ಬೆಂಗಳೂರು: ಯಲಹಂಕದಲ್ಲಿ ನಡೆದ ರಿಯಲ್ ಎಸ್ಟೇಟ್ ಉದ್ಯಮಿ ಚರಣ್ ಗೌಡ ಹತ್ಯೆ ಪ್ರಕರಣದಲ್ಲಿ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ. ತನ್ನ ಕೊಲೆಗೆ ಆಪ್ತ ಗೆಳೆಯನೇ ₹30 ಲಕ್ಷ ಸುಪಾರಿ ನೀಡಿದ್ದಾನೆ ಎಂಬ ಮಾಹಿತಿ ಆರು ತಿಂಗಳ ಹಿಂದೆಯೇ ತಿಳಿದಿದ್ದರೂ, ಸ್ನೇಹಿತನ ಮೇಲಿನ ನಂಬಿಕೆಯಿಂದ ಚರಣ್ ಅದನ್ನು ನಿರ್ಲಕ್ಷಿಸಿದ್ದರು ಎನ್ನಲಾಗಿದೆ. ಈ ವಿಚಾರ ತಿಳಿದ ಆಪ್ತರು ಎಚ್ಚರಿಕೆ ನೀಡಿದ್ದರೂ, ಕಿರಣ್ ತನ್ನ ಗೆಳೆಯನಾಗಿದ್ದು ಅಂತಹ ಕೃತ್ಯ ಎಸಗುವುದಿಲ್ಲ ಎಂದು ಚರಣ್ ನಂಬಿದ್ದರು. ನವೆಂಬರ್ 13ರಂದು ಪತ್ನಿಯ ಕಣ್ಣೆದುರೇ ಚರಣ್ ಅವರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹತ್ಯೆ ಮಾಡಿದ್ದರು. ಹತ್ಯೆಯ ವೇಳೆ ಚರಣ್ ಪತ್ನಿಯ ಆಕ್ರಂದನ ಕಂಡು ಆರೋಪಿಗಳಾದ ಕಿರಣ್ ಮತ್ತು ಆಕಾಶ್ ಪಶ್ಚಾತ್ತಾಪ ಪಟ್ಟಿದ್ದರು ಎನ್ನಲಾಗಿದೆ. ಬಳಿಕ ಇಬ್ಬರೂ ಧರ್ಮಸ್ಥಳಕ್ಕೆ ತೆರಳಿದ್ದರು. ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಧರ್ಮಸ್ಥಳದಲ್ಲೇ ಆರೋಪಿಗಳನ್ನು ಬಂಧಿಸಿದ್ದು, ಪ್ರಕರಣದಲ್ಲಿ ಇದುವರೆಗೆ ಐವರನ್ನು ಬಂಧಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

