ಹುಬ್ಬಳ್ಳಿ:ಕಬ್ಬು ಬೆಳೆಗಾರರ ಹೋರಾಟದ ಕಿಚ್ಚು ತಾತ್ಕಾಲಿಕ ಮಾತ್ರ ಶಮನವಾಗಿದೆ. ಮತ್ತೆ ಯಾವಾಗ ಬೇಕಾದ್ರು ಹೋರಾಟ ಹೆಚ್ಚಾಗಬಹುದು ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು. ಹುಬ್ಬಳ್ಳಿಯಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ನಿರ್ಲಕ್ಷದಿಂದ ಇಂತಹ ಸಮಸ್ಯೆ ನಿರ್ಮಾಣವಾಗಿದೆ. ಯಾವ ಸಂದರ್ಭದಲ್ಲಿ ಏನು ಮಾಡಬೇಕೋ ಅದನ್ನು ಮಾಡಿಲ್ಲ. ಸಕ್ಕರೆ ಮಂತ್ರಿಗಳಿಗೆ ಎಲ್ಲಾ ಗೊತ್ತಿರುತ್ತದೆ. ನಾನು ಸಕ್ಕರೆ ಮಂತ್ರಿ, ಮುಖ್ಯಮಂತ್ರಿ ಇದ್ದಾಗ ಕೆಲಸ ಮಾಡಿದ್ದೇನೆ ಎಂದರು. ರೈತರು, ಕಾರ್ಖಾನೆ ಮಾಲೀಕರನ್ನ ಕರೆಯಿಸಿ ಸಭೆ ಮಾಡ್ತಿದ್ದೆ. ರೈತರ ಹೋರಾಟ ನಡೆದು 8 ದಿನಕ್ಕೆ ಮುಖ್ಯಮಂತ್ರಿ ಸಭೆ ಮಾಡ್ತಾರೆ. ಅಲ್ಲಿಂದಲೇ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಸರ್ಕಾರದ ನಿರ್ಧಾರಕ್ಕೆ ರೈತರು ಇನ್ನೂ ಸಂಪೂರ್ಣವಾಗಿ ಒಪ್ಪಿಲ್ಲ. ಒಂದೊಂದು ಕಡೆ ಒಂದೊಂದು ದರ ಇರುತ್ತದೆ. ಪರಿಸ್ಥಿತಿ ತಿಳಿದುಕೊಂಡು ನಿರ್ಧಾರ ಕೈಗೊಳ್ಳಬೇಕಿತ್ತು. ತರಾತುರಿಯಲ್ಲಿ ನಿರ್ಧಾರ ಮಾಡಿದ್ದಾರೆ. ಇನ್ನೂ ಲಿಖಿತ ಆದೇಶ ಆಗಿಲ್ಲ. ಕಾರ್ಖಾನೆ ಮಾಲೀಕರು ದುಡ್ಡು ಕೊಡದೆ ಹೋದ್ರೆ, ನೀವು ವಸೂಲಿ ಮಾಡಿ ಕೊಡ್ತೀರಾ.? ಎಂದು ಪ್ರಶ್ನಿಸಿದರು. ಕೇಂದ್ರ ಸರ್ಕಾರದ ಪಾತ್ರ ಇದೆ, ಅಲ್ಲಿ ನಾವೆಲ್ಲಾ ಕೂಡಿ ಒತ್ತಾಯ ಮಾಡೋಣ. ಆದರೆ ಎಲ್ಲವನ್ನೂ ಕೇಂದ್ರದ ಮೇಲೆ ಹಾಕೋದು ಎಷ್ಟು ಸರಿ? ಈಗ ಹತ್ತಿದ ಬೆಂಕಿ ತಾತ್ಕಾಲಿಕ ಶಮನ ಅಷ್ಟೇ. ಪ್ರತಿ ವರ್ಷ ಇದೆ ಸಮಸ್ಯೆ ಆಗಬಾರದು. ಶಾಶ್ವತ ಪರಿಹಾರ ಆಗಬೇಕು. ಶುಗರ್ ಇಲಾಖೆಗೆ ಬಜೆಟ್ ಕಡಿಮೆ ಕೊಟ್ಟಿದ್ದಾರೆ. 8-10 ಸಿಬ್ಬಂದಿ ಇಟ್ಟುಕೊಂಡು ಹೇಗೆ ಕೆಲಸ ಮಾಡುತ್ತಾರೆ ಎಂದರು. ಇಳುವರಿ ಶುಗರ್ ಫ್ಯಾಕ್ಟರಿ ಮಾಲೀಕರು ಚೆಕ್ ಮಾಡ್ತಾರೆ, ಸರ್ಕಾರ ಏನಾದರೂ ಮಾಡಬೇಕಲ್ಲ. ಬಹಳಷ್ಟು ಗೊಂದಲ ಇರುವ ಇಲಾಖೆ, ಇದರಿಂದ ತೊಂದರೆ ಆಗಿದೆ ರೈತರಿಗೆ ಯೋಗ್ಯ ದರ ಸಿಗುವ ಕೆಲಸ ಆಗಬೇಕು ಹುಬ್ಬಳ್ಳಿಯಲ್ಲಿ ಜಗದೀಶ್ ಶೆಟ್ಟರ ಹೇಳಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

