Breaking News

Uncategorized

IAS-IPS ಬಿಗ್ ಶೇಕ್: ರಾಜ್ಯದಲ್ಲಿ ಡಿಸಿ ಬದಲಾವಣೆ, ಐಜಿಪಿ ಮಟ್ಟದಲ್ಲಿ ವರ್ಗಾವಣೆ!

ಬೆಂಗಳೂರು: ಕರ್ನಾಟಕ ಸರ್ಕಾರ ಮಹತ್ವದ ಆಡಳಿತಾತ್ಮಕ ನಿರ್ಧಾರ ಕೈಗೊಂಡಿದ್ದು, ರಾಜ್ಯದ ವಿವಿಧ ಜಿಲ್ಲೆಗಳು ಮತ್ತು ಇಲಾಖೆಗಳಲ್ಲಿರುವ ಐಎಎಸ್ (IAS) ಹಾಗೂ ಐಪಿಎಸ್ (IPS) ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಈ ಬದಲಾವಣೆ ಆಡಳಿತ ವ್ಯವಸ್ಥೆಯಲ್ಲಿ ಹೊಸ ಚೈತನ್ಯ ಮೂಡಿಸುವ ನಿರೀಕ್ಷೆ ಮೂಡಿಸಿದೆ… ಈ ವರ್ಗಾವಣೆಯಲ್ಲಿ ಪ್ರಮುಖವಾಗಿ ಕಲಬುರಗಿ ಮತ್ತು ರಾಯಚೂರು ಜಿಲ್ಲೆಗಳ ಜಿಲ್ಲಾಧಿಕಾರಿಗಳನ್ನು ಬದಲಾಯಿಸಲಾಗಿದೆ. ಕಲಬುರಗಿಯ ಜಿಲ್ಲಾಧಿಕಾರಿಯಾಗಿದ್ದ ಫೌಜಿಯಾ ತರನ್ನಮ್ ಅವರನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ …

Read More »

ನಾಮಕರಣಕ್ಕೆ ಹೋಗುತ್ತಿದ್ದ ವೇಳೆ ಅಪಘಾತ, ಇಬ್ಬರು ಬಲಿ ಪಡೆದ ಲಾರಿ

ಚಿಕ್ಕಬಳ್ಳಾಪುರ: ಟಿಪ್ಪರ್ ಲಾರಿ-ಇನ್ನೋವಾ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಇಬ್ಬರು ಮೃತಪಟ್ಟಿರುವ ಘಟನೆ ಚಿಂತಾಮಣಿ-ಚೇಳೂರು ರಸ್ತೆಯಲ್ಲಿ ಸಂಭವಿಸಿದೆ. ಬಾಗೇಪಲ್ಲಿಯ ನಾಗರಾಜ್‌ರೆಡ್ಡಿ (25), ಅನಿತಾ (24) ಮೃತರು. ಅರವಿಂದ್ (17) ಮತ್ತು ಪ್ರಗತಿ (14) ಗಾಯಾಳುಗಳು. ಇನ್ನೋವಾ ಕಾರು ಬಾಗೇಪಲ್ಲಿಯಿಂದ ಚಿಂತಾಮಣಿಗೆ ಬರುತ್ತಿತ್ತು. ಇದೇ ವೇಳೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದಿದೆ. ಇದರಿಂದ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಕುಟುಂಬಸ್ಥರು ಚಿಂತಾಮಣಿಯಲ್ಲಿನ ಸಂಬಂಧಿಕರೊಬ್ಬರ ಮನೆಯಲ್ಲಿ ಆಯೋಜಿಸುತ್ತಿದ್ದ ನಾಮಕರಣಕ್ಕೆ ಬರುತ್ತಿದ್ದರು. ಅಪಘಾತ ಸಂಭವಿಸುತ್ತಿದ್ದಂತೆ ಟಿಪ್ಪರ್ …

Read More »

ಜಾರ್ಖಂಡ್‌: ಪುತ್ರನ ಆರೋಗ್ಯಕ್ಕೆ ಪುತ್ರಿ ನರಬಲಿ, ತಾಯಿ ಸೇರಿ ಮೂವರ ಬಂಧನ

ರಾಂಚಿ: ಅನಾರೋಗ್ಯದಿಂದ ಬಳಲುತ್ತಿರುವ ಪುತ್ರನು ಗುಣಮುಖಕ್ಕಾಗಿ, ತಾಯಿಯೇ ತನ್ನ 13 ವರ್ಷದ ಮಗಳನ್ನು ನರಬಲಿ ನೀಡಿರುವ ಘಟನೆ ಜಾರ್ಖಂಡ್‌ನ ಹಜಾರಿಬಾಗ್‌ನಲ್ಲಿ ನಡೆದಿದೆ. ಆರೋಪಿಯನ್ನು ರೇಶ್ಮಿ ದೇವಿ ಎಂದು ಗುರುತಿಸಲಾಗಿದ್ದು, ಆಕೆಯ ಜತೆಗೆ ಕೃತ್ಯಕ್ಕೆ ಸಹಕರಿಸಿದ ಓರ್ವ ಗ್ರಾಮಸ್ಥ ಮತ್ತು ಮಾಟಗಾತಿಯೊಬ್ಬರನ್ನು ಬಂಧಿಸಲಾಗಿದೆ. ‘ನಿನ್ನ ಮಗನ ಕಾಯಿಲೆ ಗುಣಪಡಿಸಲು ಕನ್ಯೆಯನ್ನು ಬಲಿ ನೀಡಬೇಕು’ ಎಂದು ಮಾಟಗಾತಿ ಸೂಚಿಸಿದ್ದಳು. ಅವಳ ಮಾತನ್ನು ನಂಬಿ ಪುತ್ರಿಯನ್ನೇ ಕತ್ತು ಹಿಸುಕಿ ಕೊಲ್ಲಲಾಗಿದೆ. ಜತೆಗೆ ಕ್ಷುದ್ರ ಆಚರಣೆ …

Read More »

ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್‌ ದೂರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ ಮಾಡಿದ್ದಾರೆ, ಲಂಚಕ್ಕೆ ಪೀಡಿಸಿದ್ದಾರೆ ಎಂದು ಆರೋಪಿಸಿ ಮಹಿಳಾ ವಸತಿ ನಿಲಯದ ವಾರ್ಡನ್‌ ಒಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ. ‘2024ರ ಆಗಸ್ಟ್‌ 13ರಂದು ನಾನು ಹೊರಗುತ್ತಿಗೆ ಆಧಾರದ ಮೇಲೆ ಮಹಿಳಾ ವಸತಿ ನಿಲಯದಲ್ಲಿ ವಾರ್ಡನ್ ಆಗಿ ಸೇವೆಗೆ ಸೇರಿದೆ. ಇಲಾಖೆಯ ಸಹಾಯಕ ನಿರ್ದೇಶಕ ಮತ್ತು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಲಿಂದ …

Read More »

ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಅಪಹರಿಸಿ ವ್ಯಕ್ತಿ ಹತ್ಯೆ

ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಉಲ್ಬಣಗೊಂಡಿದ್ದು ಮೈತೇಯಿ ಸಮುದಾಯಕ್ಕೆ ಸೇರಿದ ವ್ಯಕ್ತಿಯನ್ನು ಶಂಕಿತ ಕುಕಿ ಸಮುದಾಯದ ಬಂಡುಕೋರರು ಅಪಹರಿಸಿ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಬುಧವಾರ ತುಯಿಬೊಂಗ್ ಪ್ರದೇಶದಲ್ಲಿರುವ ಮನೆಯಿಂದ ರಿಷಿಕಾಂತ ಸಿಂಗ್ ಎಂಬ ವ್ಯಕ್ತಿಯನ್ನು ಮನೆಯಿಂದ ಅಪಹರಿಸಿದ ಬಂಡುಕೋರರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆಯಿಂದ ಇಲ್ಲಿನ ಕೆಲವು ಸ್ಥಳಗಳಲ್ಲಿ ಕಲ್ಲು ತೂರಾಟ ನಡೆದಿದೆ. ಹಾಗೂ ಪ್ರತಿಭಟನೆಗಳು ನಡೆದಿವೆ ಎಂದು ಪೊಲೀಸರು ಹೇಳಿದ್ದಾರೆ. ಹತ್ಯೆ ಮಾಡಿದವರನ್ನು ಯುನೈಟೆಡ್ …

Read More »

