Breaking News

ಪತಿಯ ಕಿರುಕುಳ, ಹಿಂಸೆಗೆ ನೊಂದು ಪತ್ನಿ ಆತ್ಮಹತ್ಯೆ

25 ವರ್ಷದ ರೇಖಾ ಮಾಯಪ್ಪ ನಂದಿ ಮೃತ ಮಹಿಳೆ. ಪತಿ ಮಾಯಪ್ಪ ರೇಖಾಳಿಗೆ ನಿರಂತರ ಹಿಂಸೆ ನೀಡುತ್ತಿದ್ದಂತೆ ವರದಕ್ಷಿಣೆ ತರುವಂತೆ ಹೊಡೆಯುತ್ತಿದ್ದನಂತೆ.ದಂಪತಿಗೆ ಇಬ್ಬರು ಮಕ್ಕಳಿದ್ದರು. ಆದರೂ ಕಿರುಕುಳ, ಹಿಂಸೆ ಮಾತ್ರ ನಿಂತಿರಲಿಲ್ಲ. ಇದರಿಂದ ಬೇಸತ್ತ ರೇಖಾ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಪತಿ ಮಾಯಪ್ಪಜಿಬಿಎಯಲ್ಲಿ ಮಾರ್ಷಲ್ ಆಗಿ ಕೆಲಸ ಮಾಡುತ್ತಿದ್ದ. ಪ್ರತಿದಿನ ಪತ್ನಿಯೊಂದಿಗೆ ಜಗಳವಾಡುವುದು, ಮನಬಂದಂತೆ ಹೊಡೆಯುವುದು ಮಾಡುತ್ತಿದ್ದನಂತೆ. ನಾಲ್ಕು ವರ್ಷದ ಮಗು ಅಪ್ಪ, ಅಮ್ಮನಿಗೆ ಹೊಡೆಯುತ್ತಿರುವುದಾಗಿ ಕಣ್ಣೀರಿಟ್ಟಿದೆ. ಪತಿ ಚಿತ್ರಹಿಂಸೆಗೆ ನೊಂದು ರೇಖಾ ಆತ್ಮಹತ್ಯೆಗೆ ಶರಣಾಗಿದ್ದು, ಘಟನೆ ಬೆನ್ನಲ್ಲೇ ಮಾಯಪ್ಪ ನಾಪತ್ತೆಯಾಗಿದ್ದಾನೆ.

Share News

About BigTv News

Check Also

ಅತ್ಯಾಚಾರ ಎಸೆಗಿದವರ ಮೇಲೆ‌ ಪ್ರತೀಕಾರ – ಅಪಹರಣ ಮಾಡಿ ಸಿಕ್ಕಿಬಿದ್ದ ಆರೋಪಿಗಳು!

ಬೆಂಗಳೂರು: ಮಾರತ್ತಹಳ್ಳಿಯಲ್ಲಿ ಸ್ನೇಹಿತನ ಪ್ರೇಯಸಿಯನ್ನು ಕಾಲ್‌ಗರ್ಲ್ ಎಂದು ತಪ್ಪಾಗಿ ಭಾವಿಸಿ ಅತ್ಯಾಚಾರ ಎಸಗಿದ ಆರೋಪದ ಹಿನ್ನೆಲೆಯಲ್ಲಿ, ಪ್ರತೀಕಾರಕ್ಕಾಗಿ ಇಬ್ಬರನ್ನು ಅಪಹರಿಸಿ …

Leave a Reply

Your email address will not be published. Required fields are marked *