Breaking News

ರಾಜ್ಯದಲ್ಲಿ ಅಟಲ್ ಭೂ ಜಲ್ ಯೋಜನೆಯ ಕಾಮಗಾರಿ ಪೂರ್ಣಗೊಳಿಸಲು ಸಚಿವ ಬೋಸರಾಜು ಸೂಚನೆ

ಬೆಂಗಳೂರು: ರಾಜ್ಯದ 41 ತಾಲ್ಲೂಕುಗಳಲ್ಲಿ ಜಾರಿಯಲ್ಲಿರುವ ಅಟಲ್‌ ಭೂ ಜಲ್‌ ಯೋಜನೆಯ ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸುವಂತೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್‌ ಎಸ್‌ ಭೋಸರಾಜು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ವಿಕಾಸಸೌಧದಲ್ಲಿ ತಮ್ಮ ಕಚೇರಿಯಲ್ಲಿ ಅಟಲ್‌ ಭೂ ಜಲ ಯೋಜನೆಯ ಪ್ರಗತಿ ಪರಿಶೀಲನೆ ನಡೆಸಿದ ಸಚಿವರು ದೇಶದ 7 ರಾಜ್ಯಗಳಲ್ಲಿ ಅಟಲ್‌ ಭೂ ಜಲ ಯೋಜನೆ ಜಾರಿಯಲ್ಲಿದೆ. ಸಮುದಾಯದ ಸಹಯೋಗದಲ್ಲಿ ಅಂತರ್ಜಲ ವೃದ್ದಿ ಹಾಗೂ ಅಂತರ್ಜಲ ಸಮರ್ಪಕ ನಿರ್ವಹಣೆ ಮಾಡುವ ಯೋಜನೆ ಇದಾಗಿದೆ 7 ರಾಜ್ಯಗಳ ಪೈಕಿ ಕರ್ನಾಟಕ ರಾಜ್ಯ ಯೋಜನೆ ಅನುಷ್ಠಾನ ಮತ್ತು ನಿರ್ವಹಣೆಯಲ್ಲಿ ಮೊದಲ ಸ್ಥಾನದಲ್ಲಿದೆ. ಇದೇ ರೀತಿಯ ಸಾಧನೆ ತೋರಿಸುವ ನಿಟ್ಟಿನಲ್ಲಿ ಜಾರಿಯಲ್ಲಿರುವ ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಇದೇ ವೇಳೆ ಪಿಎಂಕೆಎಸ್‌ವೈ ಹಾಗೂ ಆರ್‌ಆರ್‌ಆರ್‌ ಯೋಜನೆಯ ಅಡಿಯಲ್ಲಿ ರಾಜ್ಯದಿಂದ ಕೇಂದ್ರಕ್ಕೆ ಕಳುಹಿಸಲಾಗಿರುವ ಪ್ರಸ್ತಾವನೆಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ತುಮಕೂರು ಜಿಲ್ಲಾ ವ್ಯಾಪ್ತಿಯಲ್ಲಿ ಪಿಎಎಮ್‌ಕೆಎಸ್‌ವೈ ಯೋಜನೆಯ ಅಡಿಯಲ್ಲಿ ಪ್ರಸ್ತಾವನೆ ಸಿದ್ದಗೊಳಿಸದ ಅಧಿಕಾರಿಯನ್ನು ಇದೇ ಸಂಧರ್ಭದಲ್ಲಿ ಸಚಿವರು ತರಾಟೆಗೆ ತಗೆದುಕೊಂಡರು. ಈಗಾಗಲೇ ನಿರ್ದೇಶಿಸಿರುವಂತೆ ಈ ಎರಡೂ ಯೋಜನೆಯ ಅಡಿಯಲ್ಲಿ ಹೆಚ್ಚಿನ ಪ್ರಸ್ತಾವನೆಗಳನ್ನು ಸಿದ್ದಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅಟಲ್‌ ಭೂಜಲ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೋಲಾರ ಜಿಲ್ಲೆಯಲ್ಲಿ ಕಾಮಗಾರಿಗಳ ಪ್ರಗತಿ ಕುಂಠಿತವಾಗಿರುವ ಬಗ್ಗೆ ಅಧಿಕಾರಿಗಳ ವಿರುದ್ದ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಚಿವರು ನವೆಂಬರ್‌ ತಿಂಗಳ ಒಳಗಾಗಿ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.

Share News

About BigTv News

Check Also

ಶವಗಳ ಅಂಗಾಂಗ ಮಾರಾಟ ವಿರುದ್ಧ ಕಠಿನ ಕ್ರಮ: ಸಚಿವ ಡಾ| ಅಜಯಸಿಂಗ್‌

ಯಾದಗಿರಿ: ಶ್ಮಶಾನದಲ್ಲಿ ಹೂತ ಶವಗಳ ದೇಹದ ಅಂಗಾಂಗಗಳನ್ನು ಮಾರಾಟ ಮಾಡುತ್ತಿರುವ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಮೂವರನ್ನು ಬಂಧಿಸಲಾಗಿದೆ ಎಂದು ಸಚಿವ …

Leave a Reply

Your email address will not be published. Required fields are marked *