Breaking News

ದೇಶಾದ್ಯಂತ 32 ವಿಮಾನ ನಿಲ್ದಾಣಗಳು ತಾತ್ಕಾಲಿಕ ಸ್ಥಗಿತ – ಪ್ರಯಾಣಿಕರಿಗೆ ವಾರ್ನಿಂಗ್‌!

ಪಾಕಿಸ್ತಾನ ಹಾಗೂ ಭಾರತದ ನಡುವಿನ ಘರ್ಷಣೆಯಿಂದ ದೇಶದ 32 ಏರ್​ಪೋರ್ಟ್​ಗಳನ್ನು ತಾತ್ಕಾಲಿಕವಾಗಿ ಮುಚ್ಚುವಂತೆ ಈ ಮೊದಲು ಹೇಳಿತ್ತು.ಭಾರತ ಹಾಗೂ ಪಾಕಿಸ್ತಾನ ನಡುವಿನ ಘರ್ಷಣೆ ಮತ್ತಷ್ಟು ತೀವ್ರಗೊಂಡಿದ್ದು, ಉದ್ವಿಗ್ನತೆ ಹಿನ್ನೆಲೆಯಲ್ಲಿ ಗಡಿ ಭಾಗದಲ್ಲಿರುವ ಏರ್​ಪೋರ್ಟ್​ಗಳನ್ನು ಬಂದ್ ಮಾಡಲಾಗಿದೆ.ಚಂಡೀಗಢ, ಶ್ರೀನಗರ, ಲೂದಿಯಾನ, ಅಮೃತಸರ, ಪಟಿಯಾಲಾ,ಶಿಮ್ಲ, ಧರ್ಮಶಾಲಾ
ಸೇರಿದಂತೆ 32ಕ್ಕೂ ಹೆಚ್ಚು ಏರ್ಪೋರ್ಟ್ ಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.ವಿಮಾನ ಪ್ರಯಾಣ ಮಾಡುವಂತಹ ಪ್ರಯಾಣಿಕರು 3 ಗಂಟೆ ಮೊದಲೇ ವಿಮಾನ ನಿಲ್ದಾಣಕ್ಕೆ ಬರುವಂತೆ ಈಗಾಗಲೇ ಸೂಚಿಸಲಾಗಿದೆ. ದೇಶದ್ಯಾಂತ ಇರುವ ಏರ್​ಪೋರ್ಟ್​ಗಳಲ್ಲಿ ಭದ್ರತೆಯನ್ನು ಹೆಚ್ಚಿಸಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಮುಂಚಿತವಾಗೆ ಬರಬೇಕೆಂದು ಹೇಳಲಾಗಿದೆ. ನೆರೆಯ ರಾಷ್ಟ್ರ ಪಾಕ್ ಮಧ್ಯ ಘರ್ಷಣೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಈ ಹಿನ್ನೆಲೆ ಸರ್ಕಾರ ಕಠಿಣ ನಿರ್ಧಾರ ಕೈಗೊಂಡಿದೆ.

Share News

About BigTv News

Check Also

ಮನೆಯಲ್ಲೇ ಪೆನ್ನಿ ಡ್ರಗ್ಸ್‌ ಮಾರಾಟ – ಆರೋಪಿಗಳನ್ನು ಹಿಡಿದುಕೊಟ್ಟ ಪೊಲೀಸ್ ಶ್ವಾನ ಆದಿತಿ!

ಬೆಳಗಾವಿ : ಕುಂದಾನಗರಿ ಬೆಳಗಾವಿ ಡ್ರಗ್ಸ್ ಅಡ್ಡೆ ಆಗ್ತಿದ್ಯಾ ಅನ್ನೋ ಅನುಮಾನ ಶುರುವಾಗಿದೆ. ಸುಳಗಾ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ಅಡಗಿಸಿಕೊಂಡಿದ್ದ …

Leave a Reply

Your email address will not be published. Required fields are marked *