Breaking News

ಪತಿಗೆ ಮದ್ಯ ಕುಡಿಸಿ ಪ್ರಿಯಕರನ ಜೊತೆ ಸೇರಿ ತಲೆ ಕತ್ತರಿಸಿದ ಪತ್ನಿ !

ಇಮ್ರಾನ್ ಎಂಬ ವ್ಯಕ್ತಿಯನ್ನು ಆತನ ಪತ್ನಿ ಶೀಬಾ ಮತ್ತು ಆಕೆಯ ಪ್ರಿಯಕರ ಫರ್ಮನ್ ಸೇರಿ ಕೊಂದಿದ್ದಾರೆ. ಶೀಬಾ ಮತ್ತು ಫರ್ಮನ್ ಕಳೆದ ಮೂರು ವರ್ಷಗಳಿಂದ ಅಕ್ರಮ ಸಂಬಂಧ ಹೊಂದಿದ್ದರು. ವಿದೇಶದಿಂದ 25 ದಿನಗಳ ಹಿಂದೆ ವಾಪಸ್ಸಾಗಿದ್ದ ಫರ್ಮನ್‌ನ ಸ್ನೇಹಿತ ರಫೀಕ್ ಕೂಡ ಈ ಕೃತ್ಯದಲ್ಲಿ ಭಾಗಿಯಾಗಿದ್ದಾನೆ.ಕಂಚನ್‌ಖೇಡಾ ಬಳಿ ನಗರದ ಚರಂಡಿಯಲ್ಲಿ ಇಮ್ರಾನ್‌ನ ತಲೆ ಕತ್ತರಿಸಿದ ದೇಹ ಪತ್ತೆಯಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಮಂಗಳವಾರ ಈ ಪ್ರಕರಣವನ್ನು ಬೇಧಿಸಿದ ಪೊಲೀಸರು, ಇಮ್ರಾನ್‌ನ ಪತ್ನಿ ಶೀಬಾ ಮತ್ತು ಆಕೆಯ ಪ್ರಿಯಕರ ಫರ್ಮನ್‌ನನ್ನು ಬಂಧಿಸಿದ್ದಾರೆ. ಪ್ರಕರಣದ ಮತ್ತೊಬ್ಬ ಪ್ರಮುಖ ಆರೋಪಿ ರಫೀಕ್ ಇನ್ನೂ ತಲೆಮರೆಸಿಕೊಂಡಿದ್ದು, ಪೊಲೀಸರು ಆತನ ಪತ್ತೆಗಾಗಿ ಕಾರ್ಯಾಚರಣೆ ಮುಂದುವರಿಸಿದ್ದಾರೆ.

Share News

About BigTv News

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *