Breaking News

ಆಶ್ರಯ ಬಡಾವಣೆಯನ್ನು ಸಿಎಂ ರಾಜಕೀಯ ಸಲಹೆಗಾರ ಹಾಗೂ ಆಳಂದ ಶಾಸಕ ಬಿ.ಆ‌ರ್. ಪಾಟೀಲ ವೀಕ್ಷಣೆ

ನವಲಗುಂದ: ಕ್ಷೇತ್ರದ ಚಕ್ಕಡಿ ರಸ್ತೆ ಹಾಗೂ ನೂತನವಾಗಿ ನಿರ್ಮಿಸಲಾಗಿರುವ ಆಶ್ರಯ ಬಡಾವಣೆಯನ್ನು ಸಿಎಂ ರಾಜಕೀಯ ಸಲಹೆಗಾರ ಹಾಗೂ ಆಳಂದ ಶಾಸಕ ಬಿ.ಆ‌ರ್. ಪಾಟೀಲ ವೀಕ್ಷಿಸಿದರು. ನಗರದ ಕರೆಕಲ್ಲವ್ವನ ದಾರಿ ಹಾಗೂ ಆಶ್ರಯ ಬಡಾವಣೆಗೆ ಭೇಟಿ ವೀಕ್ಷಣೆ ಮಾಡಿ ಮಾತನಾಡಿದ ಅವರು ಶಾಸಕ ಎನ್.ಎಚ್.ಕೋನರಡ್ಡಿ ರೈತರ ಹೊಲಕ್ಕೆ ಹೋಗಲು ನಮ್ಮ ಹೊಲ ನಮ್ಮ ರಸ್ತೆ ಕೆಲಸ ಹಾಗೂ ಬಡವರಿಗೆ ಆಶ್ರಯ ಯೋಜನೆಯ ಕಾಮಗಾರಿ ಆದರ್ಶ ಕಾಮಗಾರಿಗಳಾಗಿದ್ದು ತಮ್ಮ ಕ್ಷೇತ್ರದಲ್ಲಿ ಯೋಜನೆ ಅನುಷ್ಠಾನಿಸುವ ಉದ್ದೇಶದಿಂದ ವೀಕ್ಷಣೆಗೆ ಬಂದಿರುವುದಾಗಿ ಶಾಸಕ ಪಾಟೀಲ ಹೇಳಿದರು.

ಶಾಸಕ ಎನ್‌.ಎಚ್‌.ಕೋನರಡ್ಡಿ ಕಾರ್ಯ ಆದರ್ಶವಾಗಿದೆ. ಇಡೀ ರಾಜ್ಯವೇ ಮೆಚ್ಚುವಂತದ್ದಾಗಿದೆ. ಪೌರಕಾರ್ಮಿಕರಿಗೆ, ಬಡವರಿಗೆ ಮನೆ ಸ್ವಾಭಿಮಾನದ ಸಂಕೇತ ಅಂತವರಿಗೆ ಮನೆ ಇರಲಿಲ್ಲ. ಅಂತವರಿಗೆ ಸರ್ಕಾರದಿಂದ ಅನುದಾನ ತಂದು ಬಡವರಿಗಾಗಿ ಭೂಮಿ ಖರೀದಿ ಮಾಡಿ, ಜಾಗ ಕೊಟ್ಟು ಸರ್ಕಾರದಿಂದ ದುಡ್ಡು ಕೊಟ್ಟು ಸಹಾಯ ಮಾಡಿ ಅವರು ವಾಸಿಸಲು ಸೂರು ಮಾಡಿಕೊಟ್ಟಿದ್ದು ಹೆಮ್ಮೆಯ ಸಂಗತಿ ಎಂದರು.

Share News

About bigtvnews22

Check Also

ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್‌ ದೂರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …

Leave a Reply

Your email address will not be published. Required fields are marked *