Breaking News

ದಿಬ್ಬಣದ ವಾಹನ ಅಪಘಾತ, ವಧು ಸೇರಿ ಐವರು ಸಾವು, ವರ ಗಂಭೀರ!!

ಮದುವೆ ದಿಬ್ಬಣ ಸಾಗಿಸುತ್ತಿದ್ದ ವಾಹನವು ಟ್ರಕ್‌ಗೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ವಧು ಸೇರಿದಂತೆ ಐವರು ದಾರುಣವಾಗಿ ಸಾವನ್ನಪ್ಪಿ, ವರ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.ಮೃತರಲ್ಲಿ ಒಬ್ಬರ ಗುರುತನ್ನು ದೃಢಪಡಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಗಂಭೀರವಾಗಿ ಗಾಯಗೊಂಡ ಎಂಟು ಪ್ರಯಾಣಿಕರಲ್ಲಿ ಉದಯಪುರಾವತಿಯ ವರ ವಿಕ್ರಮ್ ಮೀನಾ (25) ಸೇರಿದ್ದಾರೆ.ಮದುವೆ ದಿಬ್ಬಣ ಹೊತ್ತೊಯ್ಯುತ್ತಿದ್ದ ವಾಹನವು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಒಳಗೆ ಇದ್ದವರನ್ನು ಹರಸಾಹಸ ಪಟ್ಟು ಹೊರತೆಗೆಯಲಾಗಿದೆ.ಉದಯಪುರಾವತಿ ಪಟ್ಟಣಕ್ಕೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Share News

About BigTv News

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *