Breaking News

ವಿಷಪೂರಿತ ನಾಗರಹಾವನ್ನು ಕಚ್ಚಿದ ಒಂದು ವರ್ಷದ ಮಗು; ಹಾವು ಸಾವು!

ಪಶ್ಚಿಮ ಚಂಪಾರಣ್ ಜಿಲ್ಲೆಯ ಮಜೌಲಿಯಾ ಬ್ಲಾಕ್‌ನ ಮೊಹ್ಚಿ ಬಂಕಟ್ವಾ ಗ್ರಾಮದಲ್ಲಿ ನಡೆದಿದೆ. ಮಗುವನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿ ಮಜೌಲಿಯಾ ಪಿಎಚ್‌ಸಿಗೆ ದಾಖಲಿಸಲಾಗಿತ್ತು. ಅಲ್ಲಿ ಪ್ರಥಮ ಚಿಕಿತ್ಸೆಯ ನಂತರ, ಬೆಟ್ಟಿಯಾದಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ (ಜಿಎಂಸಿಎಚ್) ರವಾನಿಸಲಾಗಿತ್ತು.ಮನೆಯಲ್ಲಿ ಆಟವಾಡುತ್ತಿದ್ದಾಗ ಎರಡು ಅಡಿ ಉದ್ದದ ನಾಗರಹಾವು ಬಂದಿತ್ತು ಎಂದು ಅಜ್ಜಿ ಮಾಟೇಶ್ವರಿ ದೇವಿ ಹೇಳಿದರು. ಅದನ್ನು ಆಟಿಕೆ ಎಂದು ಭಾವಿಸಿ ಮಗು ಹಾವನ್ನು ಹಿಡಿದುಕೊಂಡು ತನ್ನ ಹಲ್ಲುಗಳಿಂದ ಕಚ್ಚಿದೆ. ಇದಾದ ಕೂಡಲೇ ನಾಗರಹಾವು ಸತ್ತುಹೋಯಿತು. ಮಗುವು ಹಾವನ್ನು ಕಚ್ಚಿ ಎರಡು ತುಂಡುಗಳಾಗಿತ್ತು ಎಂದು ಹೇಳಲಾಗುತ್ತಿದೆ.ಬೆಟ್ಟಯ್ಯದ ಜಿಎಂಸಿಎಚ್ ಆಸ್ಪತ್ರೆಯ ಉಪ ಅಧೀಕ್ಷಕ ಡಾ. ದಿವಾಕಾಂತ್ ಮಿಶ್ರಾ, ಮಗುವಿಗೆ ವಿಷಪ್ರಾಶನದ ಯಾವುದೇ ಲಕ್ಷಣಗಳಿಲ್ಲ ಎಂದು ಹೇಳಿದರು. ಪ್ರಸ್ತುತ ಚಿಕಿತ್ಸೆ ನಡೆಯುತ್ತಿದೆ. ಮಗು ಪ್ರಾಣಾಪಾಯದಿಂದ ಪಾರಾಗಿದೆ ಎಂದು ಹೇಳಿದ್ದಾರೆ

Share News

About BigTv News

Check Also

ಬೆಂಗಳೂರಲ್ಲಿ ನಕಲಿ ಡೇಟಿಂಗ್ ಬಲೆ, 20 ಲಕ್ಷ ರೂ. ಮೌಲ್ಯದ ಚಿನ್ನ ಲೂಟಿ

ಬೆಂಗಳೂರು: ಚಂದ್ರಾ ಲೇಔಟ್‌ನಲ್ಲಿ ಡೇಟಿಂಗ್ ಆಯಪ್ ಮೂಲಕ ಪರಿಚಯವಾದ ವ್ಯಕ್ತಿಯನ್ನು ಮನೆಗೆ ಕರೆಸಿಕೊಂಡ ಯುವಕನಿಗೆ ಚಾಕು ತೋರಿಸಿ ಬೆದರಿಸಿ, 226 …

Leave a Reply

Your email address will not be published. Required fields are marked *