ಚಿಕ್ಕಬಳ್ಳಾಪುರ: ಕೈಲಾಸ ಪರ್ವತಕ್ಕೇರಿ ಪ್ರದಕ್ಷಿಣೆ ಹಾಕೋಕೆ ಆಗದವರು ನಂದಿಯ ಪಂಚಗಿರಿಯ ಸಾಲನ್ನು ಪ್ರದಕ್ಷಿಣೆ ಹಾಕಿದರೆ ಮುಕ್ತಿ ದೊರೆಯುತ್ತೆ ಅನ್ನೋ ನಂಬಿಕೆ ಈ ಭಾಗದಲ್ಲಿ ಅಚಲವಾಗಿದೆ. ಅದಕ್ಕಾಗೇ ಆಶಾಡ ಮಾಸದ ಕಡೆ ಸೋಮವಾರದಂದು ಪ್ರತಿ ವರ್ಷ ಚಿಕ್ಕಬಳ್ಳಾಪುರ ತಾಲ್ಲೂಕಿನ ನಂದಿಗಿರಿಗೆ ಪ್ರದಕ್ಷಿಣೆ ಹಾಕೋಕೆ ಸಾವಿರಾರು ಭಕ್ತರು ಇಲ್ಲಿ ಜಮಾಯಿಸ್ತಾರೆ. ದೊಡ್ಡಬಳ್ಳಾಪುರ, ದೇವನಹಳ್ಳಿ, ಗೌರಿಬಿದನೂರು, ಚಿಕ್ಕಬಳ್ಳಾಪುರ ಸೇರಿದಂತೆ ನೆರೆಯ ಆಂಧ್ರದಿಂದ ಬರೋ ಭಕ್ತರು ಇವತ್ತು ಐದು ಬೆಟ್ಟಗಳ ಸಾಲಾನ್ನು ಹೊಂದಿರುವ ನಂದಿಗಿರಿಗೆ ಪ್ರದಕ್ಷಿಣೆ ಹಾಕೋ ಮೂಲಕ ತಮ್ಮ ಭಕ್ತಿ ಭಾವವನ್ನು ಹರಿಸ್ತಾರೆ. ಕೈಲಾಸ ಪರ್ವತಷ್ಟೇ ಪ್ರಖ್ಯಾತಿ ಹೊಂದಿರುವ ನಂದಿಯ ಭೋಗ ನಂದೀಶ್ವರ ದೇವಾಲಯದಿಂದ ಆರಂಭವಾಗುವ ಪ್ರದಕ್ಷಿಣೆ ಸುಮಾರು 16 ಕಿ.ಮಿ ವ್ಯಾಪ್ತಿಯಲ್ಲಿ ಬೆಟ್ಟಕ್ಕೊಂದು ಸುತ್ತು ಬರುತ್ತದೆ. ನಂದಿ ಗ್ರಾಮದಲ್ಲಿ ಭೋಗನಂದೀಶ್ವರ, ಬೆಟ್ಟದ ಮೇಲೆ ಯೋಗನಂದೀಶ್ವರ ಹೊಂದಿದ್ದು, ಹಾದಿ ಮಧ್ಯೆ ಸಿಗುವ ಕಣಿವೆ ಬಸವೇಶ್ವರನಿಗೆ ಪೂಜೆ ಸಲ್ಲಿಸುತ್ತಾರೆ. ನಂದಿಗಿರಿ ಪ್ರದಕ್ಷಿಣೆಗೆ ಮಕ್ಕಳಿಂದ, ಮುದುಕರವರೆಗೂ ಸಾವಿರಾರು ಭಕ್ತಾದಿಗಳು ಆಗಮಿಸಿ….. ಹಾಡು, ಭಜನೆ, ನೃತ್ಯದ ಮೂಲಕ ಪ್ರದಕ್ಷಿಣೆ ಸಾಗುತ್ತದೆ. ಭಕ್ತಾಧಿಗಳು ಅಲ್ಲಲ್ಲಿ ಪ್ರಸಾದದ ವ್ಯವಸ್ಥೆಯನ್ನೂ ಮಾಡಿರುತ್ತಾರೆ. ಸುಮಾರು 81 ವರ್ಷದ ಇತಿಹಾಸ ಈ ಪ್ರದಕ್ಷಿಣೆಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news




