ನವದೆಹಲಿ: ಇತ್ತೀಚೆಗೆ ರೀಚಾರ್ಜ್ ದರಗಳನ್ನು ಗಣನೀಯವಾಗಿ ಹೆಚ್ಚಿಸಿದ್ದ ರಿಲಾಯನ್ಸ್ ಜಿಯೋ, ಭಾರ್ತಿ ಏರ್ಟೆಲ್, ವೊಡಾಫೋನ್ ಐಡಿಯಾ ಸಂಸ್ಥೆಗಳು ಕಳೆದ ತಿಂಗಳಲ್ಲಿ ಬಹಳಷ್ಟು ಗ್ರಾಹಕರನ್ನು ಕಳೆದುಕೊಂಡಿವೆ. ಕಡಿಮೆ ದರಕ್ಕೆ 4ಜಿ ಸರ್ವಿಸ್ ಆಪರೇಟ್ ಮಾಡುತ್ತಿರುವ ಬಿಎಸ್ಸೆನ್ನೆಲ್ ಕಡೆಗೆ ಇವರೆಲ್ಲರೂ ವಲಸೆ ಹೋಗಿರುವಂತೆ ತೋರುತ್ತಿದೆ.
ಆಗಷ್ಟನಲ್ಲಿ ಬಿಎಸ್ಸೆನ್ನೆಲ್ ಮಾತ್ರವೇ ಗ್ರಾಹಕರ ಬಳಗ ಹೆಚ್ಚಿಸಿಕೊಂಡಿರುವುದು, ಟೆಲಿಕಾಂ ನಿಯಂತ್ರಕ ಸಂಸ್ಥೆಯಾದ ಟ್ರಾಯ್, ಕಳೆದ ತಿಂಗಳ ದತ್ತಾಂಶ ಬಿಡುಗಡೆ ಮಾಡಿದೆ.2024ರ ಜುಲೈ ತಿಂಗಳಲ್ಲಿ ಭಾರ್ತಿ ಏರ್ಟೆಲ್ ಅತಿಹೆಚ್ಚು ಗ್ರಾಹಕರನ್ನು ಕಳೆದುಕೊಂಡಿದೆ. ವೊಡಾಫೋನ್ ಐಡಿಯಾ ಸಂಸ್ಥೆಯೂ ಸಾಕಷ್ಟು ಹೆಚ್ಚಿನ ಪ್ರಮಾಣದಲ್ಲಿ ಸಬ್ಸ್ಕ್ರೈಬರ್ಸ್ಗಳನ್ನು ದೂರ ಮಾಡಿಕೊಂಡಿದೆ. ಅತಿದೊಡ್ಡ ಟೆಲಿಕಾಂ ಆಪರೇಟರ್ ಆಗಿರುವ ರಿಲಾಯನ್ಸ್ ಜಿಯೋ ಕೂಡ ಸಾಕಷ್ಟು ಗ್ರಾಹಕರನ್ನು ಕಳೆದುಕೊಂಡಿದೆಯಾದರೂ ತೀರಾ ಹೆಚ್ಚಿನ ಮೊತ್ತವಲ್ಲ. ಟ್ರಾಯ್ ವರದಿ ಪ್ರಕಾರ, ಭಾರ್ತಿ ಏರ್ಟೆಲ್ 16.9 ಲಕ್ಷ, ವೊಡಾಫೋನ್ ಐಡಿಯಾ 14.1 ಲಕ್ಷ ಹಾಗು ರಿಲಾಯನ್ಸ್ ಜಿಯೋ 7.58 ಲಕ್ಷ ಬಳಕೆದಾರರನ್ನು ಕಳೆದುಕೊಂಡಿವೆ ಎನ್ನಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

