Breaking News

ದೇಶ-ವಿದೇಶ

2019 ನೇ ಸಾಲಿನ ನೊಬೆಲ್ ಶಾಂತಿ ಪುರಸ್ಕಾರಕ್ಕೆ ಪ್ರಧಾನಿ ಮೋದಿ ಹೆಸರು ಸೂಚನೆ

ಚೆನ್ನೈ: ಬಿಜೆಪಿ ನಾಯಕಿ ತಮಿಳಿಸೈ ಸೌಂದರರಾಜನ್ ಅವರು 2019 ನೇ ಸಾಲಿನ ನೊಬೆಲ್ ಶಾಂತಿ ಪುರಸ್ಕಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಹೆಸರನ್ನು ಸೂಚಿಸಿದ್ದಾರೆ. ವಿಶ್ವದ ಅತ್ಯಂತ ದೊಡ್ಡ ಆರೋಗ್ಯ ರಕ್ಷಣೆ ಕಾರ್ಯಕ್ರಮ ಆಯುಷ್ಮಾನ್ ಭಾರತ’ವನ್ನು ಆರಂಭಿಸಿದ್ದಕ್ಕಾಗಿ ಪ್ರಧಾನಿ ಮೋದಿ ಅವರ ಹೆಸರನ್ನು 2019 ನೇ ಸಾಲಿನ ನೊಬೆಲ್ ಶಾಂತಿ ಪುರಸ್ಕಾರಕ್ಕೆ ಸೂಚಿಸಿರುವುದಾಗಿ ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷರಾಗಿರುವ  ತಮಿಳಿಸೈ ಸೌಂದರರಾಜನ್ ನಿನ್ನೆ ತಿಳಿಸಿದ್ದಾರೆ. ತಮಿಳಿಸೈ ಸೌಂದರರಾಜನ್ ಪತಿ ಡಾ. ಪಿ. …

Read More »

ಕ್ರಿಮಿನಲ್ ಆರೋಪದ ಜನಪ್ರತಿನಿಧಿಗಳನ್ನು ಅನರ್ಹಗೊಳಿಸಬೇಕೇ ಅಥವಾ ಬೇಡವೇ ನಾಳೆ ಸುಪ್ರೀಂ ತೀರ್ಪು.

ನವದೆಹಲಿ: ಕ್ರಿಮಿನಲ್ ಕೇಸ್ ನ ಆರೋಪ ಎದುರಿಸುತ್ತಿರುವ ಸಂಸದರು ಮತ್ತು ಶಾಸಕರು ಆರೋಪ ಸಾಬಿತಾಗುವ ಮುಂಚೆಯೇ ಅನರ್ಹಗೊಳಿಸಬೇಕೇ ಅಥವಾ ಬೇಡವೇ ಎನ್ನುವುದರ ಕುರಿತ ಅಂತಿಮ ತೀರ್ಪನ್ನು ಸುಪ್ರೀಂಕೋರ್ಟ್ ಮಂಗಳವಾರದಂದು ನೀಡಲಿದೆ.  ಐದು ನ್ಯಾಯಾಧೀಶರನ್ನೋಳಗೊಂಡ ಸಂವಿಧಾನ ಪೀಠವು ಕ್ರಿಮಿನಲ್ ಹಿನ್ನೆಲೆಯಲ್ಲಿ ಶಾಸಕರನ್ನು ವಜಾಗೊಳಿಸಲು ಕೋರಿರುವ ಸಾರ್ವಜನಿಕ ಅರ್ಜಿಯನ್ನು  ಕೇಂದ್ರ ಸರ್ಕಾರ ವಿರೋಧಿಸಿದೆ.ಈಗ ಈ ಅರ್ಜಿಯನ್ನು ಸುಪ್ರೀಂ ಮಂಗಳವಾರದಂದು ನಿರ್ಧರಿಸಲಿದೆ. ಸದ್ಯ ಕ್ರಿಮಿನಲ್ ಕೇಸ್ ಗಳಲ್ಲಿ ಆರೋಪಿಗೆ ಶಿಕ್ಷೆ ಸಾಭಿತಾದ ನಂತರ ಮಾತ್ರ …

Read More »

ಕೇರಳದಲ್ಲಿ ಮತ್ತೆ ಮಳೆ;

ಕೊಚ್ಚಿ: ಭೀಕರ ಪ್ರವಾಹದಿಂದಾಗಿ ತತ್ತರಿಸಿದ್ದ ಕೇರಳದಲ್ಲಿ ಮತ್ತೆ ಮಳೆ ಆರಂಭವಾಗಿದ್ದು, ರಾಜ್ಯದ ಹಲವೆಡೆ ಎಲ್ಲೋ ಅಲರ್ಟ್(Yellow Alert) ಘೋಷಣೆ ಮಾಡಲಾಗಿದೆ. ಕೇರಳದ ಪಾಲಕ್ಕಾಡ್, ಇಡುಕ್ಕಿ, ತ್ರಿಶೂರ್ ಮತ್ತು ವೈನಾಡ್ ಜಿಲ್ಲೆಗಳಲ್ಲಿ ಸೆಪ್ಟೆಂಬರ್ 25ರಂದು ಯಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ ಎಂದು ಕೇರಳ ಸಿಎಂಒ ತಿಳಿಸಿದೆ. ಈ ಸ್ಥಳಗಳಲ್ಲಿ ಅತಿಹೆಚ್ಚು ಮಳೆ(64.4mm ನಿಂದ 124.4mm)ಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.  ಇದೇ ವೇಳೆ, ರಾಜ್ಯದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ …

Read More »

ಮೋದಿ ಸರ್ಕಾರದ ಈ ಯೋಜನೆಯಿಂದ 50 ಸಾವಿರ ರೂ. ಗಳಿಸಲು ಅವಕಾಶ, ನಾಳೆಯೇ ಕೊನೆ ದಿನ..

ನವದೆಹಲಿ: ಮೋದಿ ಸರ್ಕಾರ ನಿರಂತರವಾಗಿ ಉದ್ಯೋಗ ಅವಕಾಶಗಳನ್ನು ತೆರೆಯಲು ಪ್ರಯತ್ನಿಸುತ್ತಿದೆ. ಸರ್ಕಾರ ನಿರಂತರವಾಗಿ ಸಾಮಾನ್ಯ ವ್ಯಕ್ತಿಗೆ ಹಣವನ್ನು ಗಳಿಸಲು ಹೊಸ ಯೋಜನೆಗಳನ್ನು ಒದಗಿಸುತ್ತದೆ. ಇದರೊಂದಿಗೆ, ಯುವಕರಿಗೆ ಹೊಸ ರೀತಿಯ ಸ್ಪರ್ಧೆಗಳನ್ನು ಸರ್ಕಾರ ತರುತ್ತಿದೆ. ಈಗ ಇನ್ನೊಂದು ಹೊಸ ಸ್ಪರ್ಧೆಯ ಮೂಲಕ 50 ಸಾವಿರ ರೂಪಾಯಿಗಳನ್ನು ಗಳಿಸಲು ಯುವಜನರಿಗೆ ಮೋದಿ ಸರ್ಕಾರ ಅವಕಾಶ ನೀಡುತ್ತಿದೆ. ವಿಶೇಷ ವಿಷಯವೆಂದರೆ, ಅದಕ್ಕಾಗಿ ನೀವು ಎಲ್ಲಿಯೂ ಹೋಗಬೇಕಾದ ಅಗತ್ಯವಿಲ್ಲ ಅಥವಾ ಇದು ಕಷ್ಟಕರವಾದ ಕೆಲಸವೇನೂ ಅಲ್ಲ. …

Read More »

ಗಂಡ ಚೆನ್ನಾಗಿಲ್ಲ ಅಂತ ಕಿಸ್ ಮಾಡ್ತಾನೇ ನಾಲಿಗೆ ಕಚ್ಚಿದ್ಲು ಗರ್ಭಿಣಿ ಹೆಂಡ್ತಿ!

ನವದೆಹಲಿ: ನೋಡಲು ಚೆನ್ನಾಗಿಲ್ಲ ಎಂಬ ಕಾರಣಕ್ಕೆ ಗರ್ಭಿಣಿ ಪತ್ನಿ ತನ್ನ ಗಂಡನ ನಾಲಿಗೆಯನ್ನೇ ಕಚ್ಚಿ ತುಂಡರಿಸಿದ ಆತಂಕಕಾರಿ ಘಟನೆ ಭಾನುವಾರ ಬೆಳಕಿಗೆ ಬಂದಿದೆ.  ದೆಹಲಿಯ ರಣಹೋಲಾ ಪ್ರದೇಶದಲ್ಲಿ ಶನಿವಾರ ರಾತ್ರಿ ಈ ಘಟನೆ ನಡೆದಿದ್ದು, ಗಂಡ ನೋಡಲು ಚೆನ್ನಾಗಿಲ್ಲ ಎಂಬ ಕಾರಣಕ್ಕೆ ಮತ್ತು ಗಂಡ-ಹೆಂಡತಿ ನಡುವೆ ಸದಾ ಮನಸ್ತಾಪ ಏರ್ಪಟ್ಟು, ಜಗಳವಾಡುತ್ತಿದ್ದರು ಎಂದು ನೆರೆಹೊರೆಯವರು ಪೊಲೀಸರಿಗೆ ತಿಳಿಸಿದ್ದಾರೆ.  ಶನಿವಾರ ರಾತ್ರಿ ಗಂಡ-ಹೆಂಡತಿ ನಡುವೆ ಸಣ್ಣ ವಿಚಾರಕ್ಕೆ ಗಲಾಟೆ ಶುರುವಾಗಿದೆ. ಮಾತಿಗೆ …

Read More »

10 ರಾಜ್ಯಗಳಲ್ಲಿ ಚುನಾವಣಾ ಮೈತ್ರಿಕೂಟ ರಚನೆಗೆ

ನವದೆಹಲಿ: ಮುಂಬರುವ 2019 ರ ಲೋಕಸಭೆ ಚುನಾವಣೆಗೆ ಕಾರ್ಯತಂತ್ರ ರೂಪಿಸುವ ನಿಟ್ಟಿನಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಕಾಂಗ್ರೆಸ್ ಪಕ್ಷವು 10 ರಾಜ್ಯಗಳಲ್ಲಿ ಸಂಭವನೀಯ ಮೈತ್ರಿ ಪಾಲುದಾರರನ್ನು ಹುಡುಕುವತ್ತ ಚರ್ಚೆ ನಡೆಸಿದೆ. ಬಿಹಾರ, ಉತ್ತರಪ್ರದೇಶ, ಕರ್ನಾಟಕ, ಮಹಾರಾಷ್ಟ್ರ, ಅಸ್ಸಾಂ, ಪಶ್ಚಿಮ ಬಂಗಾಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಮತ್ತು ಜಾರ್ಖಂಡ್ ನ 10 ರಾಜ್ಯಗಳಲ್ಲಿ ಮೈತ್ರಿಕೂಟದ ಸಾಧ್ಯತೆಗಳನ್ನು ಈ ಸಭೆಯು ಪರಿಶೀಲಿಸುತ್ತಿದೆ. ಪಕ್ಷದ ಮುಖ್ಯಸ್ಥ ರಾಹುಲ್ ಗಾಂಧಿ ಅವರ ಅನುಪಸ್ಥಿತಿಯಲ್ಲಿ ನಡೆದ …

Read More »

ಬಿಹಾರ್: ಬಿಜೆಪಿ 20-20 ಸೂತ್ರಕ್ಕೆ ಕ್ರಿಕೆಟ್ ಆಡುವದಿಲ್ಲ ..

ನವದೆಹಲಿ: 2019 ರ ಲೋಕಸಭೆಗೂ ಮುನ್ನ ಬಿಜೆಪಿಗೆ ಬಿಹಾರದಲ್ಲಿ ಭಾರಿ ಹಿನ್ನಡೆಯಾಗಿದೆ. ಬಿಜೆಪಿ ನೀಡಿದ್ದ 20-20 ಸೀಟು ಹಂಚಿಕೆ ಸೂತ್ರದ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಮೈತ್ರಿಪಕ್ಷದ ನಾಯಕ ಆರ್ಎಲ್ಎಸ್ಪಿ ಮುಖ್ಯಸ್ಥ ಉಪೇಂದ್ರ ಕುಶ್ವಾಹ “”ನಾನು ಕ್ರಿಕೆಟ್ ಆಡುತ್ತಿಲ್ಲ ಮತ್ತು ಈ 20-20 ಸೂತ್ರವನ್ನು ನನಗೆ ಅರ್ಥವಾಗುವುದಿಲ್ಲ. ಬದಲಾಗಿ, ನಾನು ‘ಗಿಲ್ಲಿ ದಂಡ’ ಆಡಲು ಇಷ್ಟಪಡುತ್ತೇನೆ. ಎಂದು ವ್ಯಂಗವಾಡಿದ್ದಾರೆ. ಆ ಮೂಲಕ ಬಿಜೆಪಿ ನೀಡಿರುವ ಸೂತ್ರವನ್ನು ತಿರಸ್ಕರಿಸಿದ್ದಾರೆ. ಪಾಟ್ನಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ …

Read More »

ಎಸ್ಸಿ/ಎಸ್ಟಿ ನಿರುದ್ಯೋಗಿಗಳಿಗೆ ಸಿಹಿ ಸುದ್ದಿ; 1000 ಯುವಕರನ್ನು ಉದ್ಯಮಿಗಳಾಗಿಸಲಿದೆ ಈ ಕಂಪನಿ!

ನವದೆಹಲಿ: ಕ್ಯಾಬ್ ಸೇವೆಯಲ್ಲಿ ಆಗ್ರಾ ಸ್ಥಾನದಲ್ಲಿರುವ ವಿದೇಶಿ ಕಂಪನಿ ಊಬರ್(Uber) ಜೊತೆ ಒಪ್ಪಂದ ಮಾಡಿಕೊಂಡಿರುವ ತಮಿಳುನಾಡು ಸರ್ಕಾರ, ಎಸ್ಸಿ/ಎಸ್ಟಿ ನಿರುದ್ಯೋಗಿಗಳಿಗೆ ಉತ್ತಮ ಯೋಜನೆಯೊಂದನ್ನು ಹಮ್ಮಿಕೊಂಡಿದೆ.  ಈ ಯೋಜನೆ’ಯಡಿ ಊಬರ್ 1000 ಎಸ್ಸಿ/ಎಸ್ಟಿ ಚಾಲಕರಿಗೆ ತರಬೇತಿ ನೀಡಲಿದ್ದು, ಇದಕ್ಕಾಗಿ ತಮಿಳುನಾಡು ಸರ್ಕಾರ 5 ಲಕ್ಷ ರೂ.ಗಳವರೆಗೆ ಧನ ಸಹಾಯ ಒದಗಿಸಲಿದೆ. ಅಲ್ಲದೆ, ರಾಜ್ಯದ ಸಮಾಜ ಕಲ್ಯಾಣ ಇಲಾಖೆಯ ಡಾ.ಅಂಬೇಡ್ಕರ್ ಅಭಿವೃದ್ಧಿ ಸಂಸ್ಥೆ ಸಹಯೋಗದೊಂದಿಗೆ ಎಸ್ಸಿ/ಎಸ್ಟಿ ಸಮುದಾಯದವರಿಗೆ ಸಣ್ಣ ಉದ್ಯೋಗ ಕೈಗೊಳ್ಳಲು ಪ್ರೋತ್ಸಾಹ …

Read More »

ಮತ್ತೆ ಗಗನಕ್ಕೇರಿದ ಪೆಟ್ರೋಲ್ ಡಿಸೇಲ್ ದರ!.

ನವದೆಹಲಿ: ಇಂಧನ ಬೆಲೆಗಳು ಭಾನುವಾರದಂದು ಹೊಸದಾಗಿ ಏರಿಕೆ ಕಂಡಿವೆ. ಆ ಮೂಲಕ ಗ್ರಾಹಕರು ಮೇಲೆ ಈ ಪೆಟ್ರೋಲ್ ದರದ ನಿರಂತರ ಏರಿಕೆಯಿಂದ ಪರದಾಡುವಂತಾಗಿದೆ.ದೆಹಲಿಯಲ್ಲಿ ಪೆಟ್ರೋಲ್ ಮತ್ತು ಡೀಸಲ್ ಬೆಲೆ 82.61, 73.97 ರೂ ದರದಲ್ಲಿ ಏರಿಕೆ ಆ ಮೂಲಕ ಕ್ರಮವಾಗಿ 12 ಮತ್ತು 10 ಪೈಸೆ ಹೆಚ್ಚಳವಾಗಿದೆ. ಮುಂಬೈನಲ್ಲಿ ಪೆಟ್ರೋಲ್ ಪ್ರತಿ ಲೀಟರ್ಗೆ 89.97 ರೂ.ಆಗಿದೆ.ಕಳೆದ ಕೆಲವು ವಾರಗಳಿಂದ ಇಂಧನ ಬೆಲೆಗಳು ನಿರಂತರ ಏರಿಕೆ ಕಂಡಿವೆ. ಇದರಿಂದ ಇತ್ತೀಚಿಗಷ್ಟೇ ಕಾಂಗ್ರೆಸ್ …

Read More »

ಮಹತ್ವದ ಆಯುಷ್ಮಾನ್ ಭಾರತ್ ಯೋಜನೆಗೆ ಪ್ರಧಾನಿಯಿಂದ ಇಂದು ಚಾಲನೆ..

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ವಿಶ್ವದ ಅತೀ ದೊಡ್ಡ ಸರ್ಕಾರಿ ಅನುದಾನಿತ ಆರೋಗ್ಯ ಕಾರ್ಯಕ್ರಮವಾದ ಆಯುಷ್ಮಾನ್​ ಭಾರತ್​ ಯೋಜನೆಗೆ ಜಾರ್ಖಂಡ್​​ನ ರಾಂಚಿಯಲ್ಲಿ ಚಾಲನೆ ನೀಡಲಿದ್ದಾರೆ. ಈ ಯೋಜನೆಯಿಂದ ಸುಮಾರು 50 ಕೋಟಿ ಭಾರತೀಯರು ಪ್ರಯೋಜನ ಪಡೆಯಲಿದ್ದಾರೆ. ಆರ್ಥಿಕವಾಗಿ ಹಿಂದುಳಿದ 10 ಕೋಟಿ ಕುಟುಂಬಗಳನ್ನು ತಲುಪಬೇಕು ಎನ್ನುವ ಗುರಿಯನ್ನು ಹೊಂದಿದೆ. ಈ ಯೋಜನೆಯನ್ನು ಪ್ರಧಾನ ಮಂತ್ರಿ ಜನ್​ ಆರೋಗ್ಯ ಅಭಿಯಾನ ಎಂದು ಸಹ ಕರೆಯಲಾಗುತ್ತದೆ. ಪ್ರಧಾನಿಯವರು ಇಂದು ಯೋಜನೆಗೆ ಚಾಲನೆ …

Read More »