ದಿನಸಿ ಅಂಗಡಿಯಲ್ಲಿ ಬರುತ್ತಿದ್ದ ಆದಾಯ ದಿನದ ಅಗತ್ಯಕ್ಕೆ ಸರಿಹೋಗುತ್ತಿತ್ತು. ಇಲ್ಲೇ ಇದ್ದರೆ ಬದುಕು ಆರಕ್ಕೇರದ ಮೂರಕ್ಕಿಳಿಯದ ಸ್ಥಿತಿಯಲ್ಲೇ ಇರುತ್ತೆ ಎಂಬುದು ಖಾತ್ರಿಯಾದ ಬಳಿಕ ಸಂಜೀವ್ ಮತ್ತು ರಾಜೀವ್ ಗುಪ್ತಾ ಅವರು ಊರು ಬಿಟ್ಟು ಹೊಸ ಸಂಪಾದನೆಗಾಗಿ ಘಾಜಿಯಾಬಾದ್ ಪಟ್ಟಣಕ್ಕೆ ಹೋಗುತ್ತಾರೆ.ಇವತ್ತು ಸಮ್ಮರ್ಕೂಲ್ ಸಂಸ್ಥೆ ಪ್ರತೀ ತಿಂಗಳು ಒಂದು ಲಕ್ಷ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತದೆ. ಅದರ ಉತ್ಪನ್ನಗಳಲ್ಲಿ ಶೇ. 80ರಷ್ಟವು ಅವರೇ ನಿರ್ಮಿಸಿದಂಥವು. ಎಲ್ಇಡಿ ಟಿವಿ, ವಾಷಿಂಗ್ ಮೆಷೀನ್ ಇತ್ಯಾದಿ ಉತ್ಪನ್ನಗಳನ್ನು ಅವರು ಬೇರೆ ಬ್ರ್ಯಾಂಡ್ಗಳಿಂದ ಪಡೆದು ಮಾರಾಟ ಮಾಡುತ್ತಾರೆ. ಅವರ ಶೇ. 90ರಷ್ಟು ಉತ್ಪನ್ನಗಳ ಮಾರಾಟವು ಆಫ್ಲೈನ್ನಲ್ಲಿ ರೀಟೇಲ್ ಮಳಿಗೆಗಳ ಮೂಲಕ ಆಗುತ್ತದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

