Breaking News

ಉತ್ತರ ಕರ್ನಾಟಕ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಹೆಚ್ಚಿನ ಗಮನ ಹರಿಸಬೇಕು: ಲಕ್ಷ್ಮಣ ಸವದಿ

ಬೆಳಗಾವಿ : ಉತ್ತರ ಕರ್ನಾಟಕ ಅಭಿವೃದ್ಧಿಗೆ ಔದ್ಯೋಗಿಕ ಕ್ರಾಂತಿ ಆಗಬೇಕು. ಕೇಂದ್ರ ಸರ್ಕಾರ ಈ ಬಗ್ಗೆ ಹೆಚ್ಚು ಗಮನಹರಿಸಬೇಕು ಎಂದು ಶಾಸಕ ಲಕ್ಷ್ಮಣ್ ಸವದಿ ಒತ್ತಾಯಿಸಿದ್ದಾರೆ.
ಕಳಸ ಬಂಡೂರಿಗೆ ಮಾಜಿ ಸಿಎಂ ಬೊಮ್ಮಯಿ ಪಾದಯಾತ್ರೆ ನಡೆಸಿದ್ದರು.ಈಗ ಕೇಂದ್ರದಿಂದ NOC ಪಡೆದುಕೊಳ್ಳಬಹುದು. ಈ ಬಗ್ಗೆ ಪ್ರಯತ್ನಪಡಬೇಕು. ಕೇಂದ್ರ ಸರ್ಕಾರದ ನೀತಿ ಬಗ್ಗೆ ಸುದೀರ್ಘ ಚರ್ಚೆ ನಡೆಸಬೇಕು ಎಂದು ಆಗ್ರಹಿಸಿದರು.ಕೃಷ್ಣ ಮೇಲ್ದoಡೆ ಯೋಜನೆ ಸಂಬಂಧ ಪ್ರತಿಭಟನೆ ನಡೆಯುತ್ತಿದೆ.
ಬಿಜೆಪಿ ಅವಧಿಯಲ್ಲಿ ಯಾವ ಪ್ರಯತ್ನವು ನಡೆದಿಲ್ಲ.ಸಿಎಂ ಹಾಗೂ ಡಿಸಿಎಂ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡಿದ್ದಾರೆ ಎಂದು ಹೇಳಿದರು.
ಇಡೀ ದೇಶದಲ್ಲಿ ಸಕ್ಕರೆ ಉತ್ಪಾದನೆಯಲ್ಲಿ ಕರ್ನಾಟಕ 3ನೇ ಸ್ಥಾನದಲ್ಲಿದೆ. ಈ ಭಾಗದಲ್ಲಿ ಕ್ರಾಂತಿ ಆಗಿದೆ. ಕೋಟ್ಯಂತರ ಟನ್ ಮೌಲ್ಯದ ಕಬ್ಬನ್ನ ಬೆಳೆಯಲಾಗುತ್ತಿದೆ. ಕಬ್ಬು ಬೆಳೆಗಾರರ ಹಿತ ಕಾಪಾಡಬೇಕು. ಕೇಂದ್ರ ಸರ್ಕಾರಕ್ಕೆ ಬರೀ ಸಕ್ಕರೆಯಿಂದ ವಾರ್ಷಿಕ 9800ಕೋಟಿ ಜಿಎಸ್ಟಿ ಕಟ್ಟುತ್ತಿದ್ದೇವೆ. ಕೇಂದ್ರದ ಈಥೆನಾಲ್ ಪಾಲಿಸಿ ಕಂಟಕವಾಗಿದೆ. ಕೇಂದ್ರ ಇ ಬಗ್ಗೆ ಗಮನ ಹರಿಸಬೇಕು ಎಂದು ಸವದಿ ಕಿಡಿಕಾರಿದರು. ದ್ರಾಕ್ಷಿಗೂ ಬೆಂಬಲ ಬೆಲೆಯನ್ನು ಕೇಂದ್ರ ನಿರ್ಧಾರಿಸಬೇಕು. ಅಂಗನವಾಡಿ ಮಕ್ಕಳಿಗೆ ಒಣದ್ರಾಕ್ಷಿ ಕೊಡಬೇಕು ಇದ್ರಿಂದ ರೈತರಿಗೆ ಅನುಕೂಲವಾಗುತ್ತದೆ ಎಂದರು.
.ರೈತರಿಗೆ ಸೂಕ್ತ ಪ್ರಮಾಣದಲ್ಲಿ ಸಾಲ ಸಿಗುತ್ತಿಲ್ಲ. ನಬಾರ್ಡ್ ನೀತಿಯಿಂದ ಅನ್ನದಾತರು ಸಾಲ ವಂಚಿತರಾಗುತ್ತಿದ್ದಾರೆ. ಇದೆಲ್ಲದರ ಬಗ್ಗೆ ಕೇಂದ್ರ ಗಮನ ಹರಿಸಬೇಕು ಎಂದು ಲಕ್ಷ್ಮಣ ಸವದಿ ಮನವಿ ಮಾಡಿದರು.

Share News

About BigTv News

Check Also

ಉಡುಪಿ: ಮದುವೆ ನಿರಾಕರಿಸಿದ ವ್ಯಕ್ತಿಯನ್ನು ಬೆದರಿಸಿ 42ಲಕ್ಷ ರೂ. ಹಣ ವಸೂಲಿ; ಶಿಕ್ಷಕಿ ಸಹಿತ ಇಬ್ಬರ ಬಂಧನ

ಉಡುಪಿ: ಮದುವೆ ಪ್ರಸ್ತಾಪ ನಿರಾಕರಿಸಿದ ವ್ಯಕ್ತಿಗೆ ಸುಳ್ಳು ಪ್ರಕರಣ ದಾಖಲಿಸುವುದಾಗಿ ಬೆದರಿಸಿ ₹42.97 ಲಕ್ಷ ವಸೂಲಿ ಮಾಡಿ ವಂಚಿಸಿದ ಆರೋಪದಲ್ಲಿ …

Leave a Reply

Your email address will not be published. Required fields are marked *