Breaking News

12 ವರ್ಷದ ಬಳಿಕ ಮೈದುಂಬಿದ ಚೆಕ್ ಡ್ಯಾಂ..

ಆ್ಯಂಕರ್ : ಕಳೆದ 12 ವರ್ಷಗಳಿಂದ ತುಂಬದ ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಬೃಹತ್ ಚೆಕ್ ಡ್ಯಾಂ ಈ ವರ್ಷ ಮೈದುಂಬಿ ಹರಿಯುತ್ತಿದ್ದು ಪ್ರವಾಸಿಗರನ್ನ ತನ್ನತ್ತ ಸೆಳೆಯುತ್ತಿದೆ. ನೋಡೋಕೆ ಮಿನಿ ಡ್ಯಾಂನಂತಿರೋ ಈ ಬೃಹತ್ ಚೆಕ್ ಡ್ಯಾಂ ತುಂಬಿರೋದ್ರಿಂದ ಕುಡಿಯೋ ನೀರಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ಸ್ಥಳಿಯರಲ್ಲೂ ಸಂತಸ ಮೂಡಿದೆ. ಇದೊಂದೆ ಅಲ್ಲ, ಚಿಕ್ಕಮಗಳೂರಿನ ಮಲೆನಾಡು ಭಾಗದಲ್ಲಿ ಸುರಿಯುತ್ತಿರೋ ಭಾರೀ ಮಳೆಗೆ ಜಿಲ್ಲೆಯ ಎಲ್ಲಾ ನದಿಗಳು, ಹಳ್ಳ-ಕೊಳ್ಳಗಳು, ಚೆಕ್ ಡ್ಯಾಂಗಳು, ಕೆರೆಕಟ್ಟೆಗಳು ಮೈದುಂಬಿ ಹರಿಯುತ್ತಿದ್ರೆ, ನದಿಗಳು ತಿಂಗಳಿಂದ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಎನ್.ಆರ್.ಪುರ ಭಾಗದಲ್ಲಿ ಭಾರೀ ಮಳೆಯಾಗ್ತಿದ್ದು, ಭದ್ರಾ ಡ್ಯಾಂಗೂ ಕೂಡ ಅಪಾರ ಪ್ರಮಾಣದ ನೀರು ಹರಿದು ಹೋಗ್ತಿದೆ.
Share News

About Shaikh BIG TV NEWS, Hubballi

Check Also

ತುಂಗಾ ನದಿಯಲ್ಲಿ ಈಜಲು ತೆರಳಿದ್ದ ಯುವಕ ನಾಪತ್ತೆ!

ಸ್ನೇಹಿತರ ಜೊತೆಗೆ ನದಿಯಲ್ಲೂ ಈಚಲು ತೆರಳಿದ್ದಾಗ ಈ ಒಂದು ಘಟನೆ ಸಂಭವಿಸಿದೆ. ಚಿಕ್ಕಮಗಳೂರು ಜಿಲ್ಲೆಯ ಈಗಾಗಲೇ ಹಲವೆಡೆ ಧಾರಾಕಾರವಾಗಿ ಮಳೆ …

Leave a Reply

Your email address will not be published. Required fields are marked *