Breaking News

ಚುನಾವಣೆ: ಜಾತಿಗಣತಿ ಸೊಶಿಯೋ ಎಕಾನಮಿ ಸ್ಟಡಿ ಎಂದ ಸಚಿವ!!

ಹುಬ್ಬಳ್ಳಿ: ಜಾತಿಗಣತಿ ಮಾಡುತ್ತಿರುವುದು ಜಾತಿ ಜಗಳ ಹಚ್ಚುವುದಕ್ಕೆ ಅಲ್ಲ. ಪ್ರತಿಯೊಂದು ಜಾತಿಗಳಿಗೂ ಸಾಮಾಜಿಕ ನ್ಯಾಯ ಒದಗಿಸಲು. ಇದು ಸೊಶಿಯೋ ಎಕನಾಮಿಕ್ ಸ್ಟಡಿಯಾಗಿದೆ. ಅಲ್ಲದೇ ಕಾರ್ಯಕರ್ತರಿಗೆ ಶಕ್ತಿ ತುಂಬುವ ಸದುದ್ದೇಶದಿಂದ ಮೂರು ತಿಂಗಳ ಅವಧಿಯಲ್ಲಿಯೇ ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯತ ಚುನಾವಣೆ ನಡೆಸಲಾಗುತ್ತದೆ ಎಂದು ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು. ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಬಿಜೆಪಿ ಅಧಿಕಾರದ ಅವಧಿಯಲ್ಲಿ ಒಂದೇ ಒಂದೇ ಅಧಿಕಾರ ವಿಕೇಂದ್ರೀಕರಣದ ನಿರ್ಧಾರ ತೆಗೆದುಕೊಂಡಿಲ್ಲ. ನಾವು ಅಧಿಕಾರ ವಿಕೇಂದ್ರೀಕರಣದ ಪರವಾಗಿದ್ದೇವೆ ಎಂದರು. ಜಾತಿ ಜನಗಣತಿ ಜನರ ನಡುವೆ ಜಗಳ ಹಚ್ಚುವುದಕ್ಕೆ ಅಲ್ಲ. ಪ್ರತಿಯೊಂದು ಜಾತಿಗೂ ಸಾಮಾಜಿಕ ನ್ಯಾಯ ಒದಗಿಸುವ ಜೊತೆಗೆ ಅಭಿವೃದ್ಧಿ ಮಾಡುವ ಸದುದ್ದೇಶದಿಂದ ಮಾಡಲಾಗುತ್ತದೆ ಎಂದು ಅವರು ಹೇಳಿದರು.

Share News

About BigTv News

Check Also

ಉಡುಪಿ: ಎಂಬ್ರಾಯ್ಡರಿ ಅಂಗಡಿಗೆ ನುಗ್ಗಿ ಮಾಲಕನ ಮೇಲೆ ಆಸಿಡ್ ದಾಳಿ!

ಉಡುಪಿ: ಬಾಡಿಗೆ ಮನೆಯ ಠೇವಣಿ ಹಣ ಮರಳಿ ನೀಡದ ವಿಚಾರಕ್ಕೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಎಂಬ್ರಾಯ್ಡರಿ ಅಂಗಡಿ ಮಾಲಕನ ಮೇಲೆ …

Leave a Reply

Your email address will not be published. Required fields are marked *