Breaking News

ಬಾದಾಮಿ ಆಟೊ ಚಾಲಕರಿಂದ ಪ್ರವಾಸಿಗರ ಸುಲಿಗೆ: ನಿಸರ್ಗ ಬಳಗದ ಅಧ್ಯಕ್ಷ ಎಸ್.ಎಚ್. ವಾಸನ ಹೇಳಿಕೆ.

ಬಾದಾಮಿಯ ಮೇಣಬಸದಿ ಆವರಣದಲ್ಲಿ ಕಾರ್ ಪಾರ್ಕಿಂಗ್ ಸ್ಥಳವಿದ್ದರೂ ಕೆಲವು ಆಟೊ ಚಾಲಕರು ಅಂಬೇಡ್ಕರ್ ವೃತ್ತದಲ್ಲಿಯೇ ಕಾರು ನಿಲ್ಲಿಸಿ, ‘ಕಾರ್ ಪಾರ್ಕಿಂಗ್ ಭರ್ತಿಯಾಗಿದೆ, ಜಾಗ ಇಲ್ಲ.ಆಟೊದಲ್ಲೇ ಹೋಗಿ’ ಎಂದು ದುಂಬಾಲು ಬೀಳುತ್ತಿದ್ದಾರೆ.ಮೇಣಬಸದಿ ಮತ್ತು ಭೂತನಾಥ ದೇವಾಲಯ ಸ್ಮಾರಕಗಳ ಸಂಪರ್ಕಕ್ಕಾಗಿ ಪ್ರವಾಸಿಗರಿಗೆ ಸೂಕ್ತ ಸೌಲಭ್ಯ ಕಲ್ಪಿಸಲು ಪ್ರವಾಸೋದ್ಯಮ ಇಲಾಖೆಯಿಂದ ಪಾರ್ಕಿಂಗ್ ಪ್ಲಾಜಾ ನಿರ್ಮಾಣ ಮತ್ತು ಹೊಂಡದ ದಂಡೆಯ 96 ಮನೆಗಳ ಸ್ಥಳಾಂತರದ ಬಳಿಕ ಅನುಕೂಲವಾಗಲಿದೆ. ಈ ಎರಡೂ ಕಾಮಗಾರಿ ಸರ್ಕಾರ ಕೈಗೊಳ್ಳಬೇಕಿದೆ.ಮಹಾಕೂಟ, ಪಟ್ಟದಕಲ್ಲು ಮತ್ತು ಐಹೊಳೆಗೆ ಹೋಗಲು ಆಟೊ ಮತ್ತು ಕಾರಿನ ಬಾಡಿಗೆ ನಿಗದಿ ಇಲ್ಲ. ಸಂಬಂಧಿಸಿದ ಇಲಾಖೆ ದರ ನಿಗದಿ ಮಾಡಿ ಹೋಟೆಲ್, ಬಸ್ ನಿಲ್ದಾಣ, ರೈಲ್ವೆ ಸ್ಟೇಶನ್, ಸ್ಮಾರಕಗಳ ಸಮೀಪ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಫಲಕವನ್ನು ಅಳವಡಿಸಬೇಕಿದೆ. ಕಾರ್ ಮತ್ತು ಆಟೊ ಚಾಲಕರಿಗೂ ತಿಳಿಸಬೇಕಿದೆ’ ಎಂದು ನಿಸರ್ಗ ಬಳಗದ ಅಧ್ಯಕ್ಷ ಎಸ್.ಎಚ್. ವಾಸನ ಹೇಳಿದರು.

Share News

About BigTv News

Check Also

ಬೆಂಗಳೂರಲ್ಲಿ ನಕಲಿ ಡೇಟಿಂಗ್ ಬಲೆ, 20 ಲಕ್ಷ ರೂ. ಮೌಲ್ಯದ ಚಿನ್ನ ಲೂಟಿ

ಬೆಂಗಳೂರು: ಚಂದ್ರಾ ಲೇಔಟ್‌ನಲ್ಲಿ ಡೇಟಿಂಗ್ ಆಯಪ್ ಮೂಲಕ ಪರಿಚಯವಾದ ವ್ಯಕ್ತಿಯನ್ನು ಮನೆಗೆ ಕರೆಸಿಕೊಂಡ ಯುವಕನಿಗೆ ಚಾಕು ತೋರಿಸಿ ಬೆದರಿಸಿ, 226 …

Leave a Reply

Your email address will not be published. Required fields are marked *