ಹೆಂಡತಿಯನ್ನು ಈ ಸ್ವಾಮೀಜಿ ತನ್ನ ಕಡೆಗೆ ವಶೀಕರಣ ಮಾಡಿಕೊಂಡು, ನನಗೆ ಡಿವೋರ್ಸ್ ಕೊಡುವಂತೆ ಮಾಡಿದ್ದಾನೆ. ತನ್ನ ಕುಟುಂಬ ಹಾಳಾಗಲು ಈ ಸ್ವಯಂ ಘೋಷಿತ ದೇವಮಾನವನೇ ಕಾರಣವೆಂದು ಆತನನ್ನು ಕಿಡ್ನಾಪ್ ಮಾಡಿ ಕೊಲೆ ಮಾಡಿದ ಘಟನೆ ನಡೆದಿದೆ.ಪೊಲೀಸರು ಹೆದ್ದಾರಿ ಬಳಿ ನಿಂತುಕೊಂಡಿದ್ದಾಗ ಅತಿವೇಗದಲ್ಲಿ ಬಂದ ಸ್ವಿಫ್ಟ್ ಡಿಸೈರ್ ಕಾರನ್ನು ಪೊಲೀಸರು ನಿಲ್ಲಿಸಲು ಹೇಳಿದ್ದಾರೆ. ಆದರೆ, ತುಂಬಾ ವೇಗವಾಗಿ ಹೋಗುತ್ತಿದ್ದ ಕಾರನ್ನು ಪೊಲೀಸರು ಬೆನ್ನಟ್ಟಿಕೊಂಡು ಹೋಗಿ ನಿರ್ಜನ ಪ್ರದೇಶದಲ್ಲಿ ಕಾರಿನಲ್ಲಿದ್ದವರ ಮೇಲೆ ಗುಂಡು ಹಾರಿಸಿ ನಿಲ್ಲಿಸಿದ್ದಾರೆ. ನಂತರ ಕಾರನ್ನು ತೆಗೆದು ಪರಿಶೀಲನೆ ನಡೆಸಿದಾಗ ಕಾರಿನಲ್ಲಿ ಕೇಸರಿ ಬಟ್ಟೆ ಮತ್ತು ಆಯುಧಗಳು ಪತ್ತೆಯಾಗಿವೆ. ಇದನ್ನು ಆಧರಿಸಿ ಸ್ವಯಂಘೋಷಿತ ದೇವಮಾನವನ ಕೊಲೆ ಪ್ರಕರಣದಲ್ಲಿ ಕಾರಿನಲ್ಲಿದ್ದ 5 ಜನ ಆರೋಪಿಗಳನ್ನು ಬಂಧಿಸಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

