Breaking News

ಮೊದಲನೇ ಬಾರಿಗೆ ಮೆಕ್ಕೆಜೋಳಕ್ಕೆ ಬಂಪರ್ ಬೆಲೆ: ರೈತರ ಮೊಗದಲ್ಲಿ ಸಂತಸ

ಕೊಪ್ಪಳ: ಮೊದಲನೇ ಬಾರಿಗೆ ಮೆಕ್ಕೆಜೋಳಕ್ಕೆ ಬಂಪರ್ ಬೆಲೆ ಬಂದಿದ್ದು, ರೈತರ ಮುಖದಲ್ಲಿ ಸಂತಸವನ್ನು ತಂದಿದೆ. ಕೋಳಿಯ ಆಹಾರ ಸೇರಿದಂತೆ ಕೆಲವು ಉದ್ಯಮಗಳಿಗೆ ಮಾತ್ರವೇ ಸೀಮಿತವಾಗಿದ್ದ ಮೆಕ್ಕೆಜೋಳದಿಂದ ಈಗ ಎಥೆನಾಲ್ ಉತ್ಪಾದನೆಯನ್ನು ಮಾಡಲಾಗುತ್ತಿದ್ದು, ಇದರ ಪರಿಣಾಮವಾಗಿ ಮೆಕ್ಕೆಜೋಳಕ್ಕೆ ಬೇಡಿಕೆ ಹೆಚ್ಚಳವಾಗಿದೆ.
ಒಂದು ಕ್ವಿಂಟಲ್‌ ಮೆಕ್ಕೆಜೋಳವು ಕೊಪ್ಪಳ ಮಾರುಕಟ್ಟೆಯಲ್ಲಿ 2,950 ರೂಪಾಯಿಗೆ ಮಾರಾಟವಾಗಿದ್ದು, ಈ ಹಿಂದೆ ಇದ್ದ ಎಲ್ಲಾ ದಾಖಲೆಗಳನ್ನು ಹಿಂದಿಕ್ಕಿದೆ. ಮೆಕ್ಕೆಜೋಳಕ್ಕೆ ಬೆಂಬಲದ ಬೆಲೆಯನ್ನು ನೀಡುವಂತೆ ರೈತರು ಒತ್ತಾಯಿಸುತ್ತಿದ್ದರು. ಪ್ರಸ್ತುತ ಕೇಂದ್ರ ಸರ್ಕಾರವು 2330 ರೂ. ಬೆಂಬಲ ಬೆಲೆಯನ್ನು ಘೋಷಿಸಿದ್ದು, ಇದಕ್ಕಿಂತ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಳವಾಗಿದೆ. ಸಾಮಾನ್ಯವಾಗಿ ಮೆಕ್ಕೆಜೋಳ ಬೆಲೆ 2 ಸಾವಿರ ರೂಪಾಯಿ ಆಸುಪಾಸಿನಲ್ಲಿರುತ್ತಿತ್ತು. ರಾಜ್ಯದ 10 ಸಕ್ಕರೆ ಕಾರ್ಖಾನೆಗಳಿಗೆ ಎಥೆನಾಲ್ ಉತ್ಪಾದನೆ ಮಾಡಲು ಅನುಮತಿಯನ್ನು ನೀಡಿದ್ದು, ಪ್ರತಿನಿತ್ಯ 70 ಸಾವಿರ ಕ್ವಿಂಟಲ್ ಮೆಕ್ಕೆಜೋಳವು ಬೇಕಾಗಬಹುದು ಎಂದು ಮಾಹಿತಿಯನ್ನು ತಿಳಿಸಲಾಗಿದೆ.
ಮೆಕ್ಕೆಜೋಳಕ್ಕೆ ಬೇಡಿಕೆ ಹೆಚ್ಚಾಗಿರುವುದರಿಂದ ಹಿಂದಿಗಿಂತಲೂ ಉತ್ತಮವಾದ ದರವು ಬಂದಿದೆ. ಬೇರೆ ಉದ್ಯಮಗಳಿಗೆ ತೊಂದರೆಯಾಗುತ್ತದೆ ಎನ್ನುವ ಕಾರಣಕ್ಕೆ ಬೆಲೆಯನ್ನು ನಿಯಂತ್ರಣ ಮಾಡಲಾಗಿದೆ. 2700 ರಿಂದ 2950 ರೂಪಾಯಿಗೆ ಮೆಕ್ಕೆಜೋಳವು ಮಾರಾಟವಾಗುತ್ತಿದೆ. ಕೋಳಿ ಸಾಕಾಣಿಕೆಗೆ ಮೆಕ್ಕೆಜೋಳವೇ ಪ್ರಮುಖವಾದ ಆಹಾರವಾಗಿದ್ದು, ಬೆಲೆ ಏರಿಕೆಯಿಂದ ಮೊಟ್ಟೆ, ಕೋಳಿ ಬೆಲೆ ಏರಿಕೆಯಾಗುವ ಸಾಧ್ಯತೆ ಕೂಡ ಇದೆ ಎಂದು ಹೇಳಲಾಗಿದೆ.

Share News

About BigTv News

Check Also

ಅತ್ಯಾಚಾರ ಎಸೆಗಿದವರ ಮೇಲೆ‌ ಪ್ರತೀಕಾರ – ಅಪಹರಣ ಮಾಡಿ ಸಿಕ್ಕಿಬಿದ್ದ ಆರೋಪಿಗಳು!

ಬೆಂಗಳೂರು: ಮಾರತ್ತಹಳ್ಳಿಯಲ್ಲಿ ಸ್ನೇಹಿತನ ಪ್ರೇಯಸಿಯನ್ನು ಕಾಲ್‌ಗರ್ಲ್ ಎಂದು ತಪ್ಪಾಗಿ ಭಾವಿಸಿ ಅತ್ಯಾಚಾರ ಎಸಗಿದ ಆರೋಪದ ಹಿನ್ನೆಲೆಯಲ್ಲಿ, ಪ್ರತೀಕಾರಕ್ಕಾಗಿ ಇಬ್ಬರನ್ನು ಅಪಹರಿಸಿ …

Leave a Reply

Your email address will not be published. Required fields are marked *