ಪಹಾಲ್ಗಮನಲ್ಲಿ ಹಾತ್ತೇಗಿಡಾದ ಕರ್ನಾಟಕದ ಮೂವರ ಕುಟುಂಬಕ್ಕೆ ತಲಾ ಒಂದು ಲಕ್ಷ ರೂಪಾಯಿ ಪರಿಹಾರ ಮತ್ತು ಮೃತರ ಕುಟುಂಬಸ್ಥರ ಸಾಮಾಜಿಕ ಶೈಕ್ಷಣಿಕ ಜವಾಬ್ದಾರಿ ಯನ್ನು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠ ವಹಿಸಿಕೊಳ್ಳಲಿದೆ ಎಂದು ಪೀಠಾಧಿಪತಿ ಶ್ರೀ ಸುಬು ದೆಂದ್ರ ತೀರ್ಥ ಶ್ರೀಪದಂಗಳವರು ತಿಳಿಸಿದರು. ಉಗ್ರರ ಧಾಳಿಗೆ ಬಲಿಯಾದವರೆಲ್ಲರೂ ನಮ್ಮವರೇ. ನಮ್ಮ ಕುಟುಂಬದಲ್ಲಿ ಒಬ್ಬರನ್ನು ಕಳೆದುಕೊಂಡ ದುಃಖ ನಮಗಿದೆ. ಹೀಗಾಗಿ ಮೃತರ, ಗಾಯಾಳುಗಳ ಕುಟುಂಬದ ಜೊತೆಗೆ ನಾವಿದ್ದೀವಿ ಎಂದು ಧೈರ್ಯ ತುಂಬಿದರು. ದೇಶದಲ್ಲಿ ಅಶಾಂತಿಯ ವಾತಾವರಣ ಮೂಡಿಸುವ ಉದ್ದೇಶ ಕೆಲವರಲ್ಲಿ ಇದೆ. ಇದಕ್ಕೆ ನಾವೆಲ್ಲರೂ ಒಗ್ಗಟ್ಟಾಗಿ ಉತ್ತರ ನೀಡಬೇಕಿದೆ. ಈ ಮಹತ್ ಕಾರ್ಯ ಕೇಸರಿ ರಾಯರ ಬಲ ಇದ್ದೇ ಇರಲಿದೆ ಎಂದು ಹೇಳಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

