Breaking News

ಸಾಯಿ ಎಂದಿದ್ದಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾದ ಪತ್ನಿ!

ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ಅಮ್ರಿನ್ ಜಹಾನ್ ಆತ್ಮಹತ್ಯೆಗೆ ಶರಣಾದ ಮಹಿಳೆ. ಅಮ್ರಿನ್ ಪತಿ ಬೆಂಗಳೂರಿನಲ್ಲಿ ವೆಲ್ಡರ್ ಆಗಿ ಕೆಲಸ ಮಾಡುತ್ತಿದ್ದ.ತನ್ನ ಕುಟುಂಬದ ಜೊತೆಗೆ ಮೊರಾದಾಬಾದ್ ನಲ್ಲಿ ವಾಸವಾಗಿದ್ದಳು. ಅತ್ತೆ-ಮಾವ ಹಾಗೂ ಅತ್ತಿಗೆ ಅಮ್ರಿನ್ ಜಹಾನ್ ಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದರಂತೆ.ಅತ್ತೆ-ಮಾವ ಎಲ್ಲರೂ ನನ್ನನ್ನು ಸಾಯಿ ಎನ್ನುತ್ತಿದಾರೆ. ಪತಿ ನನ್ನನ್ನು ನಿನ್ಯಾಕೆ ಸಾಯಬಾರದು? ಎಂದು ಕೇಳಿದ್ದಾನೆ. ನನಗೆ ಸಾಯುವಂತೆ ಒತ್ತಡ ಹೇರುತ್ತಿದ್ದಾರೆ. ಹುಷಾರಿಲ್ಲದಾಗ ಚಿಕಿತ್ಸೆಗೆ ಹಣಕೊಟ್ಟು ತಪ್ಪು ಮಾಡಿದ್ದೇವೆ. ಆ ಹಣವನ್ನು ವಾಪಾಸ್ ಕೊಡುವಂತೆ ಪೀಡಿಸುತ್ತಿದ್ದಾರೆ. ನನ್ನ ಬಳಿ ಹಣವಿಲ್ಲ, ಹಣ ಇದ್ದಿದ್ದರೆ ನಾನೇ ಚಿಕಿತ್ಸೆಗೆ ನೋಡಿಕೊಳ್ಳುತ್ತಿದ್ದೆ ಎಂದಿದ್ದಾರೆ. ವಿಡಿಯೋ ರೆಕಾರ್ಡ್ ಮಾಡಿಟ್ಟು ಅಮ್ರಿನ್ ಜಹಾನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಅಮ್ರೀನ್ ತಂದೆ ಸಲೀಂ ನೀಡಿರುವ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ

Share News

About BigTv News

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *