ್ಗಾಕಾಲನಿ ಶಾಲೆಗೆ 6000 ರೂ ಮೌಲ್ಯದ ವಿವಿಧ ವಸ್ತುಗಳನ್ನು ದಾನದ ರೂಪದಲ್ಲಿ ಕೊಡುಗೆ ನೀಡಿದ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ವ್ಯಾಕ್ಯೂಮ್ ಕ್ಲೀನರ್(ದೂಳು ಹಿರುವ ಯಂತ್ರ) ಹಾಗೂ ಕಂಪ್ಯೂಟರ್ ಸ್ಪೀಕರ್ ಮತ್ತು ಮೌಸ್ ದಾನವಾಗಿ ನೀಡಿದ ನವನಗರ ಕರ್ನಾಟಕ ಪಬ್ಲಿಕ್‌ ಶಾಲೆಯ ಪ್ರಧಾನಗುರು ಆಯ್.ಆಯ್.ಮುಲ್ಲಾನವರ ,ಹೆಬ್ಬಳ್ಳಿಯ ಸರಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಎಲ್.ಐ.ಲಕ್ಕಮ್ಮನವರ ರವರಿಗೆ ಶಾಲಾಭಿವೃದ್ಧಿ ಸಮಿತಿಯ ವತಿಯಿಂದ ಹಾಗೂ ಶಾಲಾ ಪ್ರಧಾನಗುರುಗಳು ಮತ್ತು ಸಿಬ್ಬಂದಿ ವರ್ಗದ ವತಿಯಿಂದ ಅಭಿನಂದನೆ ಸಲ್ಲಿಸಿ ಗೌರವಿಸಿದರು.

ಈ ಕಾರ್ಯಕ್ರಮದಲ್ಲಿ ಎಸ್.ಡಿ.ಎಮ್.ಸಿ ಸದಸ್ಯರಾದ ಅಶೋಕ ಗರಗದ,ಪಾಲಕರಾದ ಸವಿತಾ ತಿಟ್ಟೆನ್ನವರ ,ಸಿ.ಆರ್.ಪಿ ವಿಜಯಮಹಾಂತೇಶ ಹೊಸಕೇರಿ , ಶಾಲಾ ಪ್ರಧಾನಗುರುಗಳಾದ ಎನ್.ಬಿ.ದ್ಯಾಪೂರ, ಶಾಲಾ ಶಿಕ್ಷಕಿ ಸಿ.ಡಿ.ಬುಯ್ಯಾರ, ಶಾಲಾ ಅಡುಗೆ ಸಹಾಯಕಿ ನಿರ್ಮಲಾ ಕುಲಕರ್ಣಿ ಮುಂತಾದವರು ಉಪಸ್ಥಿತರಿದ್ದರು. ಎನ್.ಬಿ.ದ್ಯಾಪೂರ ಸ್ವಾಗತಿಸಿ,ನಿರೂಪಿಸಿದರು.ಸಿ.ಡಿ.ಬುಯ್ಯಾರ ವಂದಿಸಿದರು.*

Share News

About admin

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *