ತುಮಕೂರು ನಗರದ ಉಪ್ಪಾರಹಳ್ಳಿಯ ಟಿ.ಆರ್. ಚೇತನ್‌ರಾಜ್ ಎಂಬವರಿಗೆ ಎಪಿಕೆ ಫೈಲ್ ಕಳುಹಿಸಿ ಸೈಬರ್ ವಂಚಕರು ₹1.92 ಲಕ್ಷ ವಂಚಿಸಿದ್ದಾರೆ. ಅವರ ಕೆನರಾ ಬ್ಯಾಂಕ್ ಖಾತೆಯಿಂದ ಎರಡು ಹಂತಗಳಲ್ಲಿ ಹಣ ಕಡಿತವಾಗಿದ್ದು, ಮೊಬೈಲ್‌ಗೆ ಸಂದೇಶ ಬಂದ ಬಳಿಕ ವಂಚನೆ ಬೆಳಕಿಗೆ ಬಂದಿದೆ. ಮೊಬೈಲ್ ಪರಿಶೀಲಿಸಿದಾಗ ‘RANG.apk’ ಎಂಬ ಎಪಿಕೆ ಫೈಲ್ ಇನ್‌ಸ್ಟಾಲ್ ಆಗಿರುವುದು ಪತ್ತೆಯಾಗಿದೆ. ಕೂಡಲೇ ಅದನ್ನು ಡಿಲೀಟ್ ಮಾಡಿದ್ದಾರೆ. ಈ ಸಂಬಂಧ ಚೇತನ್‌ರಾಜ್ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ವಂಚನೆಯಾದ ಹಣ ವಾಪಸ್ ಕೊಡಿಸುವಂತೆ ಮನವಿ ಮಾಡಿದ್ದಾರೆ. ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news
