ಚಲಿಸುತ್ತಿರುವ ರೈಲಿನಲ್ಲಿ ಪತ್ನಿಯ ಕೈಯಲ್ಲಿದ್ದ ಬ್ಯಾಗ್ ಕಿತ್ತುಕೊಳ್ಳಲು ಬಂದ ದರೋಡೆಕೋರನಿಂದ ತನ್ನ ಪತ್ನಿಯನ್ನು ರಕ್ಷಿಸುವ ಭರದಲ್ಲಿ ಪತಿಯೊರ್ವ ತನ್ನ ಒಂದು ಕೈಯನ್ನೇ ಕಳೆದುಕೊಂಡಿರುವ ಆಘಾತಕಾರಿ ಘಟನೆ ಮುಂಬೈಯಲ್ಲಿ ನಡೆದಿದೆ.ಓರ್ವ ಕಳ್ಳ ಇವರ ಬಳಿ ಬಂದು ದೀಪಾಲಿ ಅವರ ಕೈಯಲ್ಲಿದ್ದ ಬ್ಯಾಗ್ ಎಳೆಯಲು ಯತ್ನಿಸಿದ್ದಾನೆ ಆದರೆ ದೀಪಾಲಿ ಮಾತ್ರ ತನ್ನ ಕೈಯಲ್ಲಿದ್ದ ಬ್ಯಾಗ್ ಬಿಡಲಿಲ್ಲ ಈ ವೇಳೆ ಇಬ್ಬರ ನಡುವೆ ಹೊಯ್ ಕೈ ನಡೆದು ಕಳ್ಳ ಮಹಿಳೆಯನ್ನು ಬ್ಯಾಗ್ ಸಮೇತ ಬೋಗಿಯ ಬಾಗಿಲು ತನಕ ಎಳೆದುಕೊಂಡು ಹೋಗಿದ್ದಾನೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

