Breaking News

1.8 ಲಕ್ಷ ರೂ. ಮೊಬೈಲ್ ಫೋನ್ ಬುಕ್ ಮಾಡಿದ್ದ ಗ್ರಾಹಕನಿಗೆ ಶಾಕ್: ಬಾಕ್ಸ್ ನಲ್ಲಿತ್ತು ಚೌಕಾಕಾರದ ಕಲ್ಲು..!

ವ್ಯಕ್ತಿಯೊಬ್ಬರು ಅಮೆಜಾನ್ ನಲ್ಲಿ ಸ್ಯಾಮ್ಸಂಗ್ ಮೊಬೈಲ್ ಫೋನ್ ಮಾಡಿದ್ದು, ಅವರಿಗೆ ಡೆಲಿವರಿ ಆಗಿದ್ದ ಬಾಕ್ಸ್ ತೆಗೆದು ನೋಡಿದಾಗ ಕಲ್ಲು ಕಂಡು ಬಂದಿದೆ.ಗ್ರಾಹಕ ಅಕ್ಟೋಬರ್ 14ರಂದು ಅಮೆಜಾನ್ ಮೂಲಕ ಆನ್ಲೈನ್ ನಲ್ಲಿ 1.8 ಲಕ್ಷ ರೂಪಾಯಿ ಮೌಲ್ಯದ ಸ್ಯಾಮ್ಸಂಗ್ ಗ್ಯಾಲಕ್ಸಿ ಜೆಡ್ ಫೋಲ್ಡ್ -7 ಮೊಬೈಲ್ ಫೋನ್ ಬುಕ್ ಮಾಡಿದ್ದಾರೆ.ಅದಕ್ಕೆ ಟ್ರ್ಯಾಕಿಂಗ್ ಐಡಿ ಕೂಡ ಬಂದಿದೆ. ಅಕ್ಟೋಬರ್ 19ರಂದು ರಾತ್ರಿ 8 ಗಂಟೆಗೆ ಪ್ಯಾಕೇಜ್ ಡೆಲಿವರಿ ಆಗಿದೆ. ವಿಡಿಯೋ ಮಾಡುವ ಮೂಲಕ ಅದನ್ನು ಗ್ರಾಹಕರು ಓಪನ್ ಮಾಡಿದ್ದು, ಅದರಲ್ಲಿ ಮೊಬೈಲ್ ಫೋನ್ ಬದಲಿಗೆ ಒಂದು ಚೌಕಾಕಾರದ ಕಲ್ಲು ಇರುವುದು ಕಂಡು ಬಂದಿದೆ.ಮೋಸ ಹೋಗಿರುವುದನ್ನು ಅರಿತ ಗ್ರಾಹಕ ಎನ್.ಸಿ.ಆರ್.ಪಿ. ಪೋರ್ಟಲ್ ನಲ್ಲಿ ದೂರು ದಾಖಲಿಸಿದ್ದು, ನಂತರ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಗೆ ಹಾಜರಾಗಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Share News

About BigTv News

Check Also

ಅತ್ಯಾಚಾರ ಎಸೆಗಿದವರ ಮೇಲೆ‌ ಪ್ರತೀಕಾರ – ಅಪಹರಣ ಮಾಡಿ ಸಿಕ್ಕಿಬಿದ್ದ ಆರೋಪಿಗಳು!

ಬೆಂಗಳೂರು: ಮಾರತ್ತಹಳ್ಳಿಯಲ್ಲಿ ಸ್ನೇಹಿತನ ಪ್ರೇಯಸಿಯನ್ನು ಕಾಲ್‌ಗರ್ಲ್ ಎಂದು ತಪ್ಪಾಗಿ ಭಾವಿಸಿ ಅತ್ಯಾಚಾರ ಎಸಗಿದ ಆರೋಪದ ಹಿನ್ನೆಲೆಯಲ್ಲಿ, ಪ್ರತೀಕಾರಕ್ಕಾಗಿ ಇಬ್ಬರನ್ನು ಅಪಹರಿಸಿ …

Leave a Reply

Your email address will not be published. Required fields are marked *