ಹುಬ್ಬಳ್ಳಿ–ಧಾರವಾಡದಲ್ಲಿ ಗಾಂಜಾ ಪೆಡ್ಲರ್‌ಗಳಿಗೆ ಖಾಕಿ ಸಿಂಹಸ್ವಪ್ನ; ಎರಡು ಕಡೆ ಏಕಕಾಲಕ್ಕೆ ಪೊಲೀಸ್ ಬೇಟೆ, 6 ಮಂದಿ ಅಂದರ್.. ಗಾಂಜಾ ದಂಧೆಗೆ ಖಾಕಿ ಏಟು!
ಅವಳಿ ನಗರದಲ್ಲಿ ಗಾಂಜಾ ಪೆಡ್ಲರ್‌ಗಳ ಬೇಟೆ ಶುರು.. ಖಾಕಿ ಪಡೆ ಫುಲ್ ಆ್ಯಕ್ಷನ್..!
ಗುಡಿಹಾಳ ರೋಡ್‌ನಿಂದ ಧಾರವಾಡ ಟೋಲ್‌ನಾಕಾವರೆಗೆ ಪೊಲೀಸ್ ದಾಳಿ; 6 ಮಂದಿ ಪೆಡ್ಲರ್‌ಗಳು ವಶಕ್ಕೆ, 491 ಗ್ರಾಂ ಗಾಂಜಾ ಜಪ್ತಿ.. ಮತ್ತೊಬ್ಬ ಆರೋಪಿಗಾಗಿ ಬಲೆ ಬೀಸಿದ ಖಾಕಿ ಪಡೆ..!!

ಹುಬ್ಬಳ್ಳಿ–ಧಾರವಾಡ: ವಾಣಿಜ್ಯ ನಗರಿ ಹುಬ್ಬಳ್ಳಿ ಹಾಗೂ ವಿದ್ಯಾನಗರಿ ಧಾರವಾಡದಲ್ಲಿ ಗಾಂಜಾ ಮಾರಾಟದ ದಂಧೆ ಮತ್ತೆ ಸದ್ದು ಮಾಡಿದೆ. ಸಾರ್ವಜನಿಕ ಸ್ಥಳಗಳನ್ನೇ ಅಕ್ರಮ ಗಾಂಜಾ ಮಾರಾಟದ ತಾಣವನ್ನಾಗಿ ಮಾಡಿಕೊಂಡಿದ್ದ ಪೆಡ್ಲರ್‌ಗಳಿಗೆ ಇದೀಗ ಪೊಲೀಸರ ಬಿಸಿ ತಟ್ಟಿದೆ…
ಹಳೇಹುಬ್ಬಳ್ಳಿಯ ಗುಡಿಹಾಳ ರೋಡ್ ಹಾಗೂ ಧಾರವಾಡದ ಟೋಲ್‌ನಾಕಾ ಬಳಿ ಗಾಂಜಾ ಮಾರಾಟ ನಡೆಯುತ್ತಿರುವ ಮಾಹಿತಿ ಆಧರಿಸಿ ಹಳೇಹುಬ್ಬಳ್ಳಿ ಪೊಲೀಸ್ ಠಾಣೆ ಹಾಗೂ ಸಿಸಿಬಿ ವಿಭಾಗದ ತಂಡಗಳು ಪ್ರತ್ಯೇಕ ಕಾರ್ಯಾಚರಣೆ ನಡೆಸಿವೆ. ಎರಡು ಕಡೆ ನಡೆದ ದಾಳಿಯಲ್ಲಿ ಒಟ್ಟು ಆರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ…
ಗುಡಿಹಾಳ ರೋಡ್‌ನಲ್ಲಿ ಇನ್ಸ್‌ಪೆಕ್ಟರ್ ನೇತೃತ್ವದ ಪಿಎಸ್‌ಐ ತಂಡದ ಕಾರ್ಯಾಚರಣೆ!
ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ನೇತೃತ್ವದಲ್ಲಿ ಪಿಎಸ್‌ಐ ಹಾಗೂ ಸಿಬ್ಬಂದಿಗಳ ತಂಡ ಗುಡಿಹಾಳ ರೋಡ್ ಬಳಿ ದಾಳಿ ನಡೆಸಿದೆ. ಗಾಂಜಾ ಮಾರಾಟದಲ್ಲಿ ತೊಡಗಿದ್ದ ನಾಲ್ವರನ್ನು ವಶಕ್ಕೆ ಪಡೆದು, 316 ಗ್ರಾಂ ಗಾಂಜಾ ಜಪ್ತಿ ಮಾಡಲಾಗಿದೆ. ಇದರ ಅಂದಾಜು ಮೌಲ್ಯ ₹15,800. ಆದರೆ ಈ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿ ಪೊಲೀಸರ ಕೈಗೆ ಸಿಗದೆ ಪರಾರಿಯಾಗಿದ್ದು, ಆತನಿಗಾಗಿ ಹುಡುಕಾಟ ಮುಂದುವರಿದಿದೆ…
ಟೋಲ್‌ನಾಕಾದಲ್ಲಿ ಸಿಸಿಬಿ ತಂಡದ ದಾಳಿ!
ಇನ್ನೊಂದೆಡೆ, ಧಾರವಾಡ ಟೋಲ್‌ನಾಕಾ ಬಳಿ ಸಾರ್ವಜನಿಕ ರಸ್ತೆಯ ಬದಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಸಿಸಿಬಿ ವಿಭಾಗದ ಪಿಐ ರಮೇಶ್ ಕಾಂಬಳೆ ನೇತೃತ್ವದ ತಂಡ ವಶಕ್ಕೆ ಪಡೆದಿದೆ. ಆರೋಪಿಗಳಿಂದ 175 ಗ್ರಾಂ ಗಾಂಜಾ, ಎರಡು ಮೊಬೈಲ್ ಫೋನ್‌ಗಳು ಹಾಗೂ ₹3,010 ನಗದು ಹಣವನ್ನು ಜಪ್ತಿ ಮಾಡಲಾಗಿದೆ. ವಶಪಡಿಸಿಕೊಂಡ ಗಾಂಜಾದ ಅಂದಾಜು ಮೌಲ್ಯ ₹15,360…
ಎರಡೂ ಕಾರ್ಯಾಚರಣೆಗಳಲ್ಲಿ ಒಟ್ಟು 491 ಗ್ರಾಂ ಗಾಂಜಾ, ಎರಡು ಮೊಬೈಲ್‌ಗಳು ಹಾಗೂ ₹3,010 ನಗದು ಹಣ ಪೊಲೀಸರ ವಶವಾಗಿದೆ. ಈ ಸಂಬಂಧ ಹಳೇಹುಬ್ಬಳ್ಳಿ ಮತ್ತು ವಿದ್ಯಾಗಿರಿ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ…
ಆದರೆ ಇಲ್ಲೊಂದು ಪ್ರಮುಖ ಪ್ರಶ್ನೆ ಇದೆ..!
ಅವಳಿ ನಗರದಲ್ಲಿ ಗಾಂಜಾ ಮಾರಾಟಕ್ಕೆ ಕಡಿವಾಣ ಹಾಕಲು ಪೊಲೀಸರು ದಾಳಿ ನಡೆಸುತ್ತಿದ್ದಾರೆ. ಪೆಡ್ಲರ್‌ಗಳು ಸಿಕ್ಕಿಬೀಳುತ್ತಿದ್ದಾರೆ. ಆದರೆ ಇವರಿಗೆ ಗಾಂಜಾ ಪೂರೈಕೆ ಮಾಡುತ್ತಿರುವವರು ಯಾರು? ಈ ದಂಧೆಯ ಹಿಂದಿರುವ ದೊಡ್ಡ ಜಾಲ ಯಾವುದು? ಯುವಕರನ್ನು ಮಾದಕ ವ್ಯಸನದತ್ತ ತಳ್ಳುತ್ತಿರುವ ಮೂಲ ಪೂರೈಕೆದಾರರ ಹೆಡೆಮುರಿ ಕಟ್ಟುವುದು ಯಾವಾಗ…?
ಪೆಡ್ಲರ್‌ಗಳ ಬಂಧನದ ಜೊತೆಗೆ ಗಾಂಜಾ ಪೂರೈಕೆಯ ಮೂಲ ಜಾಲವನ್ನೂ ಪತ್ತೆಹಚ್ಚಿದಾಗ ಮಾತ್ರ ಅವಳಿ ನಗರವನ್ನು ಮಾದಕ ದ್ರವ್ಯ ದಂಧೆಯಿಂದ ಮುಕ್ತಗೊಳಿಸಲು ಸಾಧ್ಯ….
bigtvnews | Hubli Dharwad News | Kannada News | Karnataka News Hubli News | News In Hubli | Local news
