Breaking News

ಸಂಸತ್ತಿನ ಜಲಶಕ್ತಿ ಸಂಸದೀಯ ಸಲಹಾ ಸಮಿತಿ ಸದಸ್ಯರಾಗಿ ಸಂಸದ ಗೋವಿಂದ ಕಾರಜೋಳ ನೇಮಕ

ಚಿತ್ರದುರ್ಗ: 18ನೇ ಲೋಕಸಭೆಯಲ್ಲಿ ಚಿತ್ರದುರ್ಗ ಲೋಕಸಭಾ ಸದಸ್ಯರಾದ ಗೋವಿಂದ ಎಂ. ಕಾರಜೋಳರವರನ್ನು ಸಂಸತ್ತಿನ ಜಲ ಶಕ್ತಿ ಸಂಸದೀಯ ಸಲಹಾ ಸಮಿತಿಯ ಸದಸ್ಯರನ್ನಾಗಿ ಲೋಕಸಭಾ ಸ್ಪೀಕರ್ ರಾದ ಓಂ ಬಿರ್ಲಾರವರು ನೇಮಕ ಮಾಡಿರುತ್ತಾರೆ.
ಈ ಸಲಹಾ ಸಮಿತಿಯಲ್ಲಿ ಒಬ್ಬರು ರಾಜ್ಯ ಸಭಾ ಸದಸ್ಯರು ಹಾಗೂ 15 ಜನ ಲೋಕಸಭಾ ಸದಸ್ಯರುಗಳು ಹಾಗೂ ಇಬ್ಬರು ಪದನಿಮಿತ್ತ ಸದಸ್ಯರು ಕಾರ್ಯನಿರ್ವಹಿಸಲಿದ್ದು, ಈ ಸಲಹಾ ಸಮಿತಿಯ ಅಧ್ಯಕ್ಷರುಗಳನ್ನಾಗಿ ಸಿ.ಆರ್.ಪಾಟೀಲ್, ವಿ. ಸೋಮಣ್ಣ ಹಾಗೂ ರಾಜ್ ಭೂಷಣ್ ಚೌಧರಿ ಇವರುಗಳನ್ನು ನೇಮಕ ಮಾಡಲಾಗಿದೆ.

Share News

About BigTv News

Check Also

ಪ್ರೇಯಸಿ ಕರೆದಿದ್ದಕ್ಕೆ ಬಂದ ಯುವಕ ಸಿಕ್ಕಿಬಿದ್ದ: ಸ್ನೇಹಿತರ ಸಮೇತ ಕಂಬಕ್ಕೆ ಕಟ್ಟಿ ಥಳಿಸಿದ ಗ್ರಾಮಸ್ಥರು!

ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಬತ್ತಿಕೊಪ್ಪ ಗ್ರಾಮದಲ್ಲಿ ಪ್ರೀತಿಸಿದ ಯುವತಿಯನ್ನು ಮದುವೆಯಾಗಲು ಬಂದ ಪ್ರಮೋದ್ ಹಾಗೂ ಆತನ ಸ್ನೇಹಿತರಾದ ಪ್ರಕಾಶ್, …

Leave a Reply

Your email address will not be published. Required fields are marked *