ನಕಲಿ ದಾಖಲೆ ಮೂಲಕ ನಿವೇಶನ ಕಬಳಿಕೆ ; ಸಿಸಿಬಿ ಪೊಲೀಸರಿಂದ ಆರೋಪಿ ಬಂಧನ

ಮಾಜಿ ಸಂಸತ್ ಸದಸ್ಯೆ ತೇಜಸ್ವಿನಿ ಗೌಡ ಅವರ ಸಹೋದರನಿಗೆ ಸೇರಿದ ನಿವೇಶನವನ್ನು ನಕಲಿ ದಾಖಲೆಗಳನ್ನು ಸೃಷ್ಟಿಸಿ ಕಬಳಿಸಿದ ಪ್ರಕರಣದಲ್ಲಿ, ಆರ್.ಎಂ.ವಿ. ಎರಡನೇ ಹಂತದ ನಾಗಶೆಟ್ಟಿಹಳ್ಳಿಯ ನಿವಾಸಿ ಎಂ. ನಾರಾಯಣಸ್ವಾಮಿ ಎಂಬ ಪ್ರಮುಖ ಆರೋಪಿಯನ್ನು ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ.ಪ್ರಕರಣದ ತನಿಖೆಯನ್ನು ಮುಂದುವರಿಸಿರುವ ಸಿಸಿಬಿ ಪೊಲೀಸರು, ಈ ಅಕ್ರಮದಲ್ಲಿ ಭಾಗಿಯಾಗಿರುವ ಇತರ ಆರೋಪಿಗಳಾದ ಮುನಿರಾಜು ಎಂ., ಎಂ. ಮುನಿಸ್ವಾಮಿ, ಮಮತಾ ಎಂ., ಸಂತೋಷ್ ಎಸ್. ಹಾಗೂ ಶ್ರೀಕಾಂತ್ ಅವರನ್ನು ಬಂಧಿಸುವುದಕ್ಕಾಗಿ ಕ್ರಮ …

Read More »

ಕೆರೆಯಲ್ಲಿ ಶವವಾಗಿ ಪತ್ತೆಯಾದ ಹೆಡ್ ಕಾನ್ಸ್ ಟೇಬಲ್

ಹೆಡ್ ಕಾನ್ಸ್ ಟೆಬಲ್ ಓರ್ವರು ಕೆರೆಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ರಾಮನಗರದ ನಡೆದಿದೆ.ಲಕ್ಷ್ಮಣ (51 ಮೃತ ಹೆಡ್ ಕಾನ್ಸ್ ಟೇಬಲ್. ಚನ್ನಪಟ್ಟಣ ಸಂಚಾರಿ ಠಾಣೆಯ ಹೆಡ್ ಕಾನ್ಸ್ ಟೇಬಲ್. ನಿನ್ನೆ ಕರ್ತವ್ಯಕ್ಕೆ ಗೈರಾಗಿದ್ದ ಲಕ್ಷ್ಮಣ್ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದರು.ಇಂದು ಕೆರೆಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಹೆಲ್ಮೆಟ್ ಸಹಿತವಾಗಿ ಅವರ ಮೃತ ದೇಹ ಕೆರೆಯಲ್ಲಿ ಪತ್ತೆಯಾಗಿದ್ದು, ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಕೆರೆಯ ದಡದಲ್ಲಿ ಅವರ ಬೈಕ್ ಕೂಡ ಇದೆ. ಇದು …

Read More »

ಪಡುಬಿದ್ರಿ: ಕಾರು ಢಿಕ್ಕಿಯಾಗಿ ಮಹಿಳೆಗೆ ಗಂಭೀರ ಗಾಯ

ರಸ್ತೆ ದಾಟಲು ನಿಂತಿದ್ದ ಪಡುಬಿದ್ರಿ ನಡಾಲು ಗ್ರಾಮದ ಲಲಿತಾ ಶೆಟ್ಟಿ ಅವರು ಕಾರು ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡ ಘಟನೆ ಬುಧವಾರ ಬೆಳಗ್ಗೆ ಪಡುಬಿದ್ರಿಯಲ್ಲಿ ಸಂಭವಿಸಿದೆ. ಮಂಗಳೂರಿನಿಂದ ಉಡುಪಿಗೆ ಹೋಗುತ್ತಿದ್ದ ಕಾರನ್ನು ಚಾಲಕ ರಸ್ತೆಯ ತೀರಾ ಎಡಬದಿಗೆ ಚಲಾಯಿಸಿಕೊಂಡು ಬಂದಿದ್ದು, ಅದು ಲಲಿತಾಗೆ ಢಿಕ್ಕಿ ಹೊಡೆಯಿತು.ರಸ್ತೆಗೆ ಬಿದ್ದ ಅವರ ಬಲಕೈ, ಎರಡೂ ಕಾಲುಗಳು ಹಾಗೂ ತಲೆಗೆ ಗಾಯ ವಾಯಿತು. ಪಡುಬಿದ್ರಿ ಸಿದ್ಧಿವಿನಾಯಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ವೈದ್ಯರ ಸೂಚನೆಯಂತೆ …

Read More »

ಪೊಲೀಸರು 5 ತಿಂಗಳಲ್ಲಿ 4 ಬಾರಿ ಅತ್ಯಾಚಾರ ಮಾಡಿದ್ರು” : ಕೈಯಲ್ಲಿ ಡೆತ್ ನೋಟ್ ಬರೆದುಕೊಂಡು ವೈದ್ಯೆ ಆತ್ಮಹತ್ಯೆ!

ಮಹಾರಾಷ್ಟ್ರದಲ್ಲಿ ವೈದ್ಯೆಯೊಬ್ಬರ ಆತ್ಮಹತ್ಯೆ ಸಂಚಲನ ಮೂಡಿಸಿದೆ. ಐದು ತಿಂಗಳಲ್ಲಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಎಸ್‌ಐ) ನಾಲ್ಕು ಬಾರಿ ತನ್ನ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎಂದು ಹೇಳಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.ದೌರ್ಜನ್ಯ ಬಹಿರಂಗ ಪಡೆಸಿದ್ದಾಳೆ. ಎಸ್‌ಐ ಗೋಪಾಲ್ ಬಡ್ನೆ ತನಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಹಿಂಸೆ ನೀಡಿದ್ದಾರೆ ಎಂದು ಆಕೆ ಆರೋಪಿಸಿದ್ದಾಳೆ. ಆತನ ಕಿರುಕುಳದಿಂದಲೇ ತಾನು ಆತ್ಮಹತ್ಯೆ ಮಾಡಿಕೊಂಡಿದ್ದೇನೆ ಎಂದು ಆಕೆ ಹೇಳಿದ್ದಾಳೆ. ಪ್ರಸ್ತುತ, ಸರ್ಕಾರ ಎಸ್‌ಐ ಬಡ್ನೆಯನ್ನ ಅಮಾನತುಗೊಳಿಸಿದೆ.

Read More »

ಕರ್ನೂಲಿನಲ್ಲಿ ಘನಘೋರ ಬಸ್​ ದುರಂತ!

ಆಂಧ್ರಪ್ರದೇಶದ ಕರ್ನೂಲಿನಲ್ಲಿ ಘನಘೋರ ಬಸ್​ ದುರಂತ ಸಂಭವಿಸಿದೆ. ಚಿನ್ನಟೇಕೂರು ಬಳಿಯ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಸ್ಲೀಪರ್​ ಬಸ್​ ಅಗ್ನಿಗಾಹುತಿಯಾಗಿದೆ . ಹೈದರಾಬಾದ್‌ನಿಂದ ಬೆಂಗಳೂರಿಗೆ ಪ್ರಯಾಣಿಸ್ತಿದ್ದ ಕಾವೇರಿ ಟ್ರಾವೆಲ್ಸ್ ಬಸ್​ನಲ್ಲಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದೆ.ಮುಂಜಾನೆ 3 ಗಂಟೆ ಸುಮಾರಿಗೆ ಬಸ್​ನಲ್ಲಿ ಮಲಗಿದ್ದ 23 ಪ್ರಯಾಣಿಕರು ಮಲಗಿದ್ದಲ್ಲೇ ಸಜೀವ ದಹನವಾಗಿದ್ದಾರೆ. ಆದರೆ, ಆ ಬಸ್​ ಟೋಲ್​ ದಾಟುವಾಗ ಹೈ ವೋಲ್ಟೇಜ್‌ ಲೈಟ್‌ಅನ್ನಯ ಹೈಬೀಮ್‌ನಲ್ಲೇ ಹಾಕಿಕೊಂಡೇ ಹೋಗಿತ್ತು. ಇದೀಗ ಟೋಲ್ ಪ್ಲಾಜಾದಲ್ಲಿ ಬಸ್‌ …

Read More »