Breaking News

ಮಾದಕ ವಸ್ತು ಸಹಿತ ಓರ್ವ ಬಂಧನ

ಪಾಣೆಮಂಗಳೂರು ಶ್ಮಶಾನ ರಸ್ತೆಯ ಬಳಿ ಅನುಮಾನಾಸ್ಪದವಾಗಿ ನಿಲ್ಲಿಸಿದ್ದ ಆಟೋದಲ್ಲಿ ಮಾದಕ ವಸ್ತು (ಎಂ.ಡಿ.ಎಂ.ಎ) ಇರಿಸಿಕೊಂಡಿದ್ದ ಓರ್ವ ವ್ಯಕ್ತಿಯನ್ನು ಬಂಟ್ವಾಳ ನಗರ ಪೊಲೀಸರು ಬಂಧಿಸಿದ್ದಾರೆ.ಬಂಧಿತನನ್ನು ರಿಕ್ಷಾ ಚಾಲಕ ಮೊಹಮ್ಮದ್ ಇಮ್ತಿಯಾಜ್(40) ಎಂದು ಗುರುತಿಸಲಾಗಿದೆ.ಪಾಣೆಮಂಗಳೂರು ಶ್ಮಶಾನದ ಪಕ್ಕದಲ್ಲಿ ನಿಲ್ಲಿಸಿದ್ದ ಕೆಎ-19-ಡಿ-1806 ನೇ ನಂಬರಿನ ಆಟೋ ರಿಕ್ಷಾದ ಚಾಲಕ ಸೀಟಿನಲ್ಲಿ ಸಂಶಯಾಸ್ಪದವಾಗಿ ಕುಳಿತಿದ್ದ ವ್ಯಕ್ತಿಯನ್ನು ವಿಚಾರಿಸಿದಾಗ, ಕೃತ್ಯ ಬೆಳಕಿಗೆ ಬಂದಿದೆ.
ಪೊಲೀಸ್ ವಿಚಾರಣೆ ವೇಳೆ ಆತ, ತನ್ನ ಬಳಿ ಎಂ.ಡಿ.ಎಂ.ಎ ಇರುವುದಾಗಿ ಹಾಗೂ ಅದನ್ನು ಸೇವಿಸಲು ಸ್ಥಳಕ್ಕೆ ಬಂದಿರುವುದಾಗಿ ಹೇಳಿದ್ದಾನೆ. ಪೊಲೀಸರಿಗೆ 0.760 ಗ್ರಾಂ (760 ಮಿಲಿಗ್ರಾಂ) ಪ್ರಮಾಣದ ಎಂ.ಡಿ.ಎಂ.ಎ ಸಿಕ್ಕಿದ್ದು, ಅದರ ಒಂದು ಸಾವಿರ ರೂ.ಎಂದು ತಿಳಿಸಲಾಗಿದೆ.ಈ ಕುರಿತು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

Share News

About bigtvnews22

Check Also

ಅತ್ಯಾಚಾರ ಎಸೆಗಿದವರ ಮೇಲೆ‌ ಪ್ರತೀಕಾರ – ಅಪಹರಣ ಮಾಡಿ ಸಿಕ್ಕಿಬಿದ್ದ ಆರೋಪಿಗಳು!

ಬೆಂಗಳೂರು: ಮಾರತ್ತಹಳ್ಳಿಯಲ್ಲಿ ಸ್ನೇಹಿತನ ಪ್ರೇಯಸಿಯನ್ನು ಕಾಲ್‌ಗರ್ಲ್ ಎಂದು ತಪ್ಪಾಗಿ ಭಾವಿಸಿ ಅತ್ಯಾಚಾರ ಎಸಗಿದ ಆರೋಪದ ಹಿನ್ನೆಲೆಯಲ್ಲಿ, ಪ್ರತೀಕಾರಕ್ಕಾಗಿ ಇಬ್ಬರನ್ನು ಅಪಹರಿಸಿ …

Leave a Reply

Your email address will not be published. Required fields are marked *