ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾಗಿರುವ ಸರಣಿ ಕೊಲೆಗಳು, ಅತ್ಯಾಚಾರ ಕೃತ್ಯಗಳ ತನಿಖೆಯನ್ನು ಆರಂಭಿಸಿರುವ ವಿಶೇಷ ತನಿಖಾ ದಳ(ಎಸ್‌ಐಟಿ) ದೂರು ನೀಡಿರುವ ಅನಾಮೇಧಯ ವ್ಯಕ್ತಿಯನ್ನು ವಿಚಾರಣೆಗೊಳಪಡಿಸಿದ್ದು, ಸ್ಥಳ ಮಹಜರಿಗೆ ಸಿದ್ಧತೆ ಮಾಡಿಕೊಂಡಿದೆ.ಜಾಗದ ಪರಿಶೀಲನೆ ಬಳಿಕ ಆ ಜಾಗದ ಮಣ್ಣಿನ ಎಫ್‍ಎಸ್‍ಎಲ್ ಪರೀಕ್ಷೆ ಕೂಡ ನಡೆಯಲಿದೆ. ಅನಾಮಿಕ ಕೊಟ್ಟ ಬುರುಡೆಯಲ್ಲಿರೋ ಮಣ್ಣಿನ ಕಣ ಮತ್ತು ಧರ್ಮಸ್ಥಳ ಗ್ರಾಮದಲ್ಲಿ ಅನಾಮಿಕ ತೋರಿಸುವ ಜಾಗದ ಮಣ್ಣಿನ ಪರೀಕ್ಷೆ ನಡೆಯಲಿದ್ದು, ಎರಡೂ ಮಣ್ಣಿನ ಕಣಗಳನ್ನು ಮ್ಯಾಚ್ ಮಾಡಿ ನೋಡಿ ಬಳಿಕ ಬುರುಡೆ ಧರ್ಮಸ್ಥಳ ಗ್ರಾಮದಲ್ಲೇ ತೆಗೆದಿದ್ದ ಅನ್ನೋದನ್ನ ಖಚಿತ ಪಡಿಸಿಕೊಳ್ಳಲು ಎಸ್‍ಐಟಿ ಮುಂದಾಗಿದೆ. ಎಸ್ ಐ ಟಿ ಅಧಿಕಾರಿಗಳು ಅನಾಮಿಕನನ್ನು ವಿಚಾರಣೆಗೆ ಒಳಪಡಿಸಿದ್ದು, ನಾನಾ ಪ್ರಶ್ನೆಗಳಿಗೆ ಉತ್ತರ ಪಡೆಯುತ್ತಿದ್ದಾರೆ. ಅನಾಮಿಕ ಹೇಳಿಕೆಯನ್ನ ಇನ್ ಕ್ಯಾಮೆರಾದಲ್ಲಿ ದಾಖಿಸಲಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

