Breaking News

ಅಕ್ಟೋಬರ್​ನಲ್ಲಿ ₹1 ಲಕ್ಷ ಕೋಟಿ ಗಡಿ ದಾಟಿತು ಜಿಎಸ್​​ಟಿ ಸಂಗ್ರಹ..!

ಅಕ್ಟೋಬರ್​ ತಿಂಗಳಲ್ಲಿ ಸಂಗ್ರಹವಾದ ಜಿಎಸ್​​ಟಿ(ಸರಕು ಹಾಗೂ ಸೇವಾ ತೆರಿಗೆ) ಹಣ ₹1 ಲಕ್ಷ ಕೋಟಿ ದಾಟಿದೆ ಎಂದು ಹಣಕಾಸು ಸಚಿವ ಅರುಣ್​ ಜೇಟ್ಲಿ ಹೇಳಿದ್ದಾರೆ. ಸೆಪ್ಟೆಂಬರ್​​ನಲ್ಲಿ ಜಿಎಸ್​​ಟಿಯಿಂದ ಬಂದಿದ್ದ ಆದಾಯ ₹94,442 ಕೋಟಿ. ಏಪ್ರಿಲ್​​ನಲ್ಲಿ ಮೊದಲ ಬಾರಿಗೆ ಲಕ್ಷ ಗಡಿ ದಾಟಿದ್ದ ಜಿಎಸ್​​ಟಿ ಹಣ ಅನಂತರ 90 ಸಾವಿರ ಕೋಟಿ ಆಸುಪಾಸಿನಲ್ಲೇ ಇತ್ತು. ಇದೀಗ ₹1 ಲಕ್ಷ ಕೋಟಿ ಗಡಿ ದಾಟಿರುವುದಕ್ಕೆ ಜೇಟ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.ಕಡಿಮೆ ದರ, ಕಡಿಮೆ ತೆರಿಗೆ ವಂಚನೆ, ಹೆಚ್ಚಿನ ಅನುಸರಣೆ, ಏಕಮಾತ್ರ ತೆರಿಗೆ ಹಾಗೂ ತೆರಿಗೆ ಅಧಿಕಾರಿಗಳಿಂದ ನಗಣ್ಯವಾದ ಹಸ್ತಕ್ಷೇಪವೇ ಜಿಎಸ್​​ಟಿಯ ಯಶಸ್ಸಿಗೆ ಕಾರಣ ಎಂದು ಜೇಟ್ಲಿ ಟ್ವೀಟ್​ ಮಾಡಿದ್ದಾರೆ.ಮೇ ತಿಂಗಳಲ್ಲಿ ಜಿಎಸ್​​ಟಿಯಿಂದ ಗಳಿಸಿದ್ದ ಆದಾಯ ₹94,016 ಕೋಟಿ, ಹಾಗೇ ಜೂನ್​ನಲ್ಲಿ ₹95,610 ಕೋಟಿ ಸಂಗ್ರಹವಾಗಿತ್ತು. ಇನ್ನು ಜುಲೈನಲ್ಲಿ ₹96,483 ಕೋಟಿ, ಆಗಸ್ಟ್​​ನಲ್ಲಿ ₹93,960 ಕೋಟಿ ಹಾಗೂ ಸೆಪ್ಟೆಂಬರ್​​ನಲ್ಲಿ ₹93,960 ಕೋಟಿ ಸಂಗ್ರಹವಾಗಿತ್ತು.

Share News

About Shaikh BIG TV NEWS, Hubballi

Check Also

ಮ್ಯಾನ್ಮರ್ ಭೂಕಂಪನದಲ್ಲಿ 1700ಕ್ಕೂ ಹೆಚ್ಚು ಮಂದಿ ದುರ್ಮರಣ.!

ಸ್ಪ್ರಿಂಗ್ ರೆವಲ್ಯೂಷನ್ ಮ್ಯಾನ್ಮರ್ ಮುಸ್ಲಿಮ್ ನೆಟ್ ವರ್ಕ್ ಸಮಿತಿಯ ಸದಸ್ಯ ಕುನ್ ಕೀ ಶುಕ್ರವಾರ ಸಂಭವಿಸಿದ ಭೂಕಂಪನದಿಂದ 60 ಮಸೀದಿಗಳು …

Leave a Reply

Your email address will not be published. Required fields are marked *