Breaking News

ಜೆಸಿಬಿಗೆ ಟೆಂಪೊ ಡಿಕ್ಕಿ: ಚಾಲಕನ ಕಣ್ಮುಂದೆಯೇ ಹಾರಿ ಹೋದ ಪ್ರಾಣಪಕ್ಷಿ

ಧಾರವಾಡ: ಜೆಸಿಬಿಗೆ ಹಿಂದಿನಿಂದ ಬಂದ ಟೆಂಪೊ ಡಿಕ್ಕಿ ಹೊಡೆದಿದೆ. ಇದರಿಂದ ತೀವ್ರವಾಗಿ ಗಾಯಗೊಂಡ ಟೆಂಪೊ ಚಾಲಕನ ಪ್ರಾಣಪಕ್ಷಿ ಕ್ಷಣಾರ್ಧದಲ್ಲಿ ಎಲ್ಲರ ಕಣ್ಮುಂದೆಯೇ ಹಾರಿ ಹೋದ ಘಟನೆ ಗರಗ ಗ್ರಾಮದಲ್ಲಿ ನಡೆದಿದೆ.

ಅಪಘಾತ ಆಗುತ್ತಿದ್ದಂತೆ ಸ್ಥಳೀಯರು ಅಲ್ಲಿ ಜಮಾಯಿಸಿದ್ದಾರೆ. ಟೆಂಪೊದ ಮುಂಭಾಗ ಸಂಪೂರ್ಣ ನಜ್ಜಗುಜ್ಜಾಗಿದ್ದರಿಂದ ಚಾಲಕ ತೀವ್ರವಾಗಿ ಗಾಯಗೊಂಡಿದ್ದ. ಆತನನ್ನು ಹೊರತೆಗೆಯಲು ಸ್ಥಳೀಯರು ಪರದಾಡಿದ್ದಾರೆ. ಕೆಲವರು ಅಲ್ಲೇ ಚಾಲಕನಿಗೆ ನೀರು ಕುಡಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ನೋಡ ನೋಡುತ್ತಿದ್ದಂತೆ ಚಾಲಕನ ಪ್ರಾಣಪಕ್ಷಿ ಹಾರಿ ಹೋಗಿದೆ.

ಸ್ಥಳಕ್ಕೆ ಗರಗ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ದೂರು ದಾಖಲಿಸಿಕೊಂಡಿದ್ದಾರೆ. ಈ ಅಪಘಾತದಲ್ಲಿ ಸಾವನ್ನಪ್ಪಿದ ಚಾಲಕ ಖಾನಾಪುರ ನಿವಾಸಿ ಎಂದು ಗೊತ್ತಾಗಿದೆ.

Share News

About Shaikh BigTv

Check Also

ಬೆಂಗಳೂರಲ್ಲಿ ನಕಲಿ ಡೇಟಿಂಗ್ ಬಲೆ, 20 ಲಕ್ಷ ರೂ. ಮೌಲ್ಯದ ಚಿನ್ನ ಲೂಟಿ

ಬೆಂಗಳೂರು: ಚಂದ್ರಾ ಲೇಔಟ್‌ನಲ್ಲಿ ಡೇಟಿಂಗ್ ಆಯಪ್ ಮೂಲಕ ಪರಿಚಯವಾದ ವ್ಯಕ್ತಿಯನ್ನು ಮನೆಗೆ ಕರೆಸಿಕೊಂಡ ಯುವಕನಿಗೆ ಚಾಕು ತೋರಿಸಿ ಬೆದರಿಸಿ, 226 …

Leave a Reply

Your email address will not be published. Required fields are marked